ಯಶ್ ತಾಯಿ ನಿರ್ಮಾಣದ ಸಿನಿಮಾ ಬಗ್ಗೆ ಹೊರಬಿತ್ತು ಬಿಗ್ ನ್ಯೂಸ್

Public TV
2 Min Read
yash mother pushpa 1

ರಾಕಿಂಗ್ ಸ್ಟಾರ್ ಯಶ್ (Yash) ತಾಯಿ ಪುಷ್ಪ ಅರುಣ್ ಕುಮಾರ್ ನಿರ್ಮಾಣದ ಚೊಚ್ಚಲ ಸಿನಿಮಾ ಬಗ್ಗೆ ಬಿಗ್ ಅಪ್‌ಡೇಟ್‌ವೊಂದು ಹೊರಬಿದ್ದಿದೆ. ಚಿತ್ರದ ಫಸ್ಟ್ ಲುಕ್ ರಿಲೀಸ್ ಆಗೋದು ಯಾವಾಗ ಎಂಬುದರ ಬಗ್ಗೆ ಚಿತ್ರತಂಡ ಫ್ಯಾನ್ಸ್‌ಗೆ ಅಪ್‌ಡೇಟ್‌ ಕೊಟ್ಟಿದೆ. ಇದನ್ನೂ ಓದಿ:ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿ ‘ನನ್ನರಸಿ ರಾಧೆ’ ನಟಿ

yash mother pushpa

ಯಶ್ ತಾಯಿ ಸ್ಯಾಂಡಲ್‌ವುಡ್‌ ನಿರ್ಮಾಪಕಿಯಾಗಿ ಎಂಟ್ರಿ ಕೊಡ್ತಿದ್ದಾರೆ. ಅವರ ನಿರ್ಮಾಣ ಮಾಡುತ್ತಿರುವ ಸಿನಿಮಾದಲ್ಲಿ ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದಾರೆ. ಅಕ್ಷಯ ತೃತೀಯ ದಿನದಂದು (ಏ.30) ಬೆಳಗ್ಗೆ 11 ಗಂಟೆಗೆ ಈ ಚಿತ್ರದ ಫಸ್ಟ್ ಲುಕ್ ರಿಲೀಸ್ ಮಾಡೋದಾಗಿ ಚಿತ್ರತಂಡ ತಿಳಿಸಿದೆ. ಈ ಚಿತ್ರದ ಬಗೆಗಿನ ಮಾಹಿತಿ ತಿಳಿದುಕೊಳ್ಳಲು ಫ್ಯಾನ್ಸ್‌ ಕ್ಯೂರಿಯಸ್‌ ಆಗಿದ್ದಾರೆ. ಇದನ್ನೂ ಓದಿ:ನಿರ್ಮಾಪಕಿಯಾದ ರಾಕಿಂಗ್ ಸ್ಟಾರ್ ಯಶ್ ತಾಯಿ


ನಟ ಯಶ್ ಅವರ ತಾಯಿ ಪುಷ್ಪ ಅರುಣ್ ಕುಮಾರ್ (Pushpa Arun Kumar) ಅವರು ‘ಪಿಎ ಪ್ರೊಡಕ್ಷನ್ಸ್’ ಎಂಬ ಹೊಸ ನಿರ್ಮಾಣ ಸಂಸ್ಥೆ ಆರಂಭಿಸಿದ್ದಾರೆ. ಯಶ್ ತಾಯಿ ಹೆಸರು ಪುಷ್ಪ, ತಂದೆ ಅರುಣ್ ಕುಮಾರ್ ಹೀಗಾಗಿ ನಿರ್ಮಾಣ ಸಂಸ್ಥೆಗೆ ‘ಪಿಎ ಪ್ರೊಡಕ್ಷನ್ಸ್’ ಎಂದು ಇಡಲಾಗಿದೆ. ಇದರ ಮೂಲಕ ಹೊಸ ಪ್ರತಿಭೆಗಳ ಕನಸಿಗೆ ಸಾಥ್ ನೀಡ್ತಿದ್ದಾರೆ. ಈ ಸಂಸ್ಥೆಯ ಮೂಲಕ ಈಗಾಗಲೇ ಸಿನಿಮಾ ಕೆಲಸ ಶುರುವಾಗಿದೆ.

ಈ ಸಿನಿಮಾದಲ್ಲಿ ‘ದಿಯಾ’ ಖ್ಯಾತಿಯ ಪೃಥ್ವಿ ಅಂಬರ್ (Pruthvi Ambaar) ಅವರೊಂದಿಗೆ ‘ಕೆಂಡಸಂಪಿಗೆ’ ಖ್ಯಾತಿಯ ಕಾವ್ಯ ಶೈವ, ಗೋಪಾಲ ಕೃಷ್ಣ ದೇಶಪಾಂಡೆ ಸೇರಿದಂತೆ ಅನೇಕರು ಕಾಣಿಸಿಕೊಳ್ತಿದ್ದಾರೆ. ಈ ಚಿತ್ರಕ್ಕೆ ಶ್ರೀರಾಜ್ ಆ್ಯಕ್ಷನ್ ಕಟ್ ಹೇಳ್ತಿದ್ದಾರೆ.

Pruthvi Ambar 1

ಅಂದಹಾಗೆ, ‘ಟಾಕ್ಸಿಕ್’ ಚಿತ್ರಕ್ಕೆ ನಾಯಕ ಕಮ್ ಸಹ ನಿರ್ಮಾಪಕನಾಗಿ ಯಶ್ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ರಾಮಾಯಣ’ ಚಿತ್ರದಲ್ಲಿ ರಾವಣನಾಗಿ ರಾಕಿ ಭಾಯ್ ನಟಿಸಲಿದ್ದಾರೆ. ಈ ಚಿತ್ರಕ್ಕೂ ಅವರು ಸಹ ನಿರ್ಮಾಪಕರಾಗಿದ್ದಾರೆ.

Share This Article