ಬಿಗ್ ಬಾಸ್ ಸೀಸನ್ 11ಕ್ಕೆ (Bigg Boss Kannada 11) ವೇದಿಕೆ ಸಿದ್ಧವಾಗುತ್ತಿದ್ದಂತೆ ಹಲವರ ಹೆಸರು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅದರಲ್ಲಿ ಅದ್ವಿತಿ ಮತ್ತು ಅಶ್ವಿತಿ ಶೆಟ್ಟಿ ದೊಡ್ಮನೆಗೆ ಬರಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಅದಕ್ಕೆಲ್ಲಾ ನಟಿ ಅದ್ವಿತಿ (Adhvithi Shetty) ಉತ್ತರ ನೀಡಿದ್ದಾರೆ. ನಾವು ಬಿಗ್ ಬಾಸ್‌ಗೆ ಹೋಗ್ತೀವಿ ಅಂತ ನೀವೇ ನಿರ್ಧರಿಸಲು ಹೋಗಬೇಡಿ ಎಂದಿದ್ದಾರೆ. ಇದನ್ನೂ ಓದಿ:ಬ್ಯಾಕ್ ಟು ಬ್ಯಾಕ್ 3 ಸಿನಿಮಾಗಳಲ್ಲಿ ಬ್ಯುಸಿಯಾದ ರಶ್ಮಿಕಾ ಮಂದಣ್ಣ
ಕಳೆದ ಹಲವು ಸೀಸನ್‌ಗಳಿಂದ ಬಿಗ್ ಬಾಸ್‌ಗೆ ಹೋಗುವ ಕುರಿತು ಈ ಅವಳಿ ಸಹೋದರಿಯರ ಹೆಸರು ಕೇಳಿ ಬರುತ್ತಲೇ ಇದೆ. ಪ್ರತಿ ಸೀಸನ್ ಬಂದಾಗಲೂ ಇವರ ಸದ್ದು ಮಾಡುತ್ತದೆ. ಈ ಬಾರಿಯೂ ಹಾಗೇ ಆಗಿದೆ. ಅದಕ್ಕೆ ಇನ್ಸ್ಟ್ರಾಗ್ರಾಂ ಸ್ಟೋರಿ ಶೇರ್ ಮಾಡಿ, ಎಲ್ಲರಿಗೂ ನಮಸ್ಕಾರ, ನಾನು ಹಲವು ಪೋಸ್ಟ್‌ಗಳನ್ನು ನೋಡಿದೆ, ಬಿಗ್ ಬಾಸ್‌ಗೆ ಈ ಬಾರಿ ನಾನು ಮತ್ತು ಸಹೋದರಿ ಅಶ್ವಿತಿ (Ashvithi Shetty) ದೊಡ್ಮನೆಗೆ ಹೋಗುವ ಕುರಿತು. ನಾವು ಬಿಗ್ ಬಾಸ್‌ಗೆ ಹೋಗುತ್ತೇವೆ ಎಂದು ಎಲ್ಲೂ ಅಧಿಕೃತವಾಗಿ ಹೇಳಿಲ್ಲ ಎಂದಿದ್ದಾರೆ.
ನಾನೇ ಹೇಳುವವರೆಗೂ ದಯವಿಟ್ಟು ನೀವೇ ಕಲ್ಪನೆ ಮಾಡಿಕೊಳ್ಳಲು ಹೋಗಬೇಡಿ ಎಂದಿದ್ದಾರೆ ನಟಿ ಅದ್ವಿತಿ. ಧನ್ಯವಾದಗಳು ನಮ್ಮನ್ನು ಹೀಗೆ ಬೆಂಬಲಿಸುತ್ತಾ ಇರಿ ಎಂದು ಮನವಿ ಮಾಡಿದ್ದಾರೆ. ಈ ಮೂಲಕ ಬಿಗ್ ಬಾಸ್‌ಗೆ ಹೋಗುವ ವಿಚಾರ ಇದು ವದಂತಿ ಅಷ್ಟೇ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಂದಹಾಗೆ, ಮಿಸ್ಟರ್ & ಮಿಸೆಸ್ ರಾಮಾಚಾರಿ ಸಿನಿಮಾ ಮೂಲಕ ಈ ಅವಳಿ ಸಹೋದರಿಯರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ರಾಧಿಕಾ ಪಂಡಿತ್ (Radhika Pandit) ಸ್ನೇಹಿತೆಯರಾಗಿ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇದೀಗ ಇಬ್ಬರೂ ಹೊಸ ಸಿನಿಮಾಗಳನ್ನು ಮಾಡುತ್ತಾ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.