ಬಾಲಿವುಡ್ ನಟಿ ಐಶ್ವರ್ಯಾ ರೈ (Aishwarya Rai) ಪುತ್ರಿ ಆರಾಧ್ಯ (Aradhya) ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮಗಳ ಬರ್ತ್‌ಡೇಯನ್ನು ವಿಶೇಷವಾಗಿ ನಟಿ ಆಚರಿಸಿದ್ದಾರೆ. ಮಗಳು ಆರಾಧ್ಯ ಬರ್ತ್‌ಡೇ ಸಂಭ್ರಮದಲ್ಲಿ ಅಭಿಷೇಕ್ ಭಾಗಿಯಾಗದೇ ಇರೋದು ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ಅಭಿಷೇಕ್ ಮತ್ತು ಐಶ್ವರ್ಯಾಗೆ ಡಿವೋರ್ಸ್ ಆಗಿದ್ಯಾ? ಎಂಬ ಅನುಮಾನ ಅಭಿಮಾನಿಗಳಲ್ಲಿ ಮೂಡಿದೆ. ಇದನ್ನೂ ಓದಿ:ಗುಂಪು ಕಟ್ಟಿಕೊಂಡು ಬರಲ್ಲ, ಸಿಂಗಲ್ ಸಿಂಹದ ರೀತಿ ಹೊಡೆಯುತ್ತೇನೆ: ಗುಡುಗಿದ ಚೈತ್ರಾ
ನಟಿ ಐಶ್ವರ್ಯಾ ಹಂಚಿಕೊಂಡ ಪೋಸ್ಟ್‌ನಲ್ಲಿ, ಅಜ್ಜ ದಿವಂಗತ ಕೃಷ್ಣರಾಜ್ ರೈ ಫೋಟೋಗೆ ಮುಂದೆ ಗೌರವದಿಂದ ಆರಾಧ್ಯ ನಮಸ್ಕರಿಸಿದ್ದಾರೆ. ಇನ್ನೊಂದು ಫೋಟೋದಲ್ಲಿ ಬೃಂದ್ಯಾ ರೈ ಜೊತೆ ನಟಿ, ಆರಾಧ್ಯ ಪೋಸ್ ಕೊಟ್ಟಿದ್ದಾರೆ. ಆರಾಧ್ಯರ ಬಾಲ್ಯದ ಫೋಟೋ, ಬರ್ತ್‌ಡೇ ಆಚರಣೆಯ ಫೋಟೋವನ್ನು ಹಂಚಿಕೊಂಡಿದ್ದಾರೆ.
View this post on Instagram
ನನ್ನ ಮಗಳಿಗೆ ಹುಟ್ಟುಹಬ್ಬದ ಶುಭಾಶಯಗಳು. ಇಬ್ಬರೂ ನನ್ನ ಜೀವನದ ಶಾಶ್ವತ ಪ್ರೀತಿ, ಅಪ್ಪ- ಅಜ್ಜ ಮತ್ತು ನನ್ನ ಪ್ರೀತಿಯ ಆರಾಧ್ಯ. ನನ್ನ ಹೃದಯ ನೀನು ಎಂದು ಬರೆದುಕೊಂಡಿದ್ದಾರೆ. ಐಶ್ವರ್ಯಾ ಹಂಚಿಕೊಂಡಿರುವ ಪೋಸ್ಟ್‌ನಲ್ಲಿ ಅಭಿಷೇಕ್ ಮತ್ತು ಬಚ್ಚನ್ ಪರಿವಾರದವರು ಇಲ್ಲದೇ ಇರೋದು ಸಾಕಷ್ಟು ಚರ್ಚೆ ಹುಟ್ಟು ಹಾಕಿದೆ. ಇಲ್ಲಿ ಏನೋ ಸರಿಯಿಲ್ಲ. ಐಶ್ವರ್ಯಾ ಮತ್ತು ಅಭಿಷೇಕ್ (Abhishek Bachchan) ಜೊತೆಯಾಗಿಲ್ಲ ಎಂದೆಲ್ಲಾ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.