ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮನೆಯಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿದ್ದ ಐಟಿ ದಾಳಿ ಕೊನೆಯ ಹಂತ ತಲುಪಿದೆ. ಇತ್ತ ನಟ ಯಶ್ ಅವರಿಗೆ ಅಭಿಮಾನಿಯೊಬ್ಬರು ರಿಜಿಸ್ಟರ್ ಪೋಸ್ಟ್ ಮಾಡಿದ್ದಾರೆ.
ನಟ ಯಶ್ ಅಭಿಮಾನಿಯೊಬ್ಬರು ಬೆಂಗಳೂರಿನ ಬನಶಂಕರಿ ವಿಳಾಸದಿಂದ ಯಶ್ ಮನೆಗೆ ರಿಜಿಸ್ಟರ್ ಪೋಸ್ಟ್ ಮಾಡಿದ್ದಾರೆ. ಅಭಿಮಾನಿ ತನ್ನ ನೆಚ್ಚಿನ ನಟನ ‘ಕೆಜಿಎಫ್’ ಸಿನಿಮಾವನ್ನು ನೋಡಿ ಅದರ ಬಗ್ಗೆ ರಿವ್ಯೂ ಬರೆದು ಪೋಸ್ಟ್ ಮೂಲಕ ಯಶ್ ಅವರಿಗೆ ತಲುಪಿಸಿದ್ದಾರೆ. ಸದ್ಯಕ್ಕೆ ಯಶ್ ಮನೆಯಲ್ಲಿ ಐಟಿ ದಾಳಿ ನಡೆಯುತ್ತಿರುವುದರಿಂದ ಅಭಿಮಾನಿಯ ಪೋಸ್ಟನ್ನು ಇನ್ನೂ ತೆಗೆದು ನೋಡಲು ಸಾಧ್ಯವಾಗಿಲ್ಲ ಎಂಬುದಾಗಿ ತಿಳಿದುಬಂದಿದೆ. ಇದನ್ನೂ ಓದಿ: ಐಟಿ ದಾಳಿ ಮುಗಿದರೂ ನಟರಿಗೆ ತಪ್ಪದ ಸಂಕಷ್ಟ
Advertisement
Advertisement
ಯಶ್ ಮನೆಯಲ್ಲಿ ಸತತ 33 ಗಂಟೆಯಿಂದ ಶೋಧ ಕಾರ್ಯ ನಡೆಸಿದ್ದು, ಈಗ ಕೊನೆಯ ಹಂತಕ್ಕೆ ತಲುಪಿದೆ. ಶುಕ್ರವಾರ ರಾತ್ರಿ ಯಶ್ ಮನೆಗೆ ಜಂಟಿ ಆಯುಕ್ತ ರಮೇಶ್ ಅಂತಿಮವಾಗಿ ಭೇಟಿ ಕೊಟ್ಟು ದಾಖಲೆಗಳನ್ನ ಪರಿಶೀಲನೆ ಮಾಡಿದ್ದಾರೆ. ಬಳಿಕ ಯಶ್ ಮದುವೆ ಹಾಗೂ ರಾಧಿಕಾ ಸೀಮಂತದಲ್ಲಿ ಬಂದಿದ್ದ ದುಬಾರಿ ಉಡುಗೊರೆಗಳ ಬಗ್ಗೆ ವಿವರ ಕೇಳಿದ್ದಾರೆ. ಕೊನೆಗೆ ಇಬ್ಬರು ಅಧಿಕಾರಿಗಳು ಪಂಚನಾಮೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಸಂಜೆ ವೇಳಗೆ ಎಲ್ಲವೂ ಬಹುತೇಕ ಅಂತ್ಯ ಸಾಧ್ಯತೆ ಇದೆ. ಕೊನೆಯ ಹಂತದ ವಿಚಾರಣೆಯಲ್ಲಿ ಯಶ್ ಮತ್ತು ಅವರ ತಾಯಿ ಪುಷ್ಪಾ ಭಾಗಿಯಾಗಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.
Advertisement
Advertisement
ಐಟಿ ದಾಳಿ ಹಿನ್ನೆಲೆಯಲ್ಲಿ ಮನೆಯ ಕಾಂಪೌಂಡ್ ಒಳಗೆ ಯಶ್ ಕಾಣಿಸಿಕೊಂಡಿದ್ದು, ಫುಲ್ ರಿಲ್ಯಾಕ್ಸ್ ಮೂಡಿನಲ್ಲಿ ಆಪ್ತರೊಂದಿಗೆ ನಿರಾಳವಾಗಿರುವಂತೆ ಕಾಣಿಸಿಕೊಂಡಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv