ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಮನೆಯಲ್ಲಿ ಸಂಭ್ರಮ ಮನೆ ಮಾಡಿದೆ. ಡಬಲ್ ಸಂಭ್ರಮದ ಖುಷಿಯಲ್ಲಿದ್ದಾರೆ. `ಬ್ರಹ್ಮಾಸ್ತ್ರʼ (Brahmastra) ಸಕ್ಸಸ್ ಬೆನ್ನಲ್ಲೇ ಆಲಿಯಾ ಭಟ್‌ಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ಡೇಟ್ ಫಿಕ್ಸ್ ಆಗಿದೆ.
View this post on Instagram
ಬಾಯ್ಕಾಟ್ ಟ್ರೆಂಡ್ ನಡುವೆ ರಣ್‌ಬೀರ್ ಮತ್ತು ಆಲಿಯಾ ನಟನೆಯ `ಬ್ರಹ್ಮಾಸ್ತ್ರʼ (Bhrahmastra) ಚಿತ್ರ ಗಲ್ಲಾಪೆಟ್ಟಿಗೆಯಲ್ಲಿ ಕೋಟಿ ಕೋಟಿ ಕಲೆಕ್ಷನ್ ಮಾಡಿದೆ. ಮತ್ತೊಂದೆಡೆ ನಟಿಗೆ ಬೇಬಿ ಶವರ್ ಕಾರ್ಯಕ್ರಮ ಮಾಡಲು ತೆರೆ ಮರೆಯಲ್ಲಿ ಭರ್ಜರಿ ತಯಾರಿ ನಡೆಯುತ್ತಿದೆ.
View this post on Instagram
ಇತ್ತೀಚೆಗಷ್ಟೇ ತಾವು ತಾಯಿಯಾಗುತ್ತಿರುವ ವಿಚಾರವನ್ನು ಸೋಷಿಯಲ್ ಮೀಡಿಯಾ ಮೂಲಕ ಅನೌನ್ಸ್ ಮಾಡಿದ್ದರು. ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇನ್ನೂ ಸೆಪ್ಟೆಂಬರ್ ತಿಂಗಳ ಅಂತ್ಯದಲ್ಲಿ ಬೇಬಿ ಶವರ್ ಈವೆಂಟ್ ಮಾಡಲು ಕಪೂರ್ ಕುಟುಂಬ ನಿರ್ಧರಿಸಿದೆ. ಇದನ್ನೂ ಓದಿ:‘ಮದುವೆ’ ನಂತರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟಿವ್ ಆದ ಮಹಾಲಕ್ಷ್ಮಿ ರವೀಂದರ್
ಈ ಕಾರ್ಯಕ್ರಮದಲ್ಲಿ ಕಪೂರ್ ಕುಟುಂಬದ ಜತೆ, ಆಲಿಯಾ ಅವರ ಬಾಲ್ಯದ ಸ್ನೇಹಿತರು ಮತ್ತು ಚಿತ್ರರಂಗದ ಕೆಲ ನಟಿಮಣಿಯರು ಭಾಗವಹಿಸಲಿದ್ದಾರೆ.