Bengaluru City

8 ತಿಂಗ್ಳ ಹಿಂದೆ ಶೃತಿ ನಿಮ್ಮ ಸಂಸ್ಥೆಯ ಮೆಂಬರ್ ಆಗಿದ್ರಾ- ಚೇತನ್‍ಗೆ ಧೃವ ಖಡಕ್ ಪ್ರಶ್ನೆ

Published

on

Share this

– ಪಬ್ಲಿಕ್ ಟಿವಿಯಲ್ಲಿ ಚೇತನ್- ಧೃವ ಸರ್ಜಾ ವಾಕ್ಸಮರ

ಬೆಂಗಳೂರು: ನಟ ಚೇತನ್ ಅವರನ್ನು ತುಂಬಾನೇ ನಾನು ಗೌರವಿಸುತ್ತೇನೆ. ಯಾಕಂದ್ರೆ ನಮ್ಮ ಅಜ್ಜಿ ಜೊತೆ ಅವರು ಗೌರವದಿಂದಲೇ ಮಾತನಾಡಿದ್ರು ಅಂತ ಮಾತು ಮುಂದುವರಿಸಿದ ನಟ ಧೃವ ಸರ್ಜಾ ಅವರು ನಟ ಚೇತನ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.

ಪಬ್ಲಿಕ್ ಟಿವಿಯಲ್ಲಿ  ಇಬ್ಬರು ನಟರು ಫೋನ್ ಮೂಲಕ ಪರಸ್ಪರ ಏಕವಚನದಲ್ಲೇ ವಾಕ್ಸಮರ ನಡೆಸಿದ್ದಾರೆ. ಫೈರ್ ಎಂಬ ಸಂಸ್ಥೆ ಆರಂಭವಾಗಿ ಒಂದೂವರೆ ವರ್ಷ ಆಯ್ತಂತೆ. ಶೃತಿ ಅದರ ಮೆಂಬರ್ ಆಗಿ 8 ತಿಂಗಳು ಆಯಿತಂತೆ. ಅದರ ಸದಸ್ಯರಾಗೋದು ಏನಕ್ಕೆ ಅಂದ್ರೆ ಏನಾದ್ರೂ ಒಂದು ಆಪಾದನೆ ಇದ್ದರೆ ಮಾತ್ರ ಅದ್ರ ಮೇಂಬರ್ ಆಗ್ತಾರೆ. ಹೀಗಾಗಿ 8 ತಿಂಗಳ ಹಿಂದೆ ಶೃತಿ ಹರಿಹರನ್ ಮೆಂಬರ್ ಆಗಿರೋದು ಸತ್ಯನಾ ಸುಳ್ಳಾ ಎಂದು ನೇರವಾಗಿ ನಟ ಧೃವ ಅವರು ಚೇತನ್ ಅವರನ್ನು ಪ್ರಶ್ನಿಸಿದ್ದಾರೆ.

ಈ ವೇಳೆ ಚೇತನ್, ಇಂದು ಶೃತಿ ಹರಿಹರನ್ ಆರೋಪದಿಂದ ನಿಮ್ಮ ಕುಟುಂಬಕ್ಕೆ ತೊಂದರೆಯಾಗಿರುವುದು ನಮಗೆಲ್ಲ ಬೇಜಾರಾಗಿದೆ ಅಂತ ಹೇಳಿದ್ರೆ, ಈ ನಾಟಕಗಳೆಲ್ಲ ಬೇಡ. ನನ್ನ ಪ್ರಶ್ನೆಗೆ ಉತ್ತರಿಸಿ ಅಷ್ಟು ಸಾಕು ಅಂತಾ ಚೇತನ್ ವಿರುದ್ಧ ಧೃವ ವಾಗ್ದಾಳಿ ನಡೆಸಿದರು.

ಇಬ್ಬರ ಸಂಭಾಷಣೆ ಹೀಗಿತ್ತು
ಚೇತನ್: ನಮ್ಮ ಫೈರ್ ಸಂಸ್ಥೆಯಿಂದ ಹಲವಾರು ಸಮಾಜಮುಖಿ ಕೆಲಸಗಳನ್ನು ನಾನು ಮಾಡಿಕೊಂಡು ಬಂದಿದ್ದೇವೆ.

ಧೃವ: ನಿಮ್ಮ ಸಂಸ್ಥೆ ಒಳ್ಳೆಯ ಕೆಲಸಗಳನ್ನು ಮಾಡುತ್ತಿರುವುದು ನಿಜ. ಅದರಲ್ಲಿ ಹೆಣ್ಣು ಮಕ್ಕಳಿದ್ದಾರೆ ಎಂದ್ರೆ ನಾವೆಲ್ಲ ಆ ಸಂಸ್ಥೆಯನ್ನು ಗೌರವಿಸುತ್ತೇವೆ. ನೀನು ಇದ್ದೀಯಾ ಅಂತಾನೂ ಗೌರವಿಸುತ್ತೇನೆ. ಯಾಕಂದ್ರೆ ನಿನಗೆ ಗೊತ್ತು. ಹೇಗೆ ಮಾತಾಡ್ಬೇಕು.. ಹೇಗೆ ನಡೆದುಕೊಳ್ಳಬೇಕು ಎಂಬುದು ನಿನಗೆ ಚೆನ್ನಾಗಿ ಗೊತ್ತು. ಆದ್ರೆ ಮಿಸ್ಟರ್ ಚೇತನ್, ನನ್ನ ಪ್ರಶ್ನೆಗೆ ಉತ್ತರಿಸಿ. ಅನ್ಯಾಯವಾಗಿರುವವರಷ್ಟೇ ನಿಮ್ಮ ಸಂಸ್ಥೆಗೆ ಮೆಂಬರ್ ಆಗ್ತಾರೆ. ಶೃತಿ ಹರಿಹರನ್ ಅವರಿಗೆ ಅನ್ಯಾಯವಾಗಿದೆ ಅಂತಾನೇ ಅವರು ನಿಮ್ಮ ಸಂಸ್ಥೆಯ ಸದಸ್ಯರಾಗಿದ್ದಾರೆ ಅಂದ್ರೆ 8 ತಿಂಗಳಿಂದ ಏನು ಮಾಡುತ್ತಿದ್ರಿ?.

ಚೇತನ್: ನಾವು ಈಗಷ್ಟೇ ಸಂಸ್ಥೆ ಕಟ್ಟಿಕೊಂಡು ಬರುತ್ತಿದ್ದೇವೆ ಅಷ್ಟೆ. ಅದರಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬಂದಿದ್ದೇವೆ. ಯಾವತ್ತು ಶೃತಿ ಅವರು ದೊಡ್ಡ ಪ್ರಮಾಣದಲ್ಲಿ ನಮ್ಮ ಜೊತೆ ನಿಂತ್ರು ಅಂದ್ರೆ ಯಾವಾಗ ಕನ್ನಡ ಚಿತ್ರರಂಗದಲ್ಲಿ ನಾವು ಒಂದು 50 ಜನರ ಸಹಿ ತೆಗೆದುಕೊಂಡು `ಅಮ್ಮಾ’ ಅನ್ನೋ ಮಲೆಯಾಲಂ ಇಂಡಸ್ಟ್ರಿ ಮೇಲೆ ದಿಲೀಪ್ ಅನ್ನೋ ನಟನ ವಿರುದ್ಧ ಹೋರಾಡಿದ್ವಿ.

ಧೃವ: ನನಗೆ ಅದ್ಯಾವುದು ಬೇಡ..8 ತಿಂಗಳ ಹಿಂದೆ ಹೇಗೆ ಅವರ(ಅರ್ಜುನ್ ಸರ್ಜಾ) ಮೇಲೆ ದಾಳಿ ಮಾಡೋದು ಅನ್ನೋದನ್ನು ಸ್ಟಡಿ ಮಾಡುತ್ತಿದ್ರಾ ಅಂತ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದ್ರು. ಇದರಿಂದ ನಿನ್ನ ಬಗ್ಗೆ ನಿನಗೆ ನಾಚಿಕೆಯಾಗಲ್ವ? ಒಬ್ಬ ನಟನಾಗಿ ಇಂತಹುದನ್ನೆಲ್ಲಾ ಹೇಗೆ ಮಾಡ್ತಿಯಾ?

ಒಬ್ಬ ಕಲಾವಿದನಾಗಿ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನಮ್ಮ ಮನೆಯವರು ನಮಗೆ ಚೆನ್ನಾಗಿಯೇ ಹೇಳಿಕೊಟ್ಟಿದ್ದಾರೆ. ನೀನು ಚೆನ್ನಾಗಿ ನಟಿಸಲಲ್ಲ. ಯೂ ಆರ್ ಅನ್ ಫಿಟ್ ಅಂತ ಒಬ್ಬ ಕಲಾವಿದನಿಗೆ ಹೇಳಿದ್ರೆ ಅದು ಅವಮಾನ ಆಗುತ್ತೆ ಅಂತಾನೇ ಅವರು(ಅರ್ಜುನ್) ನಿಮಗೆ ಮೆಸೇಜ್ ಮಾಡಿದ್ದಾರೆ. ಆದ್ರೆ ನೀವು ಅದಕ್ಕೆ ಉಲ್ಟಾ ಮೆಸೇಜ್ ಮಾಡಿದ್ದೀರಾ. ಹೀಗಾಗಿ ಅವರು ಪ್ರೊಫೆಶನಲಿ ಇ-ಮೇಲ್ ಇ- ಮೇಲ್ ಮಾಡಿದ್ದಾರೆ ಅಂತ ಹೇಳಿದ್ರು.

ಈ ಇ-ಮೇಲ್ ಗೆ ನಾನೂ ಪ್ರಸ್ತಾಪ ಮಾಡಿದ್ದೇನೆ ಅಂತ ಚೇತನ್ ಹೇಳಿದ್ದಾರೆ. ಅಲ್ಲದೇ ಸರ್ಜಾ ಕುಟುಂಬದ ಮೇಲೆ ನನಗೆ ವೈಯಕ್ತಿಕವಾಗಿ ಯಾವುದೇ ದ್ವೇಷವಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಧೃವ, ವೈಯಕ್ತಿಕವಾಗಿ ದ್ವೇಷ ಇಲ್ಲ ಅಂದ ಮೇಲೆ ಒಂದು ಹುಡುಗಿಯನ್ನು ಹಿಡ್ಕೊಂಡು ಯಾಕೆ ಈ ರೀತಿ ಮಾಡ್ತಿದ್ದೀಯಾ? ಯಾಕೆ ಹುಡುಗರಿಗೆ ಯಾರಿಗೂ ಅನ್ಯಾವಾಗಿಲ್ಲ ಅಂತ ಮರು ಪ್ರಶ್ನೆ ಹಾಕಿದ ಅವರು, ಫೈರ್ ಸಂಸ್ಥೆ ಬದಲು ವಾಟರ್ ಸಂಸ್ಥೆ ಅನ್ನೋದನ್ನು ಓಪನ್ ಮಾಡು.

ನಮ್ಮ ಅಂಕಲ್ ಮೇಲೆ ನಾಯಿ, ನರಿ, ಕ್ರಿಮಿ, ಕೀಟ ಯಾರು ಏನೇ ಹೇಳಿದ್ರೂ ನಾವು ನಂಬಲ್ಲ. ನಾವು ಏನು ಅನ್ನೋದು ನಮಗೆ ಗೊತ್ತಿದೆ. ಕಾನೂನಿಗಿಂತ ನಿಮ್ಮ ಫೈರ್ ಸಂಸ್ಥೆ ದೊಡ್ಡದಲ್ಲ ಅಂದ್ರು.

ಚೇತನ್: ನಾವು ಇಲ್ಲಿ ಪ್ರಚಾರಕ್ಕೋಸ್ಕರ ನಿಂತುಕೊಂಡಿಲ್ಲ. ಈ ರೀತಿ ನೀವು ಕೆಟ್ಟದಾಗಿ ಮಾತಾಡೋದು ನಿಜವಾಗಿಯೂ ಸರಿಯಿಲ್ಲ. ಒಂದು ಕಡೆ ನಾನು ಮಹಿಳೆಯರ ಪರವಾಗಿ ಅವರಿಗೆ ಕಷ್ಟಗಳು ಆಗಬಾರದು ಅಂತಾನೂ ಹೇಳುತ್ತೀರಾ. ಇನ್ನೊಂದು ಕಡೆ ಮಹಿಳೆಯರ ಪರ ನಿಂತ್ರೆ ಅದಕ್ಕೂ ಹೇಳುತ್ತೀರಾ. ಇದು ಸರಿಯಲ್ಲ ಅಂದ್ರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

https://www.youtube.com/watch?v=5RZ_sBab49c

https://www.youtube.com/watch?v=7NpriWx6y3k

https://www.youtube.com/watch?v=o_HWldGMV30

Click to comment

Leave a Reply

Your email address will not be published. Required fields are marked *

Advertisement
Advertisement