ಬೆಂಗಳೂರು: ಲೂಸ್ ಮಾದ ಯೋಗಿ ಮತ್ತು ಸಾಹಿತ್ಯರ ಮದುವೆಯ ಶಾಸ್ತ್ರಗಳು ಸಂಪ್ರದಾಯಬದ್ಧವಾಗಿ ಇಂದು ವರನ ಮನೆಯಲ್ಲಿ ನಡೆದವು.
ನಗರದ ಕೋಣನಕುಂಟೆಯಲ್ಲಿರುವ ಯೋಗಿ ಅವರ ಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಚಪ್ಪರ ಪೂಜೆ, ಅರಶಿಣದ ಶಾಸ್ತ್ರ, ಬಳೆ ಶಾಸ್ತ್ರ, ಅರಶಿಣ ಕುಟ್ಟುವ ಶಾಸ್ತ್ರ, ಮಂಗಳ ಸ್ನಾನ, ಅಕ್ಕಿ ಹಸೆ ಶಾಸ್ತ್ರಗಳು ನಡೆದವು. ಈ ಶಾಸ್ತ್ರಗಳಲ್ಲಿ ಯೋಗಿ ಕುಟುಂಬದ ಆಪ್ತರು ಮಾತ್ರ ಭಾಗಿಯಾಗಿದ್ದರು.
ವರ ಯೋಗೇಶ ಅವರಿಗೆ ಅರಿಶಿಣ ಹಚ್ಚುವ ಕಾರ್ಯಕ್ರಮವೂ ನಡೆಯಿತು. ಯೋಗಿ ಮತ್ತು ಸಾಹಿತ್ಯ ಜೂನ್ 11ರಂದು ಸರಳವಾಗಿ ಗುರು ಹಿರಿಯರ ಸಮ್ಮುಖದಲ್ಲಿ ಉಂಗುರ ಬದಲಿಸಿಕೊಂಡಿದ್ದರು. ಇದೇ ಗುರುವಾರ (ನವೆಂಬರ್ 02)ರಂದು ನಗರದ ಬನಶಂಕರಿ ಹಂತದಲ್ಲಿರುವ ಕನ್ವೆನ್ಷನ್ ಹಾಲ್ ನಲ್ಲಿ ಮದುವೆ ಕಾರ್ಯಕ್ರಮ ನಡೆಯಲಿದೆ.
ಗುರುವಾರದಂದು ಬೆಳಗಿನ ಜಾವ 5 ಗಂಟೆಗೆ ಮುಹೂರ್ತ ಕಾರ್ಯಕ್ರಮ ನಡೆಯಲಿದ್ದು, ಸಂಜೆ 6 ಗಂಟೆಗೆ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ. 1 ರಿಂದ 10ನೇ ತರಗತಿ ವರೆಗೆ ಯೋಗಿ ಮತ್ತು ಸಾಹಿತ್ಯ ಯಡಿಯೂರಿನ ಎಸ್‍ಎಸ್‍ವಿಕೆ ಶಾಲೆಯಲ್ಲಿ ಒಟ್ಟಿಗೆ ಓದಿದ್ದು, ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ಸಾಹಿತ್ಯ ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಎಂಜಿನಿಯರ್ ಆಗಿ ಕೆಲಸ ಮಾಡಿಕೊಂಡಿದ್ದಾರೆ.
https://www.youtube.com/watch?v=zLNqtRmklU8