ಪುತ್ರಿ ರಾಹಾ ಚಿತ್ರರಂಗಕ್ಕೆ ಎಂಟ್ರಿ ಕೊಡ್ತಾರಾ? ಆಲಿಯಾ ಭಟ್ ರಿಯಾಕ್ಷನ್

Public TV
2 Min Read
alia bhatt

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಅವರು ಸದ್ಯ ರಣ್‌ವೀರ್ ಸಿಂಗ್ (Ranveer Singh) ಜೊತೆಗಿನ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಸದ್ಯ ಆಲಿಯಾ ಹೇಳಿರುವ ಹೇಳಿಕೆಯೊಂದು ಸಖತ್ ವೈರಲ್ ಆಗಿದೆ. ನನ್ನಂತೆ ನನ್ನ ಮಗಳು ನಟಿಯಾಗೋದು ಬೇಡ ಎಂದಿದ್ದಾರೆ.

heart of stone alia bhatt 2

ಕರಣ್ ಜೋಹರ್ (Karan Johar) ನಿರ್ದೇಶನದ ರಣ್‌ವೀರ್ ಸಿಂಗ್- ಆಲಿಯಾ ಕಾಂಬೋದಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಜುಲೈ 28ಕ್ಕೆ ತೆರೆಗೆ ಬರೋದಕ್ಕೆ ಸಜ್ಜಾಗಿದೆ. ಟೀಸರ್, ಪ್ರೋಮೋ, ಎಲ್ಲವೂ ಟ್ರೆಂಡಿಗ್‌ನಲ್ಲಿದೆ. ರಣ್‌ವೀರ್-ಆಲಿಯಾ ಕೆಮಿಸ್ಟ್ರಿಗೆ ಫ್ಯಾನ್ಸ್ ಈಗಾಗಲೇ ಫಿದಾ ಆಗಿದ್ದಾರೆ. ಇದೆಲ್ಲದರ ನಡುವೆ ಆಲಿಯಾ ಭಟ್, ನನ್ನ ಮಗಳು ನಟನೆಗೆ ಬರೋದು ಬೇಡ ಎಂದಿದ್ದಾರೆ. ಇದನ್ನೂ ಓದಿ:ಮೋಹನ್ ಲಾಲ್-ನಂದಕಿಶೋರ್ ಚಿತ್ರಕ್ಕೆ ಚಾಲನೆ: ಇದು ಪ್ಯಾನ್ ಇಂಡಿಯಾ ಸಿನಿಮಾ

alia bhatt

ರಣ್‌ಬೀರ್ ಕಪೂರ್- ಆಲಿಯಾ ಭಟ್ ಹಲವು ವರ್ಷಗಳು ಪ್ರೀತಿಸಿ 2022ರಲ್ಲಿ ಹಸೆಮಣೆ ಏರಿದ್ದರು. ಬಳಿಕ ಮುದ್ದು ಮಗಳು ರಾಹಾ ಆಗಮನವಾಯ್ತು. ಕ್ಯಾಮೆರಾ ಕಣ್ಣಿಗೆ ತೋರಿಸದೇ ರಾಹಾಳನ್ನ(Raha) ಆಲಿಯಾ ದಂಪತಿ ನೋಡಿಕೊಳ್ಳುತ್ತಿದ್ದಾರೆ. ಪ್ರತಿ ಮಗುವಿನ ತಂದೆ ತಾಯಿಗೂ ತಮ್ಮ ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳಿರುತ್ತವೆ. ನಾನು ಸಾಧಿಸದ್ದನ್ನು ನಮ್ಮ ಮಕ್ಕಳು ಸಾಧಿಸಬೇಕು ಎನ್ನುವ ಹಂಬಲ ಇರುತ್ತದೆ. ಇದಕ್ಕಾಗಿ ಸಾಕಷ್ಟು ಪರಿಶ್ರಮ ಪಡುತ್ತಾರೆ. ಹೀಗಿರುವಾಗ ಮಗಳ ಬಗೆಗಿನ ಕನಸಿನ ಬಗ್ಗೆ ಮಾತನಾಡಿದ್ದಾರೆ.

ಆಲಿಯಾ ಭಟ್, ತಮ್ಮ 8 ತಿಂಗಳ ಮಗಳು ರಾಹಾಳನ್ನು ವಿಜ್ಞಾನಿಯಾಗಿ ನೋಡಬೇಕು ಎನ್ನುವ ಇಂಗಿತ ವ್ಯಕ್ತಪಡಿಸಿದ್ದಾರೆ. ನಾನು ನನ್ನ ಮಗಳನ್ನು ನೋಡಿದಾಗಲೆಲ್ಲಾ ನೀನು ವಿಜ್ಞಾನಿ ಆಗುತ್ತೀಯಾ ಎಂದು ಕೇಳುತ್ತೇನೆ. ಯಾಕೆಂದರೆ ನಾನು ವಿಜ್ಞಾನಿ ಆಗಬೇಕು ಎಂದು ಬಯಸಿದ್ದೆ. ಆದರೆ ಅದು ಸಾಧ್ಯವಾಗಲಿಲ್ಲ ಎಂದಿದ್ದಾರೆ. ನಾನು ಸಿನಿ ಇಂಡಸ್ಟ್ರಿಗೆ ಬಂದ ಮೇಲೆ ನನ್ನ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಯಿತು. ನಿದ್ರೆ ಇಲ್ಲದೇ ಹಗಲು ರಾತ್ರಿ ಕೆಲಸ ಮಾಡಿದ್ದು ಇದೆ. ಈಗ ನನಗಂತ ಒಂದು ಕುಟುಂಬ ಇದೆ. ಮಗಳು, ಗಂಡ ಇದ್ದಾರೆ. ಕುಟುಂಬಕ್ಕಾಗಿ ಸಂಪೂರ್ಣ ಸಮಯ ಮೀಸಲಿಡಲು ಬಯಸುತ್ತೇನೆ. ಹಾಗಂತ ಚಿತ್ರರಂಗ ಬಿಡಲ್ಲ. ಎರಡನ್ನೂ ಬ್ಯಾಲೆನ್ಸ್ ಮಾಡುತ್ತೇನೆ ಎಂದು ವಿವರಿಸಿದ್ದಾರೆ. ಆಲಿಯಾ ಮಾತಿಗೆ ಕೆಲವರು ಭೇಷ್ ಎಂದರೆ, ಇನ್ನೂ ಕೆಲವರು ಟೀಕೆ ಮಾಡಿದ್ದಾರೆ.

Share This Article