ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹು ನಿರೀಕ್ಷಿತ ಚಿತ್ರ ಕೆಜಿಎಫ್ ದೇಶದ್ಯಾಂತ ಸದ್ದು ಮಾಡುತ್ತಿದ್ದು, ಇದೇ ವೇಳೆ ಯಶ್ ತಮ್ಮ ಟ್ವಿಟ್ಟರ್ ಹ್ಯಾಂಡಲ್ ಹೆಸರನ್ನು @nimmayash ನಿಂದ @Thenameisyash ಎಂದು ಬದಲಾಯಿಸಿಕೊಂಡಿದ್ದಾರೆ.
ಕೆಜಿಎಫ್ ಚಿತ್ರದ 2ನೇ ಟ್ರೇಲರ್ ಬಿಡುಗಡೆಯಾಗಿದ್ದು, ಚಿತ್ರ ಭರವಸೆಯನ್ನು ಮೂಡಿಸಿದೆ. ಆದರೆ ಇತ್ತ ಯಶ್ ತಮ್ಮ ಟ್ವಿಟ್ಟರ್ ಹ್ಯಾಡಲ್ ಹೆಸರು ಬದಲಾವಣೆ ಮಾಡಿರುವುದು ಕೂಡ ಚರ್ಚೆಗೆ ಕಾರಣವಾಗಿದೆ. ಇಷ್ಟು ದಿನ ನಿಮ್ಮ ಯಶ್ ಎಂದು ಇದ್ದ ಹೆಸರು ಅಭಿಮಾನಿಗಳ ಮನ ಮುಟ್ಟುವಂತಿತ್ತು. ಆದರೆ ಸದ್ಯ ಇಂಗ್ಲಿಷ್ ನಲ್ಲಿ ಬದಲಾಗಿರುವುದು ಬಗ್ಗೆ ಕೆಲ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮತ್ತು ಕೆಲವರು ಈ ಕ್ರಮವನ್ನು ಸಮರ್ಥಿಸಿ ಬೆಂಬಲ ನೀಡಿದ್ದಾರೆ.
ಕೆಲ ಅಭಿಮಾನಿಗಳು ಈ ಕುರಿತು ತಮ್ಮ ಅಭಿಪ್ರಾಯ ತಿಳಿಸಿ ಟ್ವೀಟ್ ಮಾಡಿದ್ದು, ಕನ್ನಡ ಹೆಸರನ್ನು ಇಂಗ್ಲಿಷ್ ಭಾಷೆಗೆ ಏಕೆ ಬದಲಾಯಿಸಿದ್ದು ಎಂದು ಪ್ರಶ್ನಿಸಿದ್ದಾರೆ. ಇತ್ತ ಕೆಲ ಅಭಿಮಾನಿಗಳು ಇದು ಅವರ ವೈಯಕ್ತಿಕ ವಿಚಾರವಾಗಿದ್ದು, ಯಶ್ ಅವರ ಪ್ರೊಫೈಲ್ ಹೆಮ್ಮೆಯ ಕನ್ನಡಿಗ ಎಂದೇ ಇದೆ. ಕನ್ನಡ ಚಿತ್ರರಂಗದ ಬೆಳವಣಿಗೆ ಬಗ್ಗೆ ಖುಷಿ ಪಡಿ ಎಂದು ಸಲಹೆ ನೀಡಿದ್ದಾರೆ.
ಉಳಿದಂತೆ `ಕೆಜಿಎಫ್’ ಸಿನಿಮಾ ಈಗಾಗಲೇ ಎರಡು ಟ್ರೇಲರ್ ಒಂದು ಹಾಡು ರಿಲೀಸ್ ಮಾಡಿ ಸದ್ದು ಮಾಡುತ್ತಿದೆ. ಈ ಸಿನಿಮಾ ತೆಲುಗು, ಹಿಂದಿ, ತಮಿಳು, ಮಲಯಾಳಂ ಹಾಗೂ ಕನ್ನಡ ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ. ಇದೇ ತಿಂಗಳು 21 ರಂದು ಜಗತ್ತಿನಾದ್ಯಂತ ಸಿನಿಮಾ ಬಿಡುಗಡೆಯಾಗುತ್ತಿದ್ದು, ಇನ್ನು ಕೇವಲ 15 ದಿನಗಳು ಮಾತ್ರ ಬಾಕಿ ಇದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv