ಬಂಪರ್ ಅವಕಾಶ ಬಾಚಿಕೊಂಡ ಆಲಿಯಾ ಭಟ್

Public TV
1 Min Read
alia bhatt 1

ಬಾಲಿವುಡ್ (Bollywood) ಬ್ಯೂಟಿ ಆಲಿಯಾ ಭಟ್ (Alia Bhatt) ಅವರು ‘ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ’ ಚಿತ್ರದ ಸಕ್ಸಸ್ ನಂತರ ಪ್ರತಿಷ್ಠಿತ ಸಂಸ್ಥೆ ಜೊತೆ ಕೈಜೋಡಿಸಿದ್ದಾರೆ. ಪ್ರತಿಭಾನ್ವಿತ ನಟಿ ಆಲಿಯಾಗೆ ಬಿಗ್ ಪ್ರಾಜೆಕ್ಟ್‌ವೊಂದರಲ್ಲಿ ನಟಿಸುವ ಅವಕಾಶವೊಂದು ಸಿಕ್ಕಿದೆ.

alia bhatt

ಆಲಿಯಾ ಮದುವೆಯಾದ್ಮೇಲೆ ವೈಯಕ್ತಿಕ ಬದುಕಿನಲ್ಲಿ ಬ್ಯುಸಿಯಾಗಿದ್ದರು. ರಾಹಾ ಆರೈಕೆಯಲ್ಲಿ ತೊಡಗಿಸಿಕೊಂಡಿದ್ದರು. ಈಗ ಮತ್ತೆ ಸಿನಿಮಾದತ್ತ ಮುಖ ಮಾಡಿದ್ದಾರೆ. ಪ್ರೆಗ್ನೆಂಟ್ ಇದ್ದಾಗಲೇ ಆಲಿಯಾ ಕೆಲಸದ ಮೇಲಿನ ಬದ್ಧತೆಗೆ ಸಿನಿಮಾ ಕಂಪ್ಲೀಟ್ ಮಾಡಿಕೊಟ್ಟಿದ್ದರು. ಈಗ ಮತ್ತೆ ಹೊಸ ಬಗೆಯ ಕಥೆ, ಪಾತ್ರಕ್ಕೆ ನಟಿ ಆಧ್ಯತೆ ನೀಡುತ್ತಿದ್ದಾರೆ.

alia bhatt 2

ಟೈಗರ್, ವಾರ್, ಪಠಾಣ್ ಚಿತ್ರಗಳನ್ನು ನಿರ್ಮಿಸಿದ ಯಶ್ ರಾಜ್ ಫಿಲ್ಮ್ಸ್ ಸಂಸ್ಥೆ ಜೊತೆ ನಟಿ ಕೈಜೋಡಿಸಿದ್ದಾರೆ. ಬಿಗ್ ಬಜೆಟ್‌ನಲ್ಲಿ ನಿರ್ಮಾಣವಾಗುವ ಸಿನಿಮಾದಲ್ಲಿ ಪ್ರಮುಖ ಪಾತ್ರಧಾರಿ ಆಲಿಯಾ ನಟಿಸುತ್ತಿದ್ದಾರೆ.

alia bhatt

ಸ್ಪೈ ಎಜೆಂಟ್ ಪಾತ್ರದಲ್ಲಿ ಆಲಿಯಾ ಭಟ್ ಕಾಣಿಸಿಕೊಳ್ತಿದ್ದಾರೆ. ಆಲಿಯಾ ಜೊತೆ ಶಾರ್ವರಿ ವಾಘ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಸದ್ಯದಲ್ಲೇ ಚಿತ್ರದ ಶೂಟಿಂಗ್ ಹೆಚ್ಚಿನ ಮಾಹಿತಿ ಸಿಗಲಿದೆ.‌ ಇದನ್ನೂ ಓದಿ:ಅಭಿಮಾನಿಗಳ ನಡೆಗೆ ಮುನಿಸಿಕೊಂಡ ಸಮಂತಾ

ನಟ ರಣ್‌ಬೀರ್ ಕಪೂರ್ ಜೊತೆ ಏಪ್ರಿಲ್ 14ರಂದು ನಟಿ ಆಲಿಯಾ ಮುಂಬೈನ ತಮ್ಮ ನಿವಾಸದಲ್ಲಿ ಮದುವೆಯಾದರು. ಈ ಮದುವೆಯಲ್ಲಿ 2 ಕುಟುಂಬದ ಸದಸ್ಯರು ಮತ್ತು ಆಪ್ತರು ಅಷ್ಟೇ ಭಾಗಿಯಾಗಿದ್ದರು.

Share This Article