ನ್ಯಾಷನಲ್ ಸ್ಟಾರ್ ಯಶ್ (Yash) ಸದ್ಯ ‘ಟಾಕ್ಸಿಕ್’ (Toxic Film) ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆ ಯಶ್ ಅವರು ತಮ್ಮ ಅಭಿಮಾನಿಗಳಿಗೆ ಹುಟ್ಟುಹಬ್ಬದ ಕುರಿತಾಗಿ ಸಂದೇಶವೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:ಮಗು ಬಗ್ಗೆ ಸುಳಿವು ಕೊಟ್ಟ ದೀಪಿಕಾ ಪಡುಕೋಣೆ
ಜನವರಿ 8, ನೀವು ನನ್ನ ಮೇಲಿಟ್ಟಿರುವ ಅಭಿಮಾನವನ್ನು ನನ್ನ ಜೊತೆ ಖುದ್ದು ವ್ಯಕ್ತಪಡಿಸಬೇಕೆಂದು ಅಪೇಕ್ಷೆ ಪಡುವ ದಿನ. ನನಗೂ ಅಷ್ಟೇ, ಜನ್ಮದಿನದ ನೆಪದಲ್ಲಿ ನಿಮ್ಮೊಂದಿಗೆ ಸಮಯ ಕಳೆಯುವ ಹಂಬಲ, ಆದರೆ ಸಿನಿಮಾದ ಕೆಲಸ ನನಗೆ ಬಿಡುವಿಲ್ಲದಂತೆ ಮಾಡಿದೆ. ಅನಿವಾರ್ಯವಾಗಿ ಪ್ರಯಾಣ ಮಾಡಲೇಬೇಕಿರುವುದರಿಂದ ಈ ಜನವರಿ 8 ನಿಮಗೆ ಸಿಗಲು ಸಾಧ್ಯವಾಗುತ್ತಿಲ್ಲ. ನಿಮ್ಮಗಳ ಅಭಿಮಾನ, ನನ್ನ ಅನುಪಸ್ಥಿತಿಯನ್ನು, ಅರ್ಥ ಮಾಡಿಕೊಳ್ಳುತ್ತದೆ ಎಂಬ ನಂಬಿಕೆ ನನ್ನದು. ಸದಾಕಾಲ ನನ್ನ ಜೊತೆ ಇರುವ ನಿಮ್ಮ ಪ್ರೀತಿ, ಅಭಿಮಾನವೇ ನನಗೆ ಹುಟ್ಟುಹಬ್ಬದ ಉಡುಗೊರೆ ಎಂದಿದ್ದಾರೆ ಯಶ್.
ಯಶ್ 19ನೇ ‘ಟಾಕ್ಸಿಕ್’ ಸಿನಿಮಾದ ಘೋಷಣೆ ಮಾಡಿ ಒಂದು ತಿಂಗಳಾಗಿದೆ. ನೀವು ಅದಕ್ಕೆ ತೋರುತ್ತಿರುವ ಪ್ರೀತಿ, ಪ್ರಶಂಸೆ ನನಗೆ ಸರ್ವಸ್ವವೇ ಆಗಿದೆ. ನಿಮ್ಮ ಉತ್ಸಾಹ, ನಿರೀಕ್ಷೆ, ಕತೆಯ ಬಗ್ಗೆ ನೀವು ಯೋಚಿಸುತ್ತಿರುವ ರೀತಿ, ಹಂಚಿಕೊಳ್ಳುತ್ತಿರುವ ಅಭಿಪ್ರಾಯಗಳು ಇನ್ನೂ ಹೆಚ್ಚಿಗೆ ಕೆಲಸ ಮಾಡಲು ನನಗೆ ಸ್ಪೂರ್ತಿ ನೀಡುತ್ತಿವೆ ಎಂದಿದ್ದಾರೆ ಯಶ್.
ನಿಮ್ಮೊಂದಿಗೆ ಖಾಸಗಿಯಾಗಿ ಬೆರೆಯುವುದು, ಮಾತನಾಡುವುದು ನಾನು ಉಳಿಸಿಕೊಳ್ಳುವ ಅತ್ಯಮೂಲ್ಯ ನೆನಪು, ಇದು ಸತ್ಯ. ಆದರೆ ಆ ಭೇಟಿಗೆ ಇನ್ನೂ ಸ್ವಲ್ಪ ದಿನ ಕಾಯಬೇಕಾಗಬಹುದು ಏಕೆಂದರೆ ಜನವರಿ 8ರಂದು ನಾನು ಲಭ್ಯವಿರಲು ಆಗುತ್ತಿಲ್ಲ. ವೈಯಕ್ತಿಕ ಭೇಟಿ ಸಾಧ್ಯವಾಗದಿದ್ದರೂ ನಿಮ್ಮ ಒಂದು ಹಾರೈಕೆ ನನಗೆ ಬಹಳ ಅಮೂಲ್ಯ ಎಂದು ಬರೆದುಕೊಂಡಿದ್ದಾರೆ.
‘ಕೆಜಿಎಫ್ 2’ (KGF 2) ಬಳಿಕ ನಿರ್ದೇಶಕಿ ಗೀತು ಮೋಹನ್‌ದಾಸ್ ಜೊತೆ ‘ಟಾಕ್ಸಿಕ್’ (Toxic) ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಇನ್ಯಾವಾಗ ಸಿನಿಮಾ ಕುರಿತು ಅಪ್‌ಡೇಟ್ ಕೊಡ್ತಾರೆ ಯಶ್, ಕಾಯಬೇಕಿದೆ.