ಕೆಜಿಎಫ್ ಸಿನಿಮಾದ ಮೂಲಕ ನ್ಯಾಷನಲ್ ಸ್ಟಾರ್ ಪಟ್ಟಕ್ಕೇರಿದ ಯಶ್ ಈಗ ಆಗಾಗ ಮುಂಬೈನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ ನಲ್ಲಿ ಏರ್‌ರ್ಪೋರ್ಟ್‌ಗೆ ಬಂದಿಳಿದ ಯಶ್ ಅವರ ಲುಕ್ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದೆ.
ವಿಮಾನ ನಿಲ್ದಾಣದಲ್ಲಿ ಯಶ್ ಅವರು ಉದ್ದ ಗಡ್ಡ, ಪುಟ್ಟದಾದ ಪೋನಿ ಹಾಗೂ ಕೂಲಿಂಗ್ ಗ್ಲಾಸ್ ತೊಟ್ಟು ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಇದನ್ನೂ ಓದಿ: ಹೊಸ ಹಲ್ಲು ಹುಟ್ಟಿಲ್ಲವೆಂದು ಪ್ರಧಾನಿಗೆ ಪತ್ರ ಬರೆದ ಪುಟಾಣಿಗಳು
ಅಲ್ಲದೆ ಕೆಜಿಎಫ್ ಚಾಪ್ಟರ್ 2 ಸಿನಿಮಾದ ರಿಲೀಸ್‍ಗಾಗಿ ಕಾಯುತ್ತಿರುವ ಯಶ್ ಅವರು ಮತ್ತೆ ಯಾವ ಹೊಸ ಸಿನಿಮಾದಲ್ಲಿ ನಟಿಸಲಿದ್ದಾರೆ ಅನ್ನೋ ಕುತೂಹಲ ಸಿನಿರಂಗ ಸೇರಿದಂತೆ ಅಭಿಮಾನಿಗಳಲ್ಲೂ ಇದೆ. ಹೀಗಿರುವಾಗಲೇ ಯಶ್ ಅವರು ಮುಂಬೈನಲ್ಲಿ ಕಾಣಿಸಿಕೊಂಡಿದ್ದಾರೆ. ಯಶ್ ಅವರು ಮುಂಬೈನ ವಿಮಾನ ನಿಲ್ದಾಣದಲ್ಲಿದ್ದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಯಶ್ ಅವರನ್ನು ಮುಂಬೈನಲ್ಲಿ ವಿಮಾನ ನಿಲ್ದಾಣದಲ್ಲಿ ನೋಡಿದ ನಂತರ ಈ ವಿಷಯವಾಗಿ ಸಾಕಷ್ಟು ಗುಸು ಗುಸು ಆರಂಭವಾಗಿದೆ. ಹೌದು, ಯಶ್ ಅವರು ಹೊಸ ಸಿನಿಮಾ ಕುರಿತಾಗಿ ಚರ್ಚಿಸೋಕೆ ಮುಂಬೈ ಹೋಗಿದ್ದಾರೆ. ಅಲ್ಲಿ ಅವರು ನಿರ್ದೇಶಕರು ಹಾಗೂ ನಿರ್ಮಾಪಕರನ್ನು ಭೇಟಿಯಾಗಿದ್ದಾರೆ ಎನ್ನುವ ಸುದ್ದಿ ಹಬ್ಬುತ್ತಿದೆ. ಇದನ್ನೂ ಓದಿ: ಡೆಲ್ಲಿ ಮಣಿಸಿದ ಕೋಲ್ಕತ್ತಾ – 3 ವಿಕೆಟ್‍ಗಳ ಜಯ
ಕೆ.ಜಿ.ಎಫ್ ಸಿನಿಮಾ ಮೂಲಕ ನಂ.1 ಸ್ಟಾರ್ ಪಟ್ಟಕ್ಕೇರಿರೋ ರಾಕಿಂಗ್ ಸ್ಟಾರ್ ಯಶ್‍ರ ಪ್ರತಿ ಹೆಜ್ಜೆ ಮೇಲೂ ನಿರೀಕ್ಷೆ ಮೂಡಿದೆ. ಯಶ್ ಪ್ರಶಾಂತ್ ನೀಲ್ ನಿರ್ದೇಶನದ ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇದು 2022ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ.