ಗ್ಯಾಂಗ್‌ಸ್ಟರ್‌ ಲುಕ್‌ನಲ್ಲಿ ಯಶ್-‌ ‘ಟಾಕ್ಸಿಕ್‌’ ಬರ್ತ್‌ಡೇ ಪೀಕ್‌ ಗ್ಲಿಂಪ್ಸ್‌ ಔಟ್‌

Public TV
1 Min Read
yash 1 2

ರಾಕಿಂಗ್‌ ಸ್ಟಾರ್‌ ಯಶ್‌ಗೆ (Yash) ಇಂದು (ಜ.8) ಹುಟ್ಟುಹಬ್ಬದ ಸಂಭ್ರಮವಾಗಿದ್ದು, ಫ್ಯಾನ್ಸ್‌ಗೆ ‘ಟಾಕ್ಸಿಕ್‌’ (Toxic) ಟೀಮ್‌ ಬಿಗ್‌ ಸರ್ಪ್ರೈಸ್‌ ಕೊಟ್ಟಿದೆ. ‘ಟಾಕ್ಸಿಕ್‌’ನಲ್ಲಿ ಗ್ಯಾಂಗ್‌ಸ್ಟರ್‌ ಅವತಾರದಲ್ಲಿರುವ ಯಶ್‌ ಲುಕ್‌ ಅನ್ನು ರಿವೀಲ್‌ ಮಾಡಲಾಗಿದೆ. ಇದನ್ನೂ ಓದಿ:BBK 11: ಭವ್ಯಾ ಇಲ್ಲಿಯವರೆಗೆ ಬರಲು ನಾನೇ ಕಾರಣ- ವರಸೆ ಬದಲಿಸಿದ ತ್ರಿವಿಕ್ರಮ್

yash 1 1

ರಾಕಿ ಭಾಯ್‌ ಬರ್ತ್‌ಡೇ ಪ್ರಯುಕ್ತ 59 ಸೆಕೆಂಡ್‌ ಗ್ಲಿಂಪ್ಸ್‌ ರಿವೀಲ್‌ ಆಗಿದ್ದು, ಡ್ರಗ್ಸ್‌ ಮಾಫಿಯಾ ಕುರಿತ ಚಿತ್ರವಾಗಿದೆ. ರಿಲೀಸ್‌ ಆದ ಗ್ಲಿಂಪ್ಸ್‌ನಲ್ಲಿ ಕಲರ್‌ಫುಲ್‌ ಸೆಟ್‌ನಲ್ಲಿ ನಟನ ಸ್ಟೈಲೀಶ್‌ ವಾಕ್‌, ಹಾಟ್‌ ಮ್ಯಾನರಿಸಮ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇನ್ನೂ ‘ಟಾಕ್ಸಿಕ್‌’ ಸಿನಿಮಾವು ಬೆಂಗಳೂರಿನ HMT ಮೈದಾನದಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾದ ಬಳಿಕ ಮುಂಬೈ, ಗೋವಾ, ಮಂಗಳೂರಿನಲ್ಲಿ ಶೂಟಿಂಗ್‌ ನಡೆಸಿದೆ ಚಿತ್ರತಂಡ.

ಈ ಸಿನಿಮಾವನ್ನು KVN ಪ್ರೊಡಕ್ಷನ್ಸ್‌ ಹಾಗೂ ಯಶ್‌ ನಿರ್ಮಾಣದ ಸಂಸ್ಥೆ ಮಾನ್‌ಸ್ಟರ್‌ ಮೈಂಡ್‌ ಕ್ರಿಯೇಷನ್ಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿದೆ. ಚಿತ್ರಕ್ಕೆ ಗೀತು ಮೋಹನ್‌ದಾಸ್‌ ನಿರ್ದೇಶನ ಮಾಡುತ್ತಿದ್ದಾರೆ. ಇನ್ನೂ ಯಶ್‌ ನಟನೆಯ 19ನೇ ಸಿನಿಮಾ ಟಾಕ್ಸಿಕ್‌ ಚಿತ್ರವಾಗಿದ್ದು, ‘ಕೆಜಿಎಫ್‌ 2’ ಸಕ್ಸಸ್‌ ಬಳಿಕ ಈ ಸಿನಿಮಾ ಮೇಲೆ ಫ್ಯಾನ್ಸ್‌ಗೆ ಭಾರೀ ನಿರೀಕ್ಷೆಯಿದೆ.

Share This Article