ಬೆಂಗಳೂರು: ಸ್ಯಾಂಡಲ್ವುಡ್ ಬೆಡಗಿ ಐಂದ್ರಿತಾ ರೇ ಹೋಟೆಲ್ವೊಂದರ ಸಿಬ್ಬಂದಿ ಮೇಲೆ ರೊಚ್ಚಿಗೆದಿದ್ದಾರೆ. ಅಲ್ಲದೇ ರೆಸ್ಟೋರೆಂಟ್ ವಿರುದ್ಧ ಟ್ವಿಟ್ಟರಿನಲ್ಲಿ ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.
ವಿಮಾನ ನಿಲ್ದಾಣದಲ್ಲಿರುವ ‘ಟಿಫೆನ್ ಸೆಂಟರ್ ರೆಸ್ಟೋರೆಂಟ್’ ಮೇಲೆ ಐಂದ್ರಿತಾ ರೊಚ್ಚಿಗೆದಿದ್ದು, ಹೋಟೆಲ್ಗೆ ಹೋಗುವ ಜನರಿಗೆ ಸಿಬ್ಬಂದಿಯವರು ಸರಿಯಾಗಿ ಸ್ಪಂದಿಸುತ್ತಿಲ್ಲ ಹಾಗೂ ಉತ್ತಮ ಸೇವೆಗಳನ್ನು ಒದಗಿಸುತ್ತಿಲ್ಲ ಎಂದು ಐಂದ್ರಿತಾ ಹೋಟೆಲ್ ಸಿಬ್ಬಂದಿ ವಿರುದ್ಧ ಕಿಡಿಕಾರಿದ್ದಾರೆ.
Extremely rude and arrogant staff at the Tiffin Centre restaurant in the airport mistreating customers who've paid and anxiously wait for their orders b4 boarding a flight ..Disgusted pic.twitter.com/O9WSMsc2IS
— Aindrita Ray (@AindritaR) May 10, 2018
ಐಂದ್ರಿತಾ ರೇ ಈ ಬಗ್ಗೆ ಟ್ವಿಟ್ಟರಿನಲ್ಲಿ “ಏರ್ ಪೋರ್ಟ್ನಲ್ಲಿರುವ ಟಿಫೆನ್ ಸೆಂಟರ್ ರೆಸ್ಟೋರೆಂಟ್ ಸಿಬ್ಬಂದಿ ತುಂಬ ಅಸಭ್ಯ ವರ್ತನೆ ತೋರುತ್ತಿದ್ದಾರೆ. ಆಹಾರಕ್ಕಾಗಿ ಹಣ ನೀಡಿದ ಗ್ರಾಹಕರೊಂದಿಗೆ ಕೆಟ್ಟದಾಗಿ ವರ್ತಿಸುತ್ತಿದ್ದಾರೆ. ಹಣ ನೀಡಿದರು ಕಾಯುವಂತಾಗಿದೆ. ವಿಮಾನಕ್ಕೆ ವಿಳಂಬವಾದ್ದರೂ ತಿಂಡಿ ನೀಡಲು ತಡ ಮಾಡುತ್ತಿದ್ದಾರೆ. ಯಾರೂ ಕೂಡ ಸರಿಯಾಗಿ ಸ್ಪಂದಿಸುತ್ತಿಲ್ಲ” ಎಂದು ಟ್ವೀಟ್ ಮಾಡಿದ್ದಾರೆ.
ಇದು ಯಾವ ರೆಸ್ಟೋರೆಂಟ್ ಎಂಬುದರ ಬಗ್ಗೆ ಐಂದ್ರಿತಾ ರೇ ಸ್ಪಷ್ಟನೆ ನೀಡಿಲ್ಲ. ಆದರೆ ಇದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಹೋಟೆಲ್ ಬಗ್ಗೆ ಬರೆದಿರಬಹುದು. ಬೇರೆ ದೇಶ ಅಥವಾ ರಾಜ್ಯದ ವಿಮಾನ ನಿಲ್ದಾಣ ಆಗಿದ್ದರೆ ಐಂದ್ರಿತಾ ಹೆಸರನ್ನು ಉಲ್ಲೇಖಿಸುತ್ತಿದ್ದರು ಎಂದು ಜನ ಬರೆದುಕೊಂಡಿದ್ದಾರೆ.