ನಟ ಲೂಸ್ ಮಾದ ಯೋಗೇಶ್ ಗೆ ಇಂದು ನಿಶ್ಚಿತಾರ್ಥ- ಮದುವೆ ಡೇಟ್ ಫಿಕ್ಸ್

Public TV
1 Min Read
loose

ಬೆಂಗಳೂರು: ಸ್ಯಾಂಡಲ್‍ವುಡ್ ನಟ ಲೂಸ್ ಮಾದ ಯೋಗೇಶ್, ತಮ್ಮ ಬಾಲ್ಯದ ಗೆಳತಿ ಸಾಹಿತ್ಯ ಜೊತೆ ಇಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.

LOOSE MADA 1

ಮೈಸೂರು ಮೂಲದ ಅರಸ್ ಕುಟುಂಬದ ಚೆಲುವೆ ಸಾಹಿತ್ಯ ಅವರು ಸ್ಯಾಂಡಲ್ ವುಡ್‍ನ ಯೋಗೇಶ್ ಅವರಿಗೆ ಉಂಗುರ ತೊಡಿಸಲಿದ್ದಾರೆ. ಸಾಹಿತ್ಯ ನಗರದ ಪ್ರತಿಷ್ಠಿತ ಕಂಪೆನಿಯಲ್ಲಿ ಸಾಫ್ಟ್ ವೇರ್ ಇಂಜಿನೀಯರ್ ಆಗಿದ್ದಾರೆ.

LOOSE MADA 2

1 ರಿಂದ 10ನೇ ತರಗತಿ ವರೆಗೆ ಯೋಗೇಶ್ ಮತ್ತು ಸಾಹಿತ್ಯ ಯಡಿಯೂರಿನ ಎಸ್‍ಎಸ್‍ವಿಕೆ ಶಾಲೆಯಲ್ಲಿ ಒಟ್ಟಿಗೆ ಓದಿದ್ದು, ಸ್ನೇಹ ಪ್ರೀತಿಯಾಗಿ, ಪ್ರೇಮಾಂಕುರಿಸಿ ಇದೀಗ ಮದುವೆಗೆ ಸಜ್ಜಾಗಿದ್ದಾರೆ. ನಿಶ್ಚತಾರ್ಥ ಕಾರ್ಯಕ್ರಮದಲ್ಲಿ ಎರಡೂ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಲಿದ್ದಾರೆ.

ನವೆಂಬರ್ 2 ಮತ್ತು 3ಕ್ಕೆ ಕನಕಪುರ ರಸ್ತೆಯ ಶ್ರೀ ಕನ್ವೆನ್ಷನ್ ಸೆಂಟರ್ ನಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.

Capture copy 3 1

LOOSE MADA 3

LOOSE

 

 

Share This Article
Leave a Comment

Leave a Reply

Your email address will not be published. Required fields are marked *