ಬಾಲಿವುಡ್ ಬೆಡಗಿ ಸೋನಾಕ್ಷಿ ಸಿನ್ಹಾ ಅವರು ಜೂನ್ 2ರಂದು ತಮ್ಮ ಹುಟ್ಟುಹಬ್ಬವನ್ನು ಆಚರಿಸಿದ್ದರು. ದಬಾಂಗ್ ನಟಿಯ ಹುಟ್ಟುಹಬ್ಬದಂದು ನಟ ಜಹೀರ್ ಇಕ್ಬಾಲ್ ಅವರು ತಮ್ಮ ಪ್ರೀತಿಯ ಬಗ್ಗೆ ಅಧಿಕೃತಗೊಳಿಸಿದ್ದಾರೆ. ಸೋನಾಕ್ಷಿಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಿದ್ದಾರೆ. ಇದನ್ನೂ ಓದಿ:ಕನ್ನಡ ಚಿತ್ರರಂಗಕ್ಕೆ ಜೆಕೆ ಗುಡ್ ಬೈ- ಅಷ್ಟಕ್ಕೂ ಆಗಿದ್ದೇನು.?
ಸಲ್ಮಾನ್ ಖಾನ್‌ಗೆ (Salman Khan) ನಾಯಕಿಯಾಗುವ ಮೂಲಕ ಬಾಲಿವುಡ್‌ಗೆ (Bollywood) ಲಗ್ಗೆಯಿಟ್ಟ ಸುಂದರಿ ಸೋನಾಕ್ಷಿ ಸಿನ್ಹಾ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಮೊದಲ ಚಿತ್ರದಲ್ಲೇ ಗ್ರ್ಯಾಂಡ್ ವೆಲ್‌ಕಮ್ ಸಿಕ್ಕಿದ್ರು ಕೂಡ ಹೇಳಿಕೊಳ್ಳುವ ಯಶಸ್ಸು ಸಿಗಲಿಲ್ಲ. ಅದರಲ್ಲೂ ಸೋನಾಕ್ಷಿ, ಸಿನಿಮಾಗಿಂತ ಬಾಯ್‌ಫ್ರೆಂಡ್ ಜಹೀರ್ ಇಕ್ಬಾಲ್ (Zaheer Iqbal) ವಿಚಾರವಾಗಿಯೇ ಹೆಚ್ಚು ಸದ್ದು ಮಾಡಿದ್ದಾರೆ. ಇದೀಗ ನಟಿಯ ಹುಟ್ಟುಹಬ್ಬದಂದು ರೊಮ್ಯಾಂಟಿಕ್ ಆಗಿ ನಟ ಜಹೀರ್ ಪ್ರಪೋಸ್ ಮಾಡಿದ್ದಾರೆ.
ನಟಿಯ ಜೊತೆ ಕಳೆದ ಕ್ಷಣಗಳ ಫೋಟೋಗಳನ್ನು ಜಹೀರ್ ಹಂಚಿಕೊಂಡಿದ್ದಾರೆ. ತಮ್ಮ ಪೋಸ್ಟ್‌ನ ಕ್ಯಾಪ್ಶನ್‌ನ ಕೊನೆಯಲ್ಲಿ ಅವರು ಐ ಲವ್ ಯೂ ಎಂದಿದ್ದಾರೆ. ಈ ಮೂಲಕ ಅವರು ಪ್ರೀತಿ (Love) ವಿಚಾರವನ್ನು ಖಚಿತಪಡಿಸಿದ್ದಾರೆ. ಜಹೀರ್ ಜನ್ಮದಿನಕ್ಕೂ ಸೋನಾಕ್ಷಿ ಈ ಮೊದಲು ವಿಶ್ ಮಾಡಿದ್ದರು. ಈ ವೇಳೆ ಸೋನಾಕ್ಷಿ ಉದ್ದನೆಯ ಸಾಲುಗಳನ್ನು ಬರೆದು ಬರ್ತ್‌ಡೇ ವಿಶ್ ಮಾಡಿದ್ದರು. ಅಲ್ಲದೆ, ಬೆಸ್ಟ್ ಫ್ರೆಂಡ್ ಎನ್ನುವ ವಿಚಾರವನ್ನು ಒತ್ತಿ ಹೇಳಿದ್ದರು. ಇದಕ್ಕೆ ಕಾಮೆಂಟ್ ಮಾಡಿದ್ದ ಜಹೀರ್, ನಿಮ್ಮನ್ನು ನನ್ನ ನಾಯಕಿ ಎಂದು ಅಧಿಕೃತವಾಗಿ ಕರೆಯಬಹುದೇ ಎಂದಿದ್ದರು. ಇದು ಕೂಡ ಚರ್ಚೆ ಹುಟ್ಟುಹಾಕಿತು.
View this post on Instagram
ಸಲ್ಮಾನ್ ಖಾನ್ ಆಪ್ತ ಆಗಿರುವ ಜಹೀರ್ ಇಕ್ಬಾಲ್- ಸೋನಾಕ್ಷಿ ಜೋಡಿ, ಸಾಕಷ್ಟು ವರ್ಷಗಳಿಂದ ಡೇಟ್ ಮಾಡ್ತಿದ್ದಾರೆ. ಒಬ್ಬರನೊಬ್ಬರು ಪ್ರೀತಿಸುತ್ತಿದ್ದಾರೆ. ಇದೀಗ ಅಧಿಕೃತವಾಗಿ ಲವ್ ಬಾಯ್ಬಿಟ್ಟಿರುವ ಜೋಡಿ, ಸದ್ಯದಲ್ಲೇ ಮದುವೆ ಬಗ್ಗೆ ಗುಡ್ ನ್ಯೂಸ್ ಕೊಡುತ್ತಾರಾ ಅಂತಾ ಕಾದುನೋಡಬೇಕಿದೆ.