‘ಮನೆದೇವ್ರು’ (Manedevaru) ನಟಿ ಅರ್ಚನಾ ಲಕ್ಷ್ಮಿನರಸಿಂಹಸ್ವಾಮಿ (Lakshmi Narasimhaswamy) ಅವರು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕೂಸು ಹುಟ್ಟುವ ಮೊದಲೇ ಹೆಣ್ಣು ಎಂದು ಘೋಷಿಸಿ ಬೇಬಿ ಶವರ್ (Baby Shower) ಆಚರಿಸಿಕೊಂಡಿದ್ದಾರೆ. ಈ ಕುರಿತ ಸುಂದರ ಫೋಟೋಗಳನ್ನ ನಟಿ ಹಂಚಿಕೊಂಡಿದ್ದಾರೆ.
ಸದ್ಯ ಅರ್ಚನಾ, ಪತಿ ವಿಘ್ನೇಶ್ ಶರ್ಮಾ (Vignesh Sharma) ಜೊತೆ ವಿದೇಶದಲ್ಲಿ ಸೆಟೆಲ್ ಆಗಿದ್ದಾರೆ. ಇತ್ತೀಚಿಗಷ್ಟೇ ಅವರಿಗೆ ಸೀಮಂತ ಶಾಸ್ತ್ರ ಅದ್ದೂರಿಯಾಗಿ ಮಾಡಿದ್ದರು. ಅಲ್ಲಿ ಮಗುವಿನ ಲಿಂಗ ಪತ್ತೆ ಹಚ್ಚಿದ ನಂತರ ಬೇಬಿ ಶವರ್‌ನಲ್ಲಿ ಹೆಣ್ಣು ಮಗು ಎಂದು ಖುಷಿಯಿಂದ ಅನೌನ್ಸ್ ಮಾಡಿದ್ದಾರೆ.
ಕುಟುಂಬ, ಆತ್ಮೀಯರ ಜೊತೆ ಬೇಬಿ ಶವರ್‌ನಲ್ಲಿ ಪಿಂಕ್ ಬಣ್ಣದ ಉಡುಗೆಯಲ್ಲಿ ನಟಿ ಮಿಂಚಿದ್ದಾರೆ. ಬೇಬಿ ಶರ್ಮಾ ನಿನಗೆ ಸ್ವಾಗತ ಎಂದು ಬೋರ್ಡ್ ಹಿಂದೆ ನಿಂತು ಕ್ಯಾಮೆರಾಗೆ ಅರ್ಚನಾ ದಂಪತಿ ಪೋಸ್ ನೀಡಿದ್ದಾರೆ. ಇದನ್ನೂ ಓದಿ:ಡಾ.ವಿಷ್ಣುವರ್ಧನ್ ಆಪ್ತ, ನಿರ್ದೇಶಕ ವಿ.ಆರ್. ಭಾಸ್ಕರ್ ನಿಧನ
ಕೆಲ ವರ್ಷಗಳ ಹಿಂದೆ ವಿಘ್ನೇಶ್ ಶರ್ಮಾ ಜೊತೆ ನಟಿ ಅರ್ಚನಾ ಮದುವೆಯಾದರು. ಗುರುಹಿರಿಯರ ಸಮ್ಮತಿಸಿದ ಮದುವೆಯಾಗಿತ್ತು. ಕಳೆದ ಜೂನ್‌ನಲ್ಲಿ ತಾವು ತಾಯಿಯಾಗ್ತಿರುವ ಗುಡ್ ನ್ಯೂಸ್ ನಟಿ ಹಂಚಿಕೊಂಡಿದ್ದರು. ಮನೆಗೆ ಆಗಮನವಾಗುತ್ತಿರೋ ಹೊಸ ಅತಿಥಿಗೆ ಈ ಜೋಡಿ ಕಾಯ್ತಿದೆ. ಇದನ್ನೂ ಓದಿ:‘ಫ್ಲರ್ಟ್’ ಮಾಡಲು ರೆಡಿಯಾದ ನಟ ಚಂದನ್
ಮಧುಬಾಲ (Madhubala) ಸೀರಿಯಲ್‌ನಲ್ಲಿ ವಿಲನ್ ಆಗಿ ಅರ್ಚನಾ (Archana) ನಟಿಸಿದ್ದರು. ಬಳಿಕ ಮನೆದೇವ್ರು ಸೀರಿಯಲ್‌ನಲ್ಲಿ ನಾಯಕಿಯಾಗಿ ಅರ್ಚನಾ ಬಣ್ಣ ಹಚ್ಚಿದ್ದರು. ಪುನೀತ್ ರಾಜ್‌ಕುಮಾರ್ Puneeth Rajkumar) ನಿರ್ಮಾಣದ ಸೀರಿಯಲ್ ಇದಾಗಿತ್ತು. ಪ್ರೋಮೋ ಶೂಟ್‌ನಲ್ಲಿ ಅರ್ಚನಾರನ್ನ ಪರಿಚಯಿಸಿದ್ದರು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್.