ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಇತ್ತೀಚೆಗೆ ಜಾಹೀರಾತಿಗೆ ಖಡಕ್ ಲುಕ್‍ನಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋಗೆ ಅಭಿಮಾನಿಗಳು ಫಿದಾ ಆಗಿದ್ದರು. ಇದೀಗ ಜಾಹೀರಾತಿಗೆ ಸಂಬಂಧಪಟ್ಟಂತೆ ವಿಡಿಯೋವೊಂದನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ನಟ ಯಶ್ ಅವರು ಟ್ವಿಟ್ಟರ್ ಮೂಲಕ ವಿಡಿಯೋವನ್ನು ಹಂಚಿಕೊಂಡು ಅಭಿಮಾನಿಗಳಿಗೆ ಗುಡ್‍ನ್ಯೂಸ್ ಕೊಟ್ಟಿದ್ದಾರೆ. “ಇದೇ ಸೆಪ್ಟೆಂಬರ್ 16 ರಂದು ಬಿಯರ್ಡ್ ಅವರ ಗುರುಡು ಬರುತ್ತಿದೆ. ಚಂಡಮಾರುತದೊಂದಿಗೆ ಹೋರಾಡಲು ಸಿದ್ಧವಾಗಿ” ಎಂದು ವಿಡಿಯೋದಲ್ಲಿ ಪದಗಳ ಮೂಲಕ ತಿಳಿಸಿದ್ದಾರೆ.
ವಿಡಿಯೋದಲ್ಲಿ ಯಶ್ ಬಾಲಿವುಡ್ ಸಿನಿಮಾದ ಸೂಪರ್ ಹೀರೋ ಪೋಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೇ ವಿಡಿಯೋದಲ್ಲಿ ಯಶ್ ಲುಕ್ ನಿಧಾನವಾಗಿ ಬಂದಿದ್ದು, ಅದ್ಭುತವಾಗಿ ಮೂಡಿಬಂದಿದೆ. ಯಶ್ ಅವರ ರಗಡ್ ಲುಕ್‍ಗೆ ಅಭಿಮಾನಿಗಳು ಮತ್ತೊಮ್ಮೆ ಫಿದಾ ಆಗಿದ್ದಾರೆ. ವಿಡಿಯೋ ಕೇವಲ 25 ಸೆಕೆಂಡ್‍ಗಳಿದ್ದು, ಪೋಸ್ಟ್ ಮಾಡಿದ ಕೆಲವೇ ನಿಮಿಷಗಳಲ್ಲಿ 7 ಸಾವಿರಕ್ಕೂ ಅಧಿಕ ವೀವ್ಸ್ ಕಂಡಿದೆ.
ಇದೇ ಜಾಹೀರಾತಿಗೆ ಸಂಬಂಧಿಸಿದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡಿತ್ತು. ಕೆಜಿಎಫ್-2 ಸಿನಿಮಾದ ಫಸ್ಟ್ ಲುಕ್ ಎಂಬಿತ್ಯಾದಿ ಮಾತುಗಳು ಕೇಳಿ ಬಂದಿದ್ದವು. ಕೊನೆಯ ಯಶ್ ಇದೊಂದು ಜಾಹೀರಾತಿನ ಫೋಟೋ ಎಂದು ಸ್ಪಷ್ಟನೆ ನೀಡಿದ್ದರು. ಸದ್ಯ ಯಶ್ ‘ಕೆಜಿಎಫ್-2’ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದು, ಚಿತ್ರತಂಡ ಯಶ್ ಅವರ ಫಸ್ಟ್ ಲುಕ್ ಬಿಡುಗಡೆ ಮಾಡಿಲ್ಲ. ಮೊದಲ ಬಾರಿಗೆ ‘ಕೆಜಿಎಫ್-2’ ಚಿತ್ರದ ಮೂಲಕ ಕನ್ನಡದ ಅಂಗಳಕ್ಕೆ ಬಾಲಿವುಡ್ ಮುನ್ನಾಬಾಯ್ ಸಂಜಯ್ ದತ್ ಪಾದರ್ಪಣೆ ಮಾಡಿದ್ದಾರೆ. ಸಂಜಯ್ ದತ್ತ್ ಬರ್ತ್ ಡೇ ದಿನ ಅಧೀರನ ಫಸ್ಟ್ ಲುಕ್ ಬಿಡುಗಡೆಯಾಗಿತ್ತು.
Beardo's THUNDER is about to STRIKE ⚡ on the 16th of September, STAY TUNED!#BeardoThunder #BeardoBoss pic.twitter.com/2rlDFrhGAE
— Yash (@TheNameIsYash) September 9, 2019