ಎಮೋಷನಲ್ ನಿಂದನೆ ಬಗ್ಗೆ ಮೌನ ಮುರಿದ ಮೇಘನಾ ರಾಜ್

Public TV
2 Min Read
meghana raj 4

ಸ್ಯಾಂಡಲ್‌ವುಡ್ (Sandalwood) ನಟಿ ಮೇಘನಾ ರಾಜ್ (Meghana Raj) `ತತ್ಸಮ ತದ್ಭವ’ ಚಿತ್ರದ ಮೂಲಕ ಕಮ್‌ಬ್ಯಾಕ್ ಮಾಡ್ತಿದ್ದಾರೆ. ಇದೊಂದು ಮಹಿಳಾ ಪ್ರಧಾನ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ಸಮಾಜಕ್ಕೆ ಒಂದೊಳ್ಳೆಯ ಸಂದೇಶ ಕೊಡಲು ಬರುತ್ತಿದ್ದಾರೆ. ಹಾಗೆಯೇ ತಮ್ಮ ಎಮೋಷನಲ್ ಜರ್ನಿಯ ಬಗ್ಗೆ ನಟಿ ಮಾತನಾಡಿದ್ದಾರೆ. ಹೆಣ್ಣು ಮಕ್ಕಳಿಗಿರುವ ಸಮಾಜದ ಚೌಕಟ್ಟು ಅವರ ದೃಷ್ಟಿಕೋನದ ಬಗ್ಗೆ ಮೇಘನಾ ಮೌನ ಮುರಿದಿದ್ದಾರೆ.

meghana raj 3

ಸಮಾಜದಲ್ಲಿ ಹೆಣ್ಣು ಹೀಗೆಯೇ ಇರಬೇಕು. ಇಂತಹ ಕೆಲಸಗಳನ್ನೇ ಮಾಡಬೇಕು ಎಂದೆಲ್ಲಾ ನಿರೀಕ್ಷೆ ಮಾಡುತ್ತಿದ್ದರು. ಅದರಿಂದ ನನಗೆ ತುಂಬಾ ಹಿಂಸೆ ಆಗುತ್ತಿತ್ತು. ನನ್ನ ಪ್ರಕಾರ ದೇಶದಲ್ಲಿ ಅತಿ ದೊಡ್ಡ ನಿಂದನೆ ಅಂದ್ರೆ ಅದು ಭಾವನಾತ್ಮಕ ನಿಂದನೆ ಎನ್ನಬಹುದು. ನನ್ನ ಭಾವನೆಗಳನ್ನು ವ್ಯಕ್ತ ಪಡಿಸುವುದಕ್ಕೆ ತುಂಬಾ ಇಷ್ಟ ಪಡುವ ವ್ಯಕ್ತಿನಾನು ಅದು ಹೇಗೆ ಇರಲಿ ನಾನು ವ್ಯಕ್ತಪಡಿಸುವೆ. ಆದರೆ ತುಂಬಾ ಭಾವನೆಗಳನ್ನು ಹಿಡಿದಿಟ್ಟಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿತ್ತು ಹಾಗೆ ಆಗಬಾರದು ಎಂದು ಮೇಘನಾ ರಾಜ್ ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

Meghana Raj Chiranjeevi Sarja 1

ನಾವು ನಮ್ಮಂತೆಯೇ ಸಮಾಜದ ಮುಂದೆ ಇರುವುದಕ್ಕೆ ಅದೆಷ್ಟೋ ಹೆಣ್ಣು ಮಕ್ಕಳು ಹೆದರಿಕೊಳ್ಳುತ್ತಾರೆ. ಕಾರಣ ಜನರು ನಮ್ಮನ್ನು ಜಡ್ಜ್ ಮಾಡುತ್ತಾರೆ ಎಂದು. ನನ್ನ ನಿಜವಾದ ಭಾವನೆಗಳನ್ನು ತೋರಿಸಿಕೊಂಡರೆ ನಮ್ಮನ್ನು ತಪ್ಪಾಗಿ ನೋಡುತ್ತಾರೆ ಎನ್ನುವ ಭಾವನೆ ಮೂಡುತ್ತದೆ. ಪುರುಷರಿಗೆ ಹೋಲಿಸಿಕೊಂಡರೆ ನಾವು ತುಂಬಾನೇ ಕಂಟ್ರೋಲ್ ಮಾಡುತ್ತೀವಿ ಎಂದು ಮೇಘನಾ ಹೇಳಿದ್ದಾರೆ. ಇದನ್ನೂ ಓದಿ: ಕಿಚ್ಚ ಸುದೀಪ್ ನಟನೆಯ ಹೊಸ ಸಿನಿಮಾ ಏಪ್ರಿಲ್ ನಲ್ಲಿ ಘೋಷಣೆ

meghana raj 2

ಕಳೆದ 30 ವರ್ಷಗಳಲ್ಲಿ ಪುರುಷ ಪ್ರಧಾನ ಸಿನಿಮಾಗಳು ಹೆಚ್ಚಾಗಿದೆ. ಈಗ ಟ್ರೆಂಡ್ ಬದಲಾಗಿದೆ. ಮಹಿಳಾ ಪ್ರಧಾನ ಸಿನಿಮಾಗಳು ಬರುತ್ತಿವೆ. ನಾನು ಚಿತ್ರರಂಗಕ್ಕೆ ಕಾಲಿಟ್ಟಾಗ 13 ವರ್ಷ ಹುಡುಗಿ. ನಾಯಕಿಯರಿಗೆ ಹೆಚ್ಚ ಸಮಯ ಇರುವುದಿಲ್ಲ ಎಂದು ಈಗಲೂ ಹಾಗೆ ಯೋಚನೆ ಮಾಡಬಾರದು. ಸಿನಿಮಾ ಅಂದ್ರೆ ಬರೀ ಗ್ಲಾಮರ್ ಅಲ್ಲ ಅದಕ್ಕೂ ಮೀರಿದ ಕಲೆಯದು. ಬಾಲಿವುಡ್‌ನಲ್ಲಿ 40 ವರ್ಷದವರು ಇಂದಿಗೂ ನಾಯಕಿಯರು ನಟಿಸುತ್ತಾರೆ. ಜನರು ಯೋಚಿಸುವ ರೀತಿ ಬದಲಾಗಬೇಕು ಎಂದು ನಟಿ ಮೇಘನಾ ಮಾತನಾಡಿದ್ದಾರೆ.

`ತತ್ಸಮ ತದ್ಭವ’ (Tatsama Tadbhava) ಚಿತ್ರವನ್ನು ಪನ್ನಗಾಭರಣ ನಿರ್ಮಾಣ ಮಾಡ್ತಿದ್ದಾರೆ. ಮೇಘನಾ ರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದು, ಅರವಿಂದ್ ಅಯ್ಯರ್, ಮಹತಿ ಭಟ್, ಟಿ.ಎಸ್ ನಾಗಾಭರಣ, ರಾಜಶ್ರೀ, ಬಾಲಾಜಿ ಮನೋಹರ್ ಸೇರಿದಂತೆ ಹಲವರು ನಟಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *