ಬಾಲಿವುಡ್ (Bollywood) ನಟಿ ಆಲಿಯಾ ಭಟ್ (Alia Bhatt) ಅವರು ಮದುವೆಯಾಗಿ ಒಂದು ಮಗುವಾಗಿದ್ದರೂ ಕೂಡ ಆಲಿಯಾಗೆ ಇರೋ ಚಾರ್ಮ್ ಕಮ್ಮಿಯಾಗಿಲ್ಲ. ಮಗಳ ಆರೈಕೆ ನಡುವೆ ಮತ್ತೆ ಸಿನಿಮಾಗಳತ್ತ ನಟಿ ಮುಖ ಮಾಡಿದ್ದಾರೆ. ಹೀಗಿರುವಾಗ ಅಕ್ಕನಿಗೆ ಐಷರಾಮಿ ಮನೆ ಗಿಫ್ಟ್ ಕೊಡುವ ಮೂಲಕ ಆಲಿಯಾ ಸುದ್ದಿಯಲ್ಲಿದ್ದಾರೆ. 38 ಕೋಟಿ ರೂಪಾಯಿ ಕೊಟ್ಟು 2 ಮನೆ ಖರೀದಿಸಿದ್ದಾರೆ.
ಕಪೂರ್ ಕುಟುಂಬದ (Kapoor Family) ಸೊಸೆಯಾಗಿ ಆಲಿಯಾ ಭಟ್ ವೈಯಕ್ತಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ನಟನೆಯಲ್ಲಿ ಗಳಿಸಿದ ತನ್ನ ಉಳಿತಾಯದಲ್ಲಿ ಆಲಿಯಾ ಭಟ್ ಅವರು ಮುಂಬೈನ ಬಾಂದ್ರದಲ್ಲಿ ದುಬಾರಿ ಮನೆ ಖರೀದಿ ಮಾಡಿದ್ದಾರೆ. ಇದರ ಬೆಲೆ 37.80 ಕೋಟಿ ರೂಪಾಯಿ. ಮನೆ ಖರೀದಿಸಿ ಸಹೋದರಿ ಶಹೀನ್ ಭಟ್ಗೆ (Shaheen Bhatt) ಅವರು ಉಡುಗೊರೆಯಾಗಿ ನೀಡಿದ್ದಾರೆ ಎಂದು ವರದಿ ಆಗಿದೆ. ಈ ಬಗ್ಗೆ ಆಲಿಯಾ ಭಟ್ ಅವರ ಕಡೆಯಿಂದ ಅಧಿಕೃತ ಮಾಹಿತಿ ಸಿಗಲಿ ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಸಾಮಾನ್ಯವಾಗಿ ಪ್ರಾಪ್ರಟಿ ಖರೀದಿ ಮಾಡಿದ ವಿಚಾರವನ್ನು ಸೆಲೆಬ್ರಿಟಿಗಳು ರಿವೀಲ್ ಮಾಡುವುದಿಲ್ಲ.
ಆಲಿಯಾ ಖರೀದಿಸಿರುವ ಫ್ಲಾಟ್ 2,497 ಚದರ ಅಡಿ ಇದೆ. ಏಪ್ರಿಲ್ 10ರಂದು ಈ ಡೀಲ್ ನಡೆದಿದೆ. ಆಲಿಯಾ ಭಟ್ ಅವರು 2.26 ಕೋಟಿ ರೂಪಾಯಿ ಸ್ಟಾಂಪ್ ಡ್ಯೂಟಿ ಪಾವತಿಸಿದ್ದಾರೆ. ಇನ್ನು ಆಲಿಯಾ ಭಟ್ ಅವರು ಎರಡು ಫ್ಲಾಟ್ಗಳನ್ನು ಶಹೀನ್ ಭಟ್ಗೆ ನೀಡಿದ್ದಾರೆ. ಇದರ ಬೆಲೆ 7.86 ಕೋಟಿ ರೂಪಾಯಿ ಎನ್ನಲಾಗಿದೆ. ಇದಕ್ಕೆ 30 ಲಕ್ಷ ರೂಪಾಯಿ ಸ್ಟಾಂಪ್ಡ್ಯೂಟಿ ಪಾವತಿಸಲಾಗಿದೆ.
ರಣ್ಬೀರ್ ಪತ್ನಿ ಆಲಿಯಾ ಲಿಸ್ಟ್ನಲ್ಲಿ, ‘ಬ್ರಹ್ಮಾಸ್ತ್ರ 2, ಹಾಲಿವುಡ್ನ ’ಹಾರ್ಟ್ ಆಫ್ ಸ್ಟೋನ್’, ರಣ್ವೀರ್ ಸಿಂಗ್ ಜೊತೆ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾಗಳಿವೆ.