ಹೊಂದಿಸಿ ಬರೆಯಿರಿ ಸಿನಿಮಾದ ಮೂಲಕ ಸಾಕಷ್ಟು ಹೆಸರು ಮಾಡುತ್ತಿರುವ ನಟಿ ಐಶಾನಿ ಶೆಟ್ಟಿ, ತಮ್ಮ ಕಾಲೇಜು ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರು ತಮ್ಮ ಸ್ಕೂಲ್ ಮತ್ತು ಕಾಲೇಜು ದಿನಗಳ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ. ಅದರಲ್ಲೂ ತಮಗೆ ಮ್ಯಾಥ್ಸ್ ಸಬ್ಜೆಕ್ಟ್ ಅಂದ್ರೆ ತುಂಬಾ ಕಷ್ಟವೆಂದೂ ಹೇಳಿಕೊಂಡಿದ್ದಾರೆ.
Advertisement
‘ತುಂಟಾಟ ಮಾಡುವುದರಲ್ಲಿ ಹೆಸರುವಾಸಿ ಲಾಸ್ಟ್ ಬೆಂಚ್ ಸ್ಟೂಡೆಂಟ್. ಆದರೆ, ಏನು ಮಾಡೋದು? ಓದಿದ್ದು ತಲೆಗೆ ಹೋಗ್ಬೇಕು ಅಂತ ನಾನು ಫಸ್ಟ್ ಬೆಂಚ್ ಸ್ಟೂಡೆಂಟ್ ಆದೆ’ ಎಂದು ಪೀಣ್ಯಾದ ಆರ್.ಎನ್.ವಿ.ಕೆ ಪಿಯು ಕಾಲೇಜು ವಿದ್ಯಾರ್ಥಿಗಳ ಜೊತೆ ತಮ್ಮ ಸ್ಟೂಡೆಂಟ್ ದಿನಗಳ ನೆನಪಿನ ಬುತ್ತಿಯನ್ನು ಐಶಾನಿ ಹಂಚಿಕೊಂಡಿದ್ದಾರೆ. ಹೆಣ್ಣುಮಕ್ಕಳು ಹಣಕಾಸಿನ ವಿಚಾರದಲ್ಲಿ ಬೇರೆ ಯಾರಿಗೂ ಡಿಪೆಂಡ್ ಆಗ್ಬೇಡಿ, ಇಂಡಿಪೆಂಡೆಂಟ್ ಆಗಿ ಬದುಕಿ, ನಿಮ್ಮ ಜೀವನದ ಜವಾಬ್ದಾರಿಯನ್ನು ನೀವೇ ಹೊತ್ತಿಕೊಳ್ಳಿ ಎಂದು ಅವರು ಸಲಹೆಯನ್ನೂ ನೀಡಿದ್ದಾರೆ. ಇದನ್ನೂ ಓದಿ: ಗಾಯಕಿ ವಾಣಿ ಜಯರಾಮ್ ನಿಗೂಢ ಸಾವು : ಮರಣೋತ್ತರ ವರದಿಯಲ್ಲೇನಿದೆ?
Advertisement
Advertisement
ಮುಂದುವರೆದು ಮಾತನಾಡಿರುವ ಅವರು, ‘ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಅಂತ ತಪ್ಪು ನಿರ್ಧಾರ ತೆಗೆದುಕೊಳ್ಳಬೇಡಿ. ನಿಮ್ಮನ್ನು ಮತ್ತೊಬ್ಬರಿಗೆ ಕಂಪೇರ್ ಮಾಡಿಕೊಳ್ಳಬೇಡಿ. ನಿಮ್ಮ ಪ್ರತಿಭೆ ಏನು ಅಂತ ಚಿಂತಿಸಿ. ಆ ಕಡೆ ಹೆಜ್ಜೆ ಹಾಕಿ. ಸೋತಾಗ ತಲೆಕೆಡಿಸಿಕೊಂಡು ನಾನು ಸೋತೆ, ಅವರು ಗೆದ್ದರು ಅಂತ ಚಿಂತಿಸುವ ಅವಶ್ಯಕತೆ ಇಲ್ಲ. ಮತ್ತೊಮ್ಮೆ ಪ್ರಯತ್ನ ಮಾಡಿ. ಗೆಲುವು ನಿಮ್ಮದಾಗುತ್ತದೆ’ ಎಂದು ಅವರು ಆರ್.ಎನ್.ವಿ.ಕೆ ದ್ವಿತೀಯ ಪಿಯು ಕಾಲೇಜಿನ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿಗಳಿಗೆ ಮಾನಸಿಕ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.
Advertisement
ನಂತರ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಿ, ತಮ್ಮಿಷ್ಟದ ಹಾಡು ಹಾಡುವುದರ ಮೂಲಕವೂ ಅವರ ರಂಜಿಸಿದ್ದಾರೆ. ಮಕ್ಕಳ ಜೊತೆ ಫೋಟೋಗೆ ಪೊಸ್ ಕೊಟ್ಟಿದ್ದಾರೆ. ಕಾಲೇಜಿನ ಕಾರ್ಯದರ್ಶಿ ಭರತ್ ಕುಮಾರ್ ಹಾಗೂ ಪ್ರಾಂಶುಪಾಲರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k