ಇತ್ತೀಚೆಗೆ ಬಿಡುಗಡೆಯಾದ ‘ಪ್ರವೀಣ’ ಚಿತ್ರದಲ್ಲಿ ತಮ್ಮ ಅಭಿನಯದಿಂದ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿರುವ ನಟಿ ಐಶ್ವರ್ಯಾ ಗೌಡ (Aishwarya Gowda), ಇದೀಗ ಬೋನಗಾನಿ (Bonagani)ಎಂಟರ್ಟೈನ್ಮೆಂಟ್ ಅಡಿ ನಿರ್ಮಾಣವಾಗುತ್ತಿರುವ ‘ಎಂಗೇಜ್ ಮೆಂಟ್’ (Engagement) ಎಂಬ ಪ್ಯಾನ್ ಇಂಡಿಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ನಿಖಿಲ್ ಕುಮಾರ್ ಅಭಿನಯದ ‘ಜಾಗ್ವಾರ್’ ಚಿತ್ರದಲ್ಲಿ ಬಾಲನಟಿಯಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಐಶ್ವರ್ಯಾ, ಪ್ರವೀಣ ಚಿತ್ರದಲ್ಲಿ ನಟಿಸಿದರು. ಆ ನಂತರ ರಾಜು ಬೋನಗಾನಿ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ ‘ರೇವ್ ಪಾರ್ಟಿ’ಯಲ್ಲಿ ದ್ವಿತೀಯ ನಾಯಕಿಯಾಗಿ ಅಭಿನಯಿಸಿದರು. ಇಂದಿನ ಯುವಜನತೆ ಡ್ರಗ್ಸ್ ಗೆ ಹೇಗೆ ದಾಸರಾಗುತ್ತಿದ್ದಾರೆ ಎಂದು ಸಾರುವ ಈ ಚಿತ್ರ ಬಿಡುಗಡೆ ಆಗುವುದಕ್ಕಿಂತ ಮೊದಲೇ, ಅದೇ ನಿರ್ದೇಶಕರ ಇನ್ನೊಂದು ಪ್ಯಾನ್ ಇಂಡಿಯಾ ಚಿತ್ರವಾದ ‘ಎಂಗೇಜ್ ಮೆಂಟ್’ಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಅಪ್ಪಾಜಿ ಮೇಲಿನ ಪ್ರೀತಿ ಉಕ್ಕಿ ಹರಿಯುತ್ತಿದೆ – ನಿಶ್ವಿಕಾ ನಾಯ್ಡು
ತಮ್ಮ ಚಿತ್ರಜೀವನದ ಕುರಿತು ಮಾತನಾಡುವ ಐಶ್ವರ್ಯಾ, ‘ನನಗೆ ಚಿಕ್ಕಂದಿನಿಂದಲೂ ನಟನೆಯ ಬಗ್ಗೆ ಅಪಾರವಾದ ಆಸಕ್ತಿ. ಅದೇ ಆಸಕ್ತಿಯಿಂದ ‘ಜಾಗ್ವಾರ್’ ಚಿತ್ರದ ಮೂಲಕ ಚಿತ್ರರಂಗಕ್ಕೆ ಬಂದೆ. ಪ್ರವೀಣ ಚಿತ್ರ ಸಹ ನನಗೆ ಒಳ್ಳೆಯ ಬ್ರೇಕ್ ನೀಡಿತು. ಆ ಚಿತ್ರದಿಂದ ನನಗೆ ರೇವ್ ಪಾರ್ಟಿ ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅದರಲ್ಲಿನ ನನ್ನ ಅಭಿನಯದ ನೋಡಿ ನಿರ್ದೇಶಕ ಬೋನಗಾನಿ ಅವರು ‘ಎಂಗೇಜ್ ಮೆಂಟ್’ ಚಿತ್ರದಲ್ಲಿ ನಾಯಕಿಯಾಗುವ ಅವಕಾಶವನ್ನು ನೀಡಿದ್ದಾರೆ. ಈ ಚಿತ್ರ ಸಹ ಬಾಕ್ಸ್ ಆಫೀಸ್ನಲ್ಲಿ ದೊಡ್ಡ ಯಶಸ್ಸು ಕಾಣಲಿದೆ ಎಂಬ ನಂಬಿಕೆ ನನಗಿದೆ’ ಎಂದು ಹೇಳುತ್ತಾರೆ. ‘ಈ ಸಿನಿಮಾದ ಪ್ರೀಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗಿದ್ದು, ಸದ್ಯದಲ್ಲೇ ಚಿತ್ರೀಕರಣ ಪ್ರಾರಂಭವಾಗಲಿದೆ.