ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಅವರು ಈಗ ಹಾಲಿವುಡ್‌ಗೆ (Hollywood) ಹಾರಿದ್ದಾರೆ. ಅವರು ನಟಿಸಿರೋ ಮೊದಲ ಸಿನಿಮಾ ಹಾರ್ಟ್ ಆಫ್ ಸ್ಟೋನ್ ರಿಲೀಸ್‌ಗೆ ರೆಡಿಯಿದೆ. ಆಲಿಯಾ ಅವರ ಫಸ್ಟ್ ಲುಕ್ ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ಇದರಲ್ಲಿ ಆಲಿಯಾ ಭಟ್ ಅವರ ಗೆಟಪ್ ಗಮನ ಸೆಳೆಯುತ್ತಿದೆ.
ಕೆರಿಯರ್‌ನ ಪೀಕ್‌ನಲ್ಲಿರುವಾಗಲೇ ರಣ್‌ಬೀರ್ ಕಪೂರ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಆಲಿಯಾ ಭಟ್‌ಗೆ ಈಗಲೂ ಡಿಮ್ಯಾಂಡ್ ಇದೆ. ಮದುವೆಯ ಬಳಿಕ ಪ್ರೆಗ್ನೆಂಟ್ ಆದ ಮೇಲೂ ಹಾಲಿವುಡ್ ಸಿನಿಮಾದ ಶೂಟಿಂಗ್ ಭಾಗವಹಿಸಿದ ತಮ್ಮ ಭಾಗದ ಚಿತ್ರೀಕರಣ ಮುಗಿಸಿಕೊಟ್ಟಿದ್ದರು. ಹಾಲಿವುಡ್ ಖ್ಯಾತ ನಟಿ ಗಾಲ್ ಗಡೋಟ್ (Gal Gadot) ಮುಂದೆ ಆಲಿಯಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಚಿತ್ರದಲ್ಲಿ ಹಿಂದೆಂದೂ ಕಾಣಿಸಿಕೊಂಡಿರದ ಪಾತ್ರದಲ್ಲಿ ಆಲಿಯಾ ನಟಿಸಿದ್ದಾರೆ. ಇದನ್ನೂ ಓದಿ:ಮತ್ತೊಂದು ಗೋಲ್ಡನ್ ಚಾನ್ಸ್ ಗಿಟ್ಟಿಸಿಕೊಂಡ ಶರಣ್ಯ ಶೆಟ್ಟಿ
‘ಹಾರ್ಟ್ ಆಫ್ ಸ್ಟೋನ್’ (Heart Of Stone) ಸಿನಿಮಾದಲ್ಲಿ ಆಲಿಯಾ ಭಟ್ ಅವರು ಕಿಯಾ ಧವನ್ ಎಂಬ ಪಾತ್ರ ಮಾಡಿದ್ದಾರೆ. ಸದ್ಯ ಸಿನಿಮಾದ ಫಸ್ಟ್ ಲುಕ್ ರಿವೀಲ್ ಆಗಿದ್ದು ಆಲಿಯಾ, ತಲೆ ಕೂದಲು ಯಾವುದು? ಧರಿಸಿದ ಕೋಟ್ ಯಾವುದು ಎಂಬ ವ್ಯತ್ಯಾಸವೇ ತಿಳಿಯದ ರೀತಿಯಲ್ಲಿ ಅವರ ಗೆಟಪ್ ಪೋಸ್ಟರ್‌ನಲ್ಲಿದೆ. ಆಲಿಯಾ ಭಟ್ ಲುಕ್ ನೋಡಿ ಅಭಿಮಾನಿಗಳು ಅಚ್ಚರಿಪಟ್ಟಿದ್ದಾರೆ. ಹಾಲಿವುಡ್ ಸಿನಿಮಾಗಳಲ್ಲಿ ನಟಿಸುವ ಅವಕಾಶ ಪಡೆದ ಭಾರತೀಯ ಕಲಾವಿದರ ಸಂಖ್ಯೆ ಬಹಳ ಕಡಿಮೆ. ಇರ್ಫಾನ್ ಖಾನ್, ಡಿಂಪಲ್ ಕಪಾಡಿಯಾ, ದೀಪಿಕಾ ಪಡುಕೋಣೆ, ಐಶ್ವರ್ಯಾ ರೈ, ಪ್ರಿಯಾಂಕಾ ಚೋಪ್ರಾ (Priyanka Chopra) ಸೇರಿದಂತೆ ಕೆಲವೇ ಕೆಲವು ಮಂದಿ ಮಾತ್ರ ಅಂಥ ಚಾನ್ಸ್ ಪಡೆದುಕೊಂಡಿದ್ದರು. ಈಗ ಆಲಿಯಾ ಭಟ್ ಕೂಡ ಹಾಲಿವುಡ್‌ನಲ್ಲಿ ತಮ್ಮ ಛಾಪು ಮೂಡಿಸಲು ರೆಡಿಯಾಗಿದ್ದಾರೆ. ಆಗಸ್ಟ್ 11ಕ್ಕೆ ಒಟಿಟಿಯಲ್ಲಿ ರಿಲೀಸ್ ಆಗಲಿದೆ.
ಆಲಿಯಾ ಭಟ್ ಅವರ ಅಭಿಮಾನಿಗಳಿಗೆ ಈಗ ಬ್ಯಾಕ್ ಟು ಬ್ಯಾಕ್ ಮನರಂಜನೆ ಕಾದಿದೆ. ಜುಲೈ 28ರಂದು ಹಿಂದಿಯಲ್ಲಿ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾ ಬಿಡುಗಡೆ ಆಗಲಿದೆ. ಈ ಸಿನಿಮಾದಲ್ಲಿ ರಣವೀರ್ ಸಿಂಗ್‌ಗೆ(Ranveer Singh) ಆಲಿಯಾ ನಾಯಕಿಯಾಗಿದ್ದಾರೆ. ಈ ಚಿತ್ರಕ್ಕೆ ಕರಣ್ ಜೋಹರ್ (Karan Johar) ನಿರ್ದೇಶನ ಮಾಡಿದ್ದಾರೆ. ಬ್ರಹ್ಮಾಸ್ತ್ರ 2 ಸಿನಿಮಾಗೆ ಸದ್ಯದಲ್ಲೇ ಚಾಲನೆ ಸಿಗಲಿದೆ.