ನಟಿ ಅದಿತಿ ಪ್ರಭುದೇವ (Aditi Prabhudeva) ಅವರು ಮಗಳು ನೇಸರ ಮೊದಲ ವರ್ಷದ ಹುಟ್ಟುಹಬ್ಬವನ್ನು ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ. ಬರ್ತ್ಡೇ ಆಚರಣೆಯ ಸುಂದರ ಫೋಟೋ ಶೇರ್ ಮಾಡಿ ಮಗಳಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಇದನ್ನೂ ಓದಿ: L2: ಎಂಪುರಾನ್ ನಿರ್ದೇಶಕ ಪೃಥ್ವಿರಾಜ್ಗೆ ಐಟಿ ನೋಟಿಸ್ – ಸಂಭಾವನೆ ವಿವರ ನೀಡುವಂತೆ ಸೂಚನೆ
ಮಗಳು ನೇಸರಗೆ 1 ವರ್ಷದ ಹುಟ್ಟುಹಬ್ಬದ ಹಿನ್ನೆಲೆ ಬೆಂಗಳೂರಿನ ರೆಸಾರ್ಟ್ವೊಂದರಲ್ಲಿ ಅದ್ಧೂರಿಯಾಗಿ ಆಚರಿಸಿದ್ದಾರೆ. ಬಿಳಿ ಬಣ್ಣದ ಉಡುಗೆಯಲ್ಲಿ ನೇಸರ (Nesara) ಮಿಂಚಿದ್ದಾಳೆ. ಮಗಳಿಗೆ ಹಾಡು ಹೇಳುತ್ತಾ ಊಟ ಮಾಡಿಸುತ್ತಿರುವ ಫೋಟೋ ಜೊತೆಗೆ ಮಗಳೊಂದಿಗಿರುವ ನಟಿಯ ತುಂಟಾಟ ಪೋಸ್ ನೋಡಿ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ. ಇದನ್ನೂ ಓದಿ:ಹುಟ್ಟುಹಬ್ಬ ಆಚರಿಸಿಕೊಳ್ಳಲು ವಿದೇಶಕ್ಕೆ ಹಾರಿದ ನ್ಯಾಷನಲ್ ಕ್ರಶ್ – ಈ ನಟನೊಂದಿಗೆ ರಶ್ಮಿಕಾ ಸೆಲೆಬ್ರೇಷನ್!
ಮೊದಲ ಹುಟ್ಟು ಹಬ್ಬದ ಶುಭಾಶಯಗಳು ಮಗಳೇ ನೇಸರ. ನೀ ನಮ್ಮ ಬದುಕು, ನಮ್ಮ ಜೀವದ ಬೆಳಕು. ಪ್ರತಿ ಕ್ಷಣ, ಪ್ರತಿ ಮಾತು, ಪ್ರತಿ ನಿರ್ಧಾರದಲ್ಲೂ ನೀನಿರುವೆ ಮಗಳೆ ಎಂದಿದ್ದಾರೆ. ಆ ಶಿವನಾಣೆ ನಿನ್ನ ಬದುಕಿನ ಪ್ರತಿ ಹೆಜ್ಜೆಯಲ್ಲು ನಿನ್ನೊಂದಿಗಿರುತ್ತೇವೆ ಎಂದು ಅದಿತಿ ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
View this post on Instagram
ಈ ಸಮಾರಂಭಕ್ಕೆ ಸ್ಯಾಂಡಲ್ವುಡ್ ನಟ-ನಟಿಯರು ಕೂಡ ಆಗಮಿಸಿದ್ದಾರೆ. ಮಲೈಕಾ ವಸುಪಾಲ್, ಸುಧಾರಾಣಿ, ಡಾರ್ಲಿಂಗ್ ಕೃಷ್ಣ ಮತ್ತು ಮಿಲನಾ ದಂಪತಿ ಸೇರಿದಂತೆ ಅನೇಕರು ಭಾಗಿಯಾಗಿದ್ದಾರೆ.
‘ಧೈರ್ಯಂ’ ಚಿತ್ರದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದ ಅದಿತಿ, ರಂಗನಾಯಕಿ, ಟ್ರಿಪಲ್ ರೈಡಿಂಗ್, ಬಜಾರ್, ತೋತಾಪುರಿ ಚಿತ್ರ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಮದುವೆಯ ಬಳಿಕವೂ ಛೂ ಮಂತರ್, ಜಮಾಲಿಗುಡ್ಡ ಚಿತ್ರಗಳಲ್ಲಿ ನಟಿಸಿದ್ದಾರೆ.
ಅಂದಹಾಗೆ, 2022ರಲ್ಲಿ ಉದ್ಯಮಿ ಯಶಸ್ ಪಾಟ್ಲಾ (Yashas Patla) ಜೊತೆ ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ನಲ್ಲಿ ಅದ್ಧೂರಿಯಾಗಿ ಮದುವೆಯಾದರು. ಕಳೆದ ವರ್ಷದ ಏ.4ರಂದು ಅದಿತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು.