ಗಾಯಕನಿಂದಲೇ ನಟಿ ಆಕಾಂಕ್ಷ ಕೊಲೆ : ತಾಯಿಯ ಗಂಭೀರ ಆರೋಪ

Public TV
1 Min Read
akanksha dubey

ನಿನ್ನೆಯಷ್ಟೇ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ಪತ್ತೆಯಾದ  ಭೋಜಪುರಿ ನಟಿ ಆಕಾಂಕ್ಷಾ ದುಬೆ ಆತ್ಮಹತ್ಯೆ ಮಾಡಿಕೊಂಡಿಲ್ಲ, ಅದೊಂದು ವ್ಯವಸ್ಥಿತಿ ಕೊಲೆ ಎಂದು ನಟಿಯ ತಾಯಿ ಆರೋಪ ಮಾಡಿದ್ದಾರೆ. ಗಾಯಕ ಸಮರ್ ಸಿಂಗ್ (Samar Singh) ಹಾಗೂ ಸಂಜಯ್ ಸಿಂಗ್  (Sanjay Singh)ಅವರೇ ತಮ್ಮ ಮಗಳನ್ನು ಕೊಂದಿರುವುದಾಗಿ (Murder) ಗಂಭೀರ ಆರೋಪ ಮಾಡಿದ್ದಾರೆ. ನಿರಂತರವಾಗಿ ಇಬ್ಬರೂ ತಮ್ಮ ಮಗಳಿಗೆ ಬೆದರಿಕೆ ಹಾಕುತ್ತಿದ್ದರು ಎಂದೂ ಹೇಳಿಕೆ ನೀಡಿದ್ದಾರೆ.

ak 1

ಭೋಜಪುರಿ ನಟಿ (Bhojapuri Actress) ಆಕಾಂಕ್ಷಾ ದುಬೆ (Akanksha Dubey) ಅವರು ಭಾನುವಾರದಂದು (ಮಾ.26) ವಾರಣಾಸಿ (Varanasi) ಹೋಟೆಲ್‌ವೊಂದರಲ್ಲಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದರು. ಹೋಟೆಲ್ ಕೋಣೆಯಲ್ಲಿ ನೇಣು ಬಿಗಿದುಕೊಂಡಿರುವ ಸ್ಥಿತಿಯಲ್ಲಿ ನಟಿ ಶವ ಪತ್ತೆಯಾಗಿತ್ತು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಾಕಷ್ಟು ಭೋಜಪುರಿ ಆಲ್ಬಂ ಹಾಡುಗಳಲ್ಲಿ ಆಕಾಂಕ್ಷಾ ಕಾಣಿಸಿಕೊಂಡಿದ್ದಾರೆ. ಕಿರುತೆರೆಯ ಕೆಲವು ಸೀರಿಯಲ್‌ಗಳಲ್ಲಿ ಕೂಡ ಆಕಾಂಕ್ಷಾ ನಟಿಸಿದ್ದಾರೆ. 25 ವರ್ಷದ ಯುವ ನಟಿ ಇದೀಗ ಆತ್ಮಹತ್ಯೆಗೆ ಶರಣಾಗಿರೋದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.

FotoJet 58

ಬೆಳಿಗ್ಗೆ 7:45ಕ್ಕೆ (ಮಾ.26) ಆಕಾಂಕ್ಷಾ ನಟಿಸಿರುವ ಹೊಸ ಆಲ್ಬಂ ಸಾಂಗ್‌ವೊಂದು ರಿಲೀಸ್ ಆಗಿದೆ. ಭಾನುವಾರದಂದೇ ಆಕಾಂಕ್ಷಾ ಉಳಿದುಕೊಂಡಿದ್ದ ಹೋಟೆಲ್‌ನಲ್ಲಿ ನೇಣಿಗೆ ಶರಣಾಗಿದ್ದಾರೆ. ಈ ಘಟನೆಯ ಬಗ್ಗೆ ಪೊಲೀಸರು ನಟಿಯ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಮೇಲ್ನೋಟಕ್ಕೆ ಇದೊಂದು ಆತ್ಮಹತ್ಯೆಯಂತೆ ಕಂಡರೂ ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

akanksha

ಆಕಾಂಕ್ಷಾ ಸಿನಿಮಾ ಶೂಟಿಂಗ್‌ಗಾಗಿ ವಾರಣಾಸಿಗೆ ಬಂದಿದ್ದರು ಎನ್ನಲಾಗಿದೆ. ಒಂದು ದಿನದ ಹಿಂದೆ, ಶನಿವಾರ ರಾತ್ರಿ, ಆಕಾಂಕ್ಷಾ ತನ್ನ ಇನ್ಸ್ಟಾಗ್ರಾಂ ಅಕೌಂಟ್‌ನಲ್ಲಿ ತನ್ನ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಸುಮಾರು ಒಂದು ತಿಂಗಳ ಹಿಂದೆ, ಪ್ರೇಮಿಗಳ ದಿನದಂದು ಸೋಷಿಯಲ್ ಮೀಡಿಯಾದಲ್ಲಿ ನಟಿ ತನ್ನ ರಿಲೇಷನ್‌ಶಿಪ್ ಅಧಿಕೃತಗೊಳಿಸಿ ಸುದ್ದಿ ಮಾಡಿದರು. ಇದೀಗ ನಟಿಯ ಸಾವು ನಿಜಕ್ಕೂ ಕೊಲೆಯೋ ಅಥವಾ ಆತ್ಮಹತ್ಮೆನ ಎಂಬ ಅನುಮಾನ ಉಂಟಾಗಿದೆ. ತನಿಖೆ ಬಳಿಕ ಅಸಲಿ ವಿಚಾರ ಹೊರಬರಲಿದೆ.

Share This Article