ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic) ಚಿತ್ರದ ಬದಲಾದ ರಿಲೀಸ್ ದಿನಾಂಕ ಘೋಷಣೆಯಾಗಿದೆ. ಮುಂದಿನ ವರ್ಷ (2026) ಮಾ.19 ಕ್ಕೆ ಟಾಕ್ಸಿಕ್ ಸಿನಿಮಾ ತೆರೆಗೆ ಬರಲಿದೆ.
ಈ ಮೊದಲು ಇದೇ ಏ.10 ಕ್ಕೆ ರಿಲೀಸ್ ಡೇಟ್‌ನ್ನು ಯಶ್ ಘೋಷಿಸಿದ್ದರು. ಫಸ್ಟ್ ಲುಕ್ ಟೀಸರ್‌ನಲ್ಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದರು. ಆದರೆ, ಟಾಕ್ಸಿಕ್ ವೀಕ್ಷಿಸಲು ಇನ್ನೊಂದು ವರ್ಷ ಕಾಯಬೇಕು.
19-03-2026 🙏 pic.twitter.com/9wk8ujqxgs
— Yash (@TheNameIsYash) March 22, 2025
ಏಕಕಾಲದಲ್ಲಿ ಇಂಗ್ಲಿಷ್ ಹಾಗೂ ಕನ್ನಡ ಭಾಷೆಯ ಟಾಕ್ಸಿಕ್ ತಯಾರಾಗುತ್ತಿದ್ದು, ಬೇರೆ ಬೇರೆ ಭಾಷೆಗಳಲ್ಲೂ ಬರ್ತಿದೆ. ಯಶ್ ನಟನೆ, ಗೀತು ಮೋಹನ್‌ದಾಸ್ ನಿರ್ಮಾಣ ಸಿನಿಮಾವನ್ನು ನೋಡಲು ಫ್ಯಾನ್ಸ್ ಕಾತರದಿಂದ ಕಾಯ್ತಿದ್ದಾರೆ. ಯಶ್ ಹಾಗೂ ಕೆವಿಎನ್ ಫಿಲಂಸ್ ನಿರ್ಮಾಣದ ಸಿನಿಮಾ ಇದಾಗಿದೆ.