ನ್ಯಾಷನಲ್ ಸ್ಟಾರ್ ಯಶ್ ‘ಟಾಕ್ಸಿಕ್’ (Toxic) ಸಿನಿಮಾಗಾಗಿ ಮುಂಬೈನಲ್ಲಿ ಬೀಡು ಬಿಟ್ಟಿದ್ದಾರೆ. ಸಿನಿಮಾ ಕೆಲಸಕ್ಕೆ ಬ್ರೇಕ್ ಬೆನ್ನಲ್ಲೇ ಪತ್ನಿ ರಾಧಿಕಾ, ಮಕ್ಕಳೊಂದಿಗೆ ಯಶ್ ಗಲ್ಲಿ ಸುತ್ತಾಡಿದ್ದಾರೆ. ಫ್ಯಾಮಿಲಿ ಜೊತೆ ಯಶ್ (Yash) ಗಲ್ಲಿ ಸುತ್ತಿದ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ.
‘ಟಾಕ್ಸಿಕ್’ ಸಿನಿಮಾ ಕೆಲಸದ ನಡುವೆ ಫ್ಯಾಮಿಲಿಗೂ ಯಶ್ ಸಮಯ ನೀಡಿದ್ದಾರೆ. ಮುಂಬೈನಲ್ಲಿ ರಾಧಿಕಾ (Radhika Pandit) ಮತ್ತು ಮುದ್ದಿನ ಮಕ್ಕಳೊಂದಿಗೆ ಮುಂಬೈ ಬೀದಿ ಸುತ್ತಾಡಿದ್ದಾರೆ. ಇದು ಮುಂಬೈ ಪಾಪರಾಜಿಗಳ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಸಾಮಾನ್ಯರಂತೆ ಮುಂಬೈನಲ್ಲಿ ಓಡಾಡಿದ ಯಶ್ ಫ್ಯಾಮಿಲಿ ನಡೆಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.
View this post on Instagram
ಇನ್ನೂ ಬೆಂಗಳೂರಿನಲ್ಲಿ ಕೆಲ ಭಾಗದ ಚಿತ್ರೀಕರಣ ನಡೆದ ಮೇಲೆ ಈಗ ಮುಂಬೈನಲ್ಲಿ ‘ಟಾಕ್ಸಿಕ್’ ಸಿನಿಮಾದ ಶೂಟಿಂಗ್ ನಡೆಯುತ್ತಿದೆ. ಇತ್ತೀಚೆಗೆ ‘ಟಾಕ್ಸಿಕ್’ ಸೆಟ್‌ನಲ್ಲಿ ಹುಮಾ ಖುರೇಶಿ ಕಾಣಿಸಿಕೊಂಡಿದ್ದರು. ಅವರು ಈ ಸಿನಿಮಾದ ಭಾಗವಾಗಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ:ದರ್ಶನ್ ಸರ್‌ಗೆ ಬೇಲ್ ಸಿಕ್ಕಿದ್ದು ಖುಷಿಯಾಯ್ತು: ‘ಬಿಗ್ ಬಾಸ್’ ಎಲಿಮಿನೇಷನ್ ಬಳಿಕ ಧರ್ಮ ರಿಯಾಕ್ಷನ್
ಈ ಸಿನಿಮಾಗೆ ಮಲಯಾಳಂ ನಿರ್ದೇಶಕಿ ಗೀತು ಮೋಹನ್‌ದಾಸ್ ನಿರ್ದೇಶನ ಮಾಡುತ್ತಿದ್ದಾರೆ. ಬಹುಭಾಷೆಗಳಲ್ಲಿ ಮೂಡಿ ಬರಲಿರುವ ಈ ಚಿತ್ರಕ್ಕೆ ಕೆವಿಎನ್ ಸಂಸ್ಥೆ ಜೊತೆ ಯಶ್ ಕೂಡ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ಈ ಸಿನಿಮಾದ ಜೊತೆಗೆ ‘ರಾಮಾಯಣ’ ಚಿತ್ರದಲ್ಲಿ ಯಶ್ ರಾವಣನಾಗಿಯೂ ಅಬ್ಬರಿಸಲಿದ್ದಾರೆ.