ಹಾಸನ: ರಾಕಿಂಗ್ ಸ್ಟಾರ್ ಯಶ್ (Actor Yash) ತಾಯಿ ಪುಷ್ಪಾ ಅರುಣ್‌ಕುಮಾರ್ (Pushpa Arunkumar) ಅವರ ಮನೆ ಸಮೀಪದ ನಿವೇಶನ ಮಾಲೀಕತ್ವ ಜಟಾಪಟಿ ಮತ್ತೆ ಜೋರಾಗಿದೆ. ಕೆಡವಿದ್ದ ಕಾಂಪೌಂಡ್‌ನ್ನು ಪುಷ್ಪಾ ಅವರು ಮತ್ತೆ ಕಟ್ಟಿಸಲು ಮುಂದಾಗಿದ್ದು, ಈ ವೇಳೆ ಜಾಗದ ಮಾಲೀಕರು ಹಾಗೂ ಅವರ ನಡುವೆ ವಾಗ್ವಾದ ನಡೆದಿದೆ.

ಜಾಗದ ಮಾಲೀಕ ದೇವರಾಜು ಅವರ ಬಳಿ ದಾಖಲೆ ಕೊಡಿ ಎಂದು ವಾಗ್ವಾದ ನಡೆಸಿದ್ದಾರೆ. ಈ ವೇಳೆ ಕೋರ್ಟ್ (Court) ಆದೇಶದಂತೆ ನಾವು ನಡೆದುಕೊಂಡಿದ್ದೇವೆ ಎಂದು ದೇವರಾಜು ಅವರು ಹೇಳಿದ್ದಾರೆ. ಅದಕ್ಕೆ ಜಡ್ಜ್‌ನ್ನು (Judge) ಇಲ್ಲೇ ಕರೆಸಿ, ಇಲ್ಲಿಗೆ ಬಂದು ತೀರ್ಮಾನ ಮಾಡಲಿ. ನೀವು ಯಶ್ ಮನೆ ಮುಂದೆ ಕ್ಯಾಮೆರಾದಲ್ಲಿ ಬಿಲ್ಡಪ್ ತೆಗೆದುಕೊಳ್ಳಲು ಬಂದಿದ್ದೀಯಾ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ: ನಟ ಯಶ್ ತಾಯಿ ಹಾಸನ ಸೈಟ್ ಜಟಾಪಟಿ – ಕಾಂಪೌಂಡ್ ಕೆಡವಿದ್ದ ಮಾಲೀಕನ ಜೊತೆ ವಾಗ್ವಾದ
ಬಳಿಕ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ ಬಡಾವಣೆ ಪೊಲೀಸರ ಬಳಿಯೂ, ನೀವು ದೇವರಾಜು ಅವರನ್ನು ಏಕೆ ಬಂಧಿಸಿಲ್ಲ? ಜೆಸಿಬಿ ಏಕೆ ಸೀಜ್ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಕೂಡ ಪುಷ್ಪಾ ಅವರು ತಾಕೀತು ಮಾಡಿದ್ದಾರೆ.
ಪೊಲೀಸರು ಕೆಲಸ ಮಾಡುತ್ತಿದ್ದ ಕಾರ್ಮಿಕರನ್ನು ಸ್ಥಳದಿಂದ ಕಳುಹಿಸಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಏನಿದು ಪ್ರಕರಣ?
ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್ ಶಾಕ್ ಕೊಟ್ಟಿತ್ತು. ಬೇರೆಯವರ ಜಾಗದಲ್ಲಿ ನಿರ್ಮಿಸಿದ್ದಾರೆ ಎನ್ನಲಾದ ಕಾಂಪೌಂಡ್‌ನ್ನು ಧ್ವಂಸಗೊಳಿಸಲಾಗಿತ್ತು. ಹಾಸನ (Hassan) ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇದೆ. ಇವರು ನಿರ್ಮಿಸಿದ್ದ ಕಾಂಪೌಂಡ್‌ನ್ನು ಮೂಲ ಮಾಲೀಕ ಧ್ವಂಸಗೊಳಿಸಿದ್ದರು. ಜೆಸಿಬಿ ಮೂಲಕ ಕಾಂಪೌಂಡ್ ನೆಲಸಮಗೊಳಿಸಿದ್ದರು. 1,500 ಅಡಿ ಜಾಗವನ್ನು ಒತ್ತುವರಿ ಮಾಡಿದ ಆರೋಪ ಇವರ ಮೇಲಿತ್ತು. ಕೋರ್ಟ್ ಅನುಮತಿಯ ಮೇರೆಗೆ ಕಾಂಪೌಂಡ್ ತೆರವುಗೊಳಿಸಲಾಗಿತ್ತು. ಇದನ್ನೂ ಓದಿ: ನಾವು ಒತ್ತುವರಿ ಮಾಡಿಲ್ಲ, ಕಾನೂನು ಪ್ರಕಾರ ಜಾಗ ಪಡೆದಿದ್ದೇವೆ: ಯಶ್ ತಾಯಿ ರಿಯಾಕ್ಷನ್

