ಬೆಂಗಳೂರು: ಸ್ಯಾಂಡಲ್‍ವುಡ್ ನ ಬಹುನಿರೀಕ್ಷಿತ ಸಿನಿಮಾ ರಾಕಿಂಗ್ ಸ್ಟಾರ್ ಅಭಿನಯದ ‘ಕೆಜಿಎಫ್’ ಚಿತ್ರದ ಟ್ರೇಲರ್ ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹವಾ ಎಬ್ಬಿಸುತ್ತಿದೆ. ಈ ಹಿನ್ನೆಲೆಯಲ್ಲಿ ನಟ ಯಶ್ ವಿಡಿಯೋ ಮೂಲಕ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.
ನಟ ಯಶ್ ಟ್ವಿಟ್ಟರ್ ನಲ್ಲಿ ಲೈವ್ ಬಂದು ಎಲ್ಲ ಕನ್ನಡ ಕಲಾಭಿಮಾನಿಗಳಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ. “ನನ್ನ ಕೆಜಿಎಫ್ ಟ್ರೇಲರ್ ನ ನೀವು ರಿಸೀವ್ ಮಾಡಿಕೊಂಡಿರುವುದಕ್ಕೆ ತುಂಬಾ ತುಂಬಾ ಖುಷಿಯಾಗಿದೆ. ಹೇಗೆ ನಮ್ಮ ಖುಷಿಯನ್ನು ವ್ಯಕ್ತಪಡಿಸಬೇಕು ಗೊತ್ತಾಗುತ್ತಿಲ್ಲ. ಎರಡು ವರ್ಷದಿಂದ ಕಷ್ಟಪಟ್ಟು ನಾವು ಏನು ಕೆಲಸ ಮಾಡಿದ್ದೇವೆ ಎಂದು ನಿಮಗೆ ತೋರಿಸಬೇಕು ಎಂದು ಕಾಯುತ್ತಿದ್ದೆವು. ಈಗ ಅದನ್ನು ಟ್ರೇಲರ್ ಮೂಲಕ ನಿಮಗೆ ತೋರಿಸಿದ್ದೇವೆ” ಎಂದು ಹೇಳಿದ್ದಾರೆ.
“ನೀವು ಟ್ರೇಲರ್ ಮೆಚ್ಚಿರುವ ರೀತಿ ನಮಗೆ ಸಾರ್ಥಕತೆಯ ಭಾವನೆಯಾಗುತ್ತಿದೆ. ಇನ್ನು ಹೆಚ್ಚು ಕೆಲಸ ಮಾಡುವ ಸ್ಫೂರ್ತಿ ಸಿಕ್ಕಿದೆ. ಅಭಿಮಾನಿಗಳು ತುಂಬಾ ಚೆನ್ನಾಗಿ ಟ್ರೇಲರ್ ಬಿಡುಗಡೆಯನ್ನು ಆಚರಿಸಿದ್ದೀರಿ. ಅವರಿಗೆಲ್ಲಾ ಧನ್ಯವಾದಗಳು. ಎಲ್ಲ ಕಲಾವಿದರು ಮತ್ತು ನಿರ್ಮಾಪಕರು ಸಿನಿಮಾ ನೋಡಿ ಸಪೋರ್ಟ್ ಮಾಡಿ ಬೆನ್ನು ತಟ್ಟಿದ್ದೀರಿ. ನೀವು ಕೊಡುವ ಶಕ್ತಿ, ಭರವಸೆಯಿಂದ ನಾವು ಇನ್ನೂ ಚೆನ್ನಾಗಿ ಕೆಲಸ ಮಾಡುತ್ತೇವೆ” ಎಂದು ಧನ್ಯವಾದಗಳನ್ನು ತಿಳಿಸಿದ್ದಾರೆ.
ಸಿನಿಮಾ ಸೆಟ್ಟೇರಿದಾಗಿನಿಂದಲೂ ಕಳೆದ ಎರಡೂವರೆ ವರ್ಷಗಳಿಂದ ತೀವ್ರ ಕುತೂಹಲವನ್ನು ಹುಟ್ಟುಹಾಕಿತ್ತು. ಕನ್ನಡದ ವಿಭಿನ್ನ ಸಿನಿಮಾ ಎಂದು ಕೆಜಿಎಫ್ ಗುರುತಿಸಿಕೊಳ್ಳುತ್ತಿದೆ. ಸಿನಿಮಾ ಬಿಡುಗಡೆ ಮುನ್ನವೇ ಇಡೀ ದೇಶವೇ ಕನ್ನಡ ಸಿನಿಮಾಗಳತ್ತ ನೋಡುವಂತೆ ಮಾಡಿದೆ ಕೆಜಿಎಫ್. ಟ್ರೇಲರ್ ರಿಲೀಸ್ ಆಗಿ ಒಂದು ದಿನದ ಬಳಿಕವೂ ಯೂಟ್ಯೂಬ್ ನಲ್ಲಿ ನಂಬರ್ 1 ಟ್ರೇಂಡಿಂಗ್ ನಲ್ಲಿದೆ.
ಸಿನಿಮಾದಲ್ಲಿ ಯಶ್ `ರಾಕಿ’ ಎಂಬ ಪಾತ್ರದಲ್ಲಿ ಕಾಣಿಸಿಕೊಂಡರೆ ಶ್ರೀನಿಧಿ ನಾಯಕಿಯಾಗಿ ಬಣ್ಣ ಹಚ್ಚಿದ್ದಾರೆ. ಖಳ ನಟನಾಗಿ ರವಿಶಂಕರ್ ಸಹೋದರ ಅಯ್ಯಪ್ಪ ಅಭಿನಯಸುತ್ತಿದ್ದಾರೆ. ಹೊಂಬಾಳೆ ಫಿಲಂ ಬ್ಯಾನರ್ ನಲ್ಲಿ ಸಿನಿಮಾ ಮೂಡಿಬಂದಿದ್ದು, ವಿಜಯ್ ಕಿರಂಗದೂರ್ ಚಿತ್ರಕ್ಕೆ ಬಂಡವಾಳ ಹೂಡಿದ್ದರೆ, ಉಗ್ರಂ ಖ್ಯಾತಿಯ ಪ್ರಶಾಂತ್ ನೀಲ್ ಆ್ಯಕ್ಷನ್ ಕಟ್ ಹೇಳಿದ್ದಾರೆ.
ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ????????#KGFTrailer #KGF21Dec pic.twitter.com/xk88OG81zm
— Yash (@TheNameIsYash) November 11, 2018
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews