CinemaLatest

ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಕೋರ್ಟ್ ಅಸ್ತು

ಚೆನ್ನೈ: ನಟಿ ಅಮಲಾ ಪೌಲ್ ಹಾಗೂ ನಿರ್ದೇಶಕ ಎ.ಎಲ್.ವಿಜಯ್ ಡೈವೋರ್ಸ್ ಗೆ ಅಧಿಕೃತ ಮುದ್ರೆ ಬಿದ್ದಿದೆ. ಮಂಗಳವಾರ ಚೆನ್ನೈನ ಕೌಟುಂಬಿಕ ನ್ಯಾಯಾಲಯ ನಟಿ ಅಮಲಾ ಪೌಲ್ – ವಿಜಯ್ ವಿಚ್ಛೇದನಕ್ಕೆ ಅಸ್ತು ಎಂದಿದೆ. ಈ ಮೂಲಕ ಅಮಲಾ ಪೌಲ್ ಹಾಗೂ ವಿಜಯ್ ಅವರ ಎರಡೂವರೆ ವರ್ಷದ ದಾಂಪತ್ಯ ಕೊನೆಯಾಗಿದೆ.

4 ವರ್ಷಗಳ ಕಾಲ ಪ್ರೀತಿಸಿದ್ದ ಅಮಲಾ-ವಿಜಯ್ ಜೋಡಿ 2014ರ ಜೂನ್ 12ರಂದು ಮದುವೆಯಾಗಿದ್ದರು. ಆದರೆ ಮದುವೆಯಾದ ಬಳಿಕ ವಿಜಯ್ ಕುಟುಂಬದವರು ಸಿನೆಮಾ ನಟನೆಯನ್ನು ತಡೆಯಲು ಮುಂದಾದರು ಎಂಬ ಕಾರಣಕ್ಕೆ ಅಮಲಾ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು ಎನ್ನಲಾಗಿತ್ತು. ಆದರೆ ಈ ಅರೋಪವನ್ನು ವಿಜಯ್ ತಳ್ಳಿ ಹಾಕಿದ್ದರು.

ಕನ್ನಡದ ಹೆಬ್ಬುಲಿ ಸಿನೆಮಾದಲ್ಲೂ ಅಮಲಾ ಪೌಲ್ ನಟಿಸಿದ್ದಾರೆ. ಇದಲ್ಲದೆ ಅಚ್ಚಾಯನ್, ಸಿಂಡ್ರೆಲ್ಲಾ, ವಾಡಾ ಚೆನ್ನೈ ಮುಂತಾದ ಸಿನೆಮಾಗಳಲ್ಲಿ ಅಮಲಾ ಈಗ ಬ್ಯುಸಿಯಾಗಿದ್ದಾರೆ.

 

Related Articles

Leave a Reply

Your email address will not be published. Required fields are marked *