ಬೆಂಗಳೂರು: ನಟ ಅರ್ಜುನ್ ಸರ್ಜಾ ಅವರು ಲೈಂಗಿಕ ಕಿರಕುಳ ನೀಡಿದ್ದಾರೆ ಎಂದು ಆರೋಪಿಸಿ ಇಂದು ಶೃತಿ ಹರಿಹರನ್ ಅವರು 5 ಪುಟಗಳ ದೂರು ದಾಖಲಿಸಿದ್ದಾರೆ. ಈ ಸಂಬಂಧ ಶೃತಿ ಹರಿಹರನ್ ಅವರಿಗೆ ಅರ್ಜುನ್ ಮಗಳು ಐಶ್ವರ್ಯಾ ಅರ್ಜುನ್ ಅವರು ಶೃತಿಗೆ ಸವಾಲೆಸೆದಿದ್ದಾರೆ.
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಐಶ್ವರ್ಯಾ, ಶೃತಿ ಒಂದು ತಿಂಗಳ ಹಿಂದೆಯಷ್ಟೇ ನನ್ನ ಅಪ್ಪನನ್ನು ಅವರು ಟ್ವಿಟ್ಟರ್ ನಲ್ಲಿ ಅನ್ ಫಾಲೋ ಮಾಡಿದ್ದಾರೆ ಯಾಕೆ?. ಹಾಗೆಯೇ ಅವರು ಈ ಹಿಂದೆ ತಮಿಳು ನಿರ್ಮಾಪಕರ ವಿರುದ್ಧವೂ ಕಾಸ್ಟಿಂಗ್ ಕೌಚ್ ಆರೋಪ ಮಾಡಿದ್ದರು. ಹಾಗಾದ್ರೆ ಅದರ ಬಗ್ಗೆ ಅವರು ಈಗ ಯಾಕೆ ಮಾತನಾಡುತ್ತಿಲ್ಲ. ಇದನ್ನೂ ಓದಿ: ಅಸಹ್ಯವಾಗಿ ನೋಡಿ ಹಿಂಭಾಗದಿಂದ ಅಪ್ಪಿಕೊಂಡ್ರು- ಶೃತಿ ದೂರಿನಲ್ಲಿ ಬೆಚ್ಚಿ ಬೀಳೋ ಆರೋಪ
ನಮ್ಮಪ್ಪನ ಜೊತೆ ಕೆಲಸ ಮಾಡಲು ಖುಷಿಯಾಗಿದೆ ಅಂತ ಹೇಳುವ ಮೂಲಕ ನಗು ನಗುತ್ತಾ ನನ್ನ ಜೊತೆ ಮಾತನಾಡಿದ್ದು ಯಾಕೆ? ಇದರ ಬಗ್ಗೆ ನನ್ನಲ್ಲಿ ಸಾಕ್ಷಿಗಳಿವೆ. ನಾನು ಈಗ ಅವುಗಳನ್ನು ಬಯಲು ಮಾಡುತ್ತೇನೆ. ಇದರ ಹಿಂದಿನ ಉದ್ದೇಶವೇನು? ಇವೆಲ್ಲದಕ್ಕೂ ಶೃತಿ ಅವರ ಕಡೆಯಿಂದಲೇ ನನಗೆ ಉತ್ತರ ಬೇಕು ಅಂತ ಐಶ್ವರ್ಯಾ ಖಡಕ್ ಆಗಿ ನುಡಿದಿದ್ದಾರೆ. ಇದನ್ನೂ ಓದಿ: ಶೃತಿ ಹರಿಹರನ್ ಮದ್ವೆ ರಹಸ್ಯ ಬಯಲು – ದೂರಿನಲ್ಲಿ ಮದುವೆ ಬಗ್ಗೆ ಉಲ್ಲೇಖ ಮಾಡಿದ ರಾಟೆ ಹುಡುಗಿ
ಮುಗ್ಧ ಜನಗಳ ಮೇಲೆ ಆರೋಪ ಮಾಡೋದಿಕೆ ಮೀಟೂ ಧೈರ್ಯ ಕೊಡ್ತು ಅಂತಾ ಹೇಳಿದ್ರೆ ನನಗೆ ನಾಚಿಕೆಯಾಗುತ್ತಿದೆ ಎಂದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=p-XbtCRr48o