ಚಂದನವನದ ರಾಕಿಂಗ್ ಸ್ಟಾರ್ ಆಗಿದ್ದವರು ಕೆಜಿಎಫ್ ಹವಾ ಎಲ್ಲಕಡೆ ಹಬ್ಬಿದ ಮೇಲೆ ರಾಕಿಭಾಯ್ ಆದ ಯಶ್ ಕರ್ನಾಟಕದಲ್ಲಿ ಮಾತ್ರವಲ್ಲ, ಭಾರತೀಯ ಸಿನಿಮಾ ತಮ್ಮತ್ತ ತಿರುಗಿ ನೋಡುವಂತೆ ಮಾಡಿದ್ದಾರೆ. ಯಶ್ ಬದಲಿಗೆ ಕೆಜಿಎಫ್ ರಾಕಿಭಾಯ್ ಎಂದೇ ಇವರು ಫುಲ್ ಫೇಮಸ್ ಆಗುತ್ತಿದ್ದಾರೆ.
ಇಡೀ ಭಾರತೀಯ ಚಿತ್ರರಂಗವೇ ಕಾಯುತ್ತಿರುವ ಸಿನಿಮಾ ಎಂದರೆ ಕೆಜಿಎಫ್ 2. ಈ ಸಿನಿಮಾ ರಿಲೀಸ್ಗೆ ವಾರವಾಷ್ಟೇ ಇದೆ. ಈ ಹಿನ್ನೆಲೆ ಕೆಜಿಎಫ್-2 ಚಿತ್ರತಂಡ ಪ್ರಚಾರಕ್ಕಾಗಿ ಭಾರತದ ಪೂರ್ತಿ ಪ್ರಚಾರ ಮಾಡುತ್ತಿದ್ದಾರೆ. ಸಾಲು, ಸಾಲು ಪ್ರೆಸ್ಮೀಟ್ಗಳಲ್ಲಿ ಯಶ್ ಮತ್ತು ‘ಕೆಜಿಎಫ್ 2’ ಚಿತ್ರತಂಡ ಭಾಗಿ ಆಗುತ್ತಿದೆ. ಇದನ್ನೂ ಓದಿ: ಬೇವು-ಬೆಲ್ಲದ ಸಮರಸವೇ ಜೀವನ ಎಂದು ಸಾರುವ ಹಬ್ಬವೇ ಯುಗಾದಿ
View this post on Instagram
‘ಕೆಜಿಎಫ್-2’ ತಂಡ ದೆಹಲಿಯಲ್ಲಿ ಪ್ರಚಾರ ಮಾಡುತ್ತಿದೆ. ಈ ವೇಳೆ ಹೋಟೆಲ್ ಮುಂದೆ ನೂರಾರು ಯಶ್ ನೋಡಲು ಅಭಿಮಾನಿಗಳು ಕಾಯುತ್ತಾ ಇದ್ದರು. ಅದಕ್ಕೆ ಯಶ್ ಬಿಡುವು ಮಾಡಿಕೊಂಡು ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಅಭಿಮಾನಿಗಳ ಜೊತೆಗೆ ಫೋಟೋ ತೆಗೆಸಿಕೊಂಡು, ಆಟೋಗ್ರಾಫ್ ಕೂಡ ಕೊಟ್ಟಿದ್ದಾರೆ. ಇದರಿಂದ ಅಭಿಮಾನಿಗಳು ಫುಲ್ ಖುಷ್ ಆಗದ್ದಾರೆ.
View this post on Instagram
ಮುಂಬೈನಲ್ಲೂ ಯಶ್ಗೆ ಅಭಿಮಾನಿಯ ದೊಡ್ಡ ಬಳಗವಿದೆ. ಯಶ್ ಮುಂಬೈಗೆ ಹೋದರೆ ಅಲ್ಲಿ ಅವರನ್ನು ನೋಡಲು, ಫೋಟೋ ತೆಗೆಸಿಕೊಳ್ಳಲು ಅಭಿಮಾನಿಗಳು ಕಾಯುತ್ತಾರೆ. ಯಶ್ ಫೋಟೋ, ವೀಡಿಯೋಗಳು ಮುಂಬೈ ಮೀಡಿಯಾಗಳಲ್ಲಿ ಸಖತ್ ವೈರಲ್ ಆಗಿದ್ದವು. ಈಗ ದೆಹಲಿಯಲ್ಲಿ ಯಶ್ ಹವಾ ಮುಂದುವರಿದಿದೆ. ಇದನ್ನೂ ಓದಿ: ಚುಟು ಚುಟು ಹುಡುಗಿ ಆಶಿಕಾ ರಂಗನಾಥ್ ಮ್ಯಾರೇಜ್ ಫಿಕ್ಸ್, ಹುಡುಗ ಸಸ್ಪೆನ್ಸ್