ನಟ ರಾಘವೇಂದ್ರ ರಾಜ್‌ಕುಮಾರ್ (Raghavendra Rajkumar) ಪುತ್ರ ಯುವರಾಜ್‌ಕುಮಾರ್ (Yuva Rajkumar) ದಾಂಪತ್ಯದಲ್ಲಿ ಬಿರುಕಾಗಿದೆ. ಪತ್ನಿ ಶ್ರೀದೇವಿ (Sridevi) ಡಿವೋರ್ಸ್ ನೀಡಲು ಜೂನ್ 6ರಂದು ಬೆಂಗಳೂರಿನ ಫ್ಯಾಮಿಲಿ ಕೋರ್ಟ್‌ಗೆ ಯುವ ಅರ್ಜಿ ಸಲ್ಲಿಸಿದ್ದಾರೆ. ಪತ್ನಿ ಶ್ರೀದೇವಿಗೆ ಕೋರ್ಟ್‌ನಿಂದ ಈಗಾಗಲೇ ಡಿವೋರ್ಸ್ ನೋಟಿಸ್ ಕೂಡ ಕಳುಹಿಸಲಾಗಿದೆ. ಇದನ್ನೂ ಓದಿ:ಅದ್ಧೂರಿಯಾಗಿ ನಡೆಯಿತು ಅರ್ಜುನ್ ಸರ್ಜಾ ಪುತ್ರಿ ಮದುವೆ
ಪ್ರೀತಿಸಿ ಮದುವೆಯಾಗಿದ್ದ ಯುವ ಮತ್ತು ಶ್ರೀದೇವಿ ಜೋಡಿ ದಾಂಪತ್ಯಕ್ಕೆ ಅಂತ್ಯ ಹಾಡಲು ಮುಂದಾಗಿದ್ದಾರೆ. ಜೂನ್ 6ರಂದು ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವ ಯುವರಾಜ್‌ಕುಮಾರ್, ಜುಲೈ 4ರಂದು ವಿಚಾರಣೆಗೆ ನಿಗದಿಯಾಗಿದೆ.
ಕಳೆದ 6 ತಿಂಗಳಿಂದ ಇಬ್ಬರ ಡಿವೋರ್ಸ್ ಸುದ್ದಿ ಹರಿದಾಡುತ್ತಿತ್ತು. ಕೆಲ ತಿಂಗಳುಗಳಿಂದ ಇಬ್ಬರೂ ಜೊತೆಯಾಗಿ ಕೂಡ ವಾಸಿಸುತ್ತಿಲ್ಲ. ಇನ್ನೂ ‘ಯುವ’ ಸಿನಿಮಾದ ಪ್ರಚಾರ ಕಾರ್ಯದಲ್ಲಿಯೂ ಕೂಡ ಶ್ರೀದೇವಿ ಭಾಗಿಯಾಗಿರಲಿಲ್ಲ. ಸದ್ಯ ಶ್ರೀದೇವಿ ಅವರು ವಿದೇಶದಲ್ಲಿ ನೆಲೆಸಿದ್ದಾರೆ ಎನ್ನಲಾಗಿದೆ.
ಹಲವು ವರ್ಷಗಳ ಪ್ರೀತಿಗೆ ಮೈಸೂರು ಮೂಲದ ಶ್ರೀದೇವಿ ಜೊತೆ 2018ರಲ್ಲಿ ಯುವರಾಜ್‌ಕುಮಾರ್ ನಿಶ್ಚಿತಾರ್ಥ ಜರುಗಿತ್ತು. 2019ರ ಮೇ 26ರಂದು ಅದ್ಧೂರಿಯಾಗಿ ಇಬ್ಬರ ಮದುವೆ ಜರುಗಿತ್ತು. ಈಗ ಇಬ್ಬರೂ ಡಿವೋರ್ಸ್‌ಗೆ ಮುಂದಾಗಿದ್ದಾರೆ.