ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ಅವರ ಮನೆಯಲ್ಲಿ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬವನ್ನು ಆಚರಿಸಲಾಗಿದ್ದು, ಐರಾ ಹಾಗೂ ಯಥರ್ವ್ ಸಾಂಸ್ಕೃತಿಕ ಉಡುಗೆ ತೊಟ್ಟು ಫುಲ್ ಮಿಂಚಿದ್ದಾರೆ.
View this post on Instagram
ವರಮಹಾಲಕ್ಷ್ಮೀ ಪೂಜೆ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದು, ಅಪ್ಪನೊಂದಿಗೆ ಹಾಗೂ ಅಜ್ಜಿಯೊಂದಿಗೆ ಐರಾ, ಯಥರ್ವ್ ಸಾಂಸ್ಕೃತಿಕ ಉಡುಗೆ ತೊಟ್ಟು ಸಂಭ್ರಮಿಸಿದ್ದಾರೆ. ರಾಧಿಕಾ ಪಂಡಿತ್ ಯಶ್ ಜೊತೆ ನಿಂತಿರುವುದು, ಯಥರ್ವ್ ಸ್ವೀಟ್ ತಿನ್ನಿಸುತ್ತಿರುವುದು, ಲುಂಗಿ, ಶಲ್ಯ, ಸಿಲ್ಕ್ ಶರ್ಟ್ ತೊಟ್ಟು ಯಶ್ ಜೊತೆ ಯಥರ್ವ್ ನಿಂತಿರುವುದು, ಐರಾ ಸಾಂಸ್ಕೃತಿಕ ಉಡುಗೆ ತೊಟ್ಟು ಅಜ್ಜಿ ಜೊತೆ ಮಾತನಾಡುತ್ತಿರುವ ಚಿತ್ರಗಳನ್ನು ರಾಧಿಕಾ ಪಂಡಿತ್ ಪೋಸ್ಟ್ ಮಾಡಿದ್ದಾರೆ.
ಯಥರ್ವ್ ಸಿಲ್ಕ್ ಶರ್ಟ್, ಲುಂಗಿ ಹಾಗೂ ಶಲ್ಯ ತೊಟ್ಟು ಅಪ್ಪನ ಜೊತೆ ನಿಂತು ಫುಲ್ ಮಿಂಚಿದ್ದಾನೆ. ರಾಕಿ ಭಾಯ್ ಸಹ ಮಗನ ಜೊತೆಗೆ ಫೋಟೋಗೆ ಪೋಸ್ ನೀಡಿದ್ದಾರೆ. ಇನ್ನು ಐರಾ ಅಜ್ಜಿಯ ಜೊತೆ ನಗುತ್ತ ಮಾತನಾಡುತ್ತಿದ್ದಾಳೆ. ಹೀಗೆ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ರಾಧಿಕಾ ಪಂಡಿತ್ ತಮ್ಮ ಮನೆಯಲ್ಲಿನ ವರಮಹಾಲಕ್ಷ್ಮೀ ಪೂಜೆಯ ಝಲಕ್ ತೋರಿಸಿದ್ದಾರೆ.
View this post on Instagram
ಪೋಸ್ಟ್ ಗೆ ಅಭಿಮಾನಿಗಳು ಹಲವು ರೀತಿಯ ಕಮೆಂಟ್ ಮಾಡುತ್ತಿದ್ದು, ಸೋ ಸ್ವೀಟ್, ವಂಡರ್‍ಫುಲ್ ಹಾಗೂ ಹಾರ್ಟ್ ಎಮೋಜಿಗಳ ಮೂಲಕ ಪ್ರತಿಕ್ರಿಯಿಸುತ್ತಿದ್ದಾರೆ. ಹಲವರು ಲೈಕ್ ಮಾಡಿ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
View this post on Instagram
ರಾಧಿಕಾ ಪಂಡಿತ್ ಮಕ್ಕಳ ಚಟುವಟಿಕೆಯ ವೀಡಿಯೋ ಹಾಗೂ ಫೋಟೋಗಳನ್ನು ಆಗಾಗ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ನಿಶ್ಚಿತಾರ್ಥವಾಗಿ 5 ವರ್ಷಗಳಾದ ಹಿನ್ನೆಲೆ ಇತ್ತೀಚೆಗೆ ವೀಡಿಯೋ ಪೋಸ್ಟ್ ಮಾಡಿ, ಭಾವನಾತ್ಮಕ ಸಾಲುಗಳನ್ನು ಬರೆಯುವ ಮೂಲಕ ನೆನಪಿಸಿಕೊಂಡಿದ್ದರು. ಅದೇ ರೀತಿ ಅಪ್ಪ ಮಕ್ಕಳು ಆಟವಾಡುತ್ತಿರುವ ವೀಡಿಯೋಗಳನ್ನು ಸಹ ರಾಧಿಕಾ ಪಂಡಿತ್ ಹಂಚಿಕೊಳ್ಳುತ್ತಿರುತ್ತಾರೆ.