ರಾಕಿಂಗ್ ಸ್ಟಾರ್ ಯಶ್ ತಾಯಿ ‘ಕೊತ್ತಲವಾಡಿ’ (Kothalavadi) ಚಿತ್ರದ ಮೂಲಕ ನಿರ್ಮಾಪಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿದ್ದಾರೆ. ಮೊದಲ ಸಿನಿಮಾ ರಿಲೀಸ್‌ಗೂ ಮುನ್ನವೇ 2ನೇ ಚಿತ್ರದ ಬಗ್ಗೆ ಯಶ್ (Yash) ತಾಯಿ ಪುಷ್ಪ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ಪುಷ್ಪ ಅರುಣ್ ಕುಮಾರ್ (Pushpa Arun Kumar) ನಿರ್ಮಿಸಿದ ಮೊದಲ ಸಿನಿಮಾ ‘ಕೊತ್ತಲವಾಡಿ’ ಟೀಸರ್ ಅನ್ನು ರ‍್ಯಾಂಬೋ ನಟ ಶರಣ್ ಬಿಡುಗಡೆ ಮಾಡಿದ್ದಾರೆ. ಈ ವೇದಿಕೆಯಲ್ಲಿ ಪುಷ್ಪ ಅವರು ಸಿಹಿ ಸುದ್ದಿ ನೀಡಿದ್ದಾರೆ. ನಾವು ಶರಣ್ ಅವರ ಅಭಿಮಾನಿ. ನಮ್ಮ ಸಂಸ್ಥೆಯಿಂದ 2ನೇ ಸಿನಿಮಾವನ್ನು ಶರಣ್ ಜೊತೆ ಮಾಡುತ್ತೇವೆ. ಮೊದಲ ಚಿತ್ರವನ್ನೇ ಅವರ ಜೊತೆ ಮಾಡಬೇಕಿತ್ತು. ಆದರೆ ನನಗೆ ಧೈರ್ಯ ಇರಲಿಲ್ಲ. ಈಗ ಒಂದು ಸಿನಿಮಾವನ್ನು ಬೇರೆಯವರ ಜೊತೆ ಮಾಡಿದ್ದೇನೆ. 2ನೇ ಸಿನಿಮಾವನ್ನು ಶರಣ್ (Sharan) ಜೊತೆ ಮಾಡುತ್ತೇನೆ ಎಂದು ಅಧಿಕೃತವಾಗಿ ತಿಳಿಸಿದ್ದಾರೆ. ಇದನ್ನೂ ಓದಿ:‘ಜಯಹೇ ಕರ್ನಾಟಕ ಮಾತೆ’ ಎಂದು ಕನ್ನಡದಲ್ಲಿ ಮಾತನಾಡಿದ ಪವನ್ ಕಲ್ಯಾಣ್
ಈಗಾಗಲೇ ಶರಣ್ ಅವರೊಂದಿಗೆ ಸಿನಿಮಾ ಮಾಡುವ ಬಗ್ಗೆ ಮಾತುಕತೆ ಆಗಿದೆ. ಶರಣ್ ಕೂಡ ಸ್ಕ್ರಿಪ್ಟ್ ಕೇಳಿ ಓಕೆ ಎಂದಿದ್ದಾರೆ. ಪುಷ್ಪ ಅವರು ನಿರ್ಮಿಸಿರುತ್ತಿರುವ ಚೊಚ್ಚಲ ಚಿತ್ರ ‘ಕೊತ್ತಲವಾಡಿ’ ರಿಲೀಸ್ ಬಳಿಕ 2ನೇ ಚಿತ್ರ ಸೆಟ್ಟೇರಲಿದೆ. ಇದನ್ನೂ ಓದಿ: ಯಶ್ ತಾಯಿ ನಿರ್ಮಾಣದ ‘ಕೊತ್ತಲವಾಡಿ’ ಚಿತ್ರದ ಟೀಸರ್ ಔಟ್- ಸಾಥ್ ಕೊಟ್ಟ ನಟ ಶರಣ್
‘ಕೊತ್ತಲವಾಡಿ’ ಚಿತ್ರದ ಟೀಸರ್ ನಿರೀಕ್ಷೆಗಿಂತಲೂ ಅದ್ಭುತವಾಗಿ ಕಟ್ಟಿಕೊಡಲಾಗಿದೆ. ಇಷ್ಟು ದಿನ ರೋಸ್ ಹಿಡಿಯುತ್ತಿದ್ದ ಪೃಥ್ವಿ ಈಗ ಕಂಪ್ಲೀಟ್ ರಗಡ್ ಹಾಗೂ ಮಾಸ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಟೀಸರ್ ಕ್ವಾಲಿಟಿ ಚೆನ್ನಾಗಿದೆ. ‘ಕೊತ್ತಲವಾಡಿ’ ಎಂಬ ಹಳ್ಳಿಯಲ್ಲಿ ನಡೆಯುವ ಕಥೆಯನ್ನು ನಿರ್ದೇಶಕ ಶ್ರೀರಾಜ್ ಹೇಳೋದಿಕ್ಕೆ ಹೊರಟಿದ್ದಾರೆ.
ಪೃಥ್ವಿ ಅಂಬರ್ ನಾಯಕನಾಗಿ ನಟಿಸುತ್ತಿದ್ದು, ಕಿರುತೆರೆ ನಟಿ ಕಾವ್ಯಾ ಶೈವ ನಾಯಕಿಯಾಗಿ ನಟಿಸುತ್ತಿದ್ದಾರೆ. PA ಪ್ರೊಡಕ್ಷನ್ಸ್ ಪ್ರಮುಖ ಉದ್ದೇಶ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಬೇಕೆಂಬ ನಿಟ್ಟಿನಲ್ಲಿ ಪುಷ್ಪ ಅರುಣ್ ಕುಮಾರ್ ನಿರ್ಮಾಣ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಅದರಂತೆ ‘ಕೊತ್ತಲವಾಡಿ’ ಚಿತ್ರದಲ್ಲಿಯೂ ಹೊಸ ಪ್ರತಿಭೆಗಳಿಗೆ ಅವಕಾಶ ದೊರೆತಿದೆ. ಯುವ ನಿರ್ದೇಶಕರ ಜೊತೆಗೆ ಹಿನ್ನೆಲೆ ಸಂಗೀತ ಕೊಟ್ಟಿರುವ ಅಭಿನಂದನ್ ಕಶ್ಯಪ್, ಸಾಹಸ ನಿರ್ದೇಶಕ ಸಾಗರ್ ಕೂಡ ಹೊಸಬರೇ.