‘ಕಾಣದ ದೇವರನ್ನು ನಿನ್ನಲಿ ಕಾಣಿರುವೆ’ – ಕೆಜಿಎಫ್‍ನಲ್ಲಿ ತಾಯಿ ಸೆಂಟಿಮೆಂಟಿಗೆ ಅಭಿಮಾನಿಗಳು ಫಿದಾ

Public TV
2 Min Read
KGF SONG

ಬೆಂಗಳೂರು: ಹೈವೋಲ್ಟೇಜ್ ಆ್ಯಕ್ಷನ್ ಕೆಜಿಎಫ್ ಸಿನಿಮಾದ `ಗರ್ಭದಿ ನನ್ನಿರಿಸಿ, ಊರಲ್ಲಿ ನಡೆಯುತಿರೆ ತೇರಲಿ ಕುಳಿತಂತೆ ಅಮ್ಮ’ ಹಾಡು ಬಿಡುಗಡೆಯಾಗಿದ್ದು, ತಾಯಿ-ಮಗನ ಸೆಂಟಿಮೆಂಟನ್ನು ಹಾಡಿನ ಮೂಲಕ ತಿಳಿಸಲಾಗಿದೆ.

ರಾಕಿಯ ಅರ್ಭಟಕ್ಕೆ ತಾಯಿ ಮಗನ ಬಾಂಧವ್ಯದ ಕಥನ ಸಾಥ್ ನೀಡಿದ್ದು, ರವಿ ಬಸ್ರೂರ್ ಅವರು ಮತ್ತೊಮ್ಮೆ ಈ ಹಾಡಿನ ಮೂಲಕ ಮೋಡಿ ಮಾಡಿದ್ದಾರೆ. ಕಿನ್ನಾಳ್ ರಾಜ್, ಬಸ್ರೂರ್ ಬರೆದಿರುವ ಹಾಡಿನ ಸಾಹಿತ್ಯ ಕ್ಷಣ ಮಾತ್ರದಲ್ಲಿ ಕೇಳುಗರ ಹೃದಯ ತಲುಪುತ್ತದೆ. ಹಡೆದ್ವನನ್ನ ನೆನೆದು ಕ್ಷಣ ಮಾತ್ರದಲ್ಲಿ ನೆನೆದು ಕಣ್ಣಂಚು ಒದ್ದೆಯಾಗುತ್ತದೆ.

KGF SONG 1

ಹಾಡಿಗೆ ಆನನ್ಯ ಭಟ್ ಅವರ ಕಂಠ ಸಿರಿ ಮತ್ತೊಂದು ಮೆರಗು ನೀಡಿದ್ದು, ಹಾಡಿನ ಸಂಗೀತ ಪ್ರತಿಯೊಬ್ಬರನ್ನು ಭಾವುಕರನ್ನಾಗಿಸುತ್ತದೆ. `ಕಾಣದ ದೇವರನ್ನು ನಿನ್ನಲಿ ಕಾಣಿರುವೆ, ನಿನ್ನಲಿ ಕಂಡಿರುವೆ ನೀನೇ ಭರವಸೆಯೂ ನಾಳೆಗೆ’ ಎಂಬ ಸಾಲು ಅಮ್ಮನ ಬಗ್ಗೆ ಮಗನ ಪ್ರೀತಿಯನ್ನು ತೆರೆದಿಡುತ್ತದೆ. ಅಪ್ಪಟ ಕನ್ನಡ ಪದಗಳು ಕೇಳುಗರ ಮನಸ್ಸಿಗೆ ಮುದ ನೀಡಿವೆ. ಹಾಡು ಕೇಳಿದ ಸಿನಿರಸಿಕರು ನಿರ್ದೇಶಕ ಪ್ರಶಾಂತ್ ನೀಲ್ ಅವರಿಗೂ ಸಲಾಂ ಹೇಳುತ್ತಿದ್ದು, ಚಿತ್ರದಲ್ಲಿ ತಾಯಿಗೆ ಸಾಂಗ್ ನೀಡಿರುವುದಕ್ಕೆ ಧನ್ಯವಾದ ಹೇಳುತ್ತಿದ್ದಾರೆ. ಇದು ಬರೀ ಹಾಡಲ್ಲ ಎಲ್ಲಾ ಮಕ್ಕಳ ತಾಯಿ ಮಕ್ಕಳ ಸಂಬಂಧವನ್ನು ಹೇಳುವ ವಾತ್ಸಲ್ಯದ ಹಾಡು. ವರ್ಷಾಂತ್ಯದಲ್ಲಿ ಹಾಡು ಬಿಡುಗಡೆಯಾದರೂ ಈ ವರ್ಷ ತಾಯಿಯ ಪ್ರೀತಿಗೆ ಸಂಬಂಧಿಸಿದ ನಂಬರ್ ಒನ್ ಹಾಡು ಎಂದು ಅಭಿಮಾನಿಗಳು ಈಗ ಹೇಳುತ್ತಿದ್ದಾರೆ.

kgf

ಸಿನಿಮಾ ಹೈಲೆಟ್ ಏನು?
ಕೆಜಿಎಫ್ ಬಿಡುಗಡೆಗೆ ಕೌಂಟ್ ಡೌನ್ ಶುರುವಾಗುತ್ತಿದಂತೆ ಚಿತ್ರತಂಡ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸುತ್ತಿದೆ. ಕೆಜಿಎಫ್ ಸಿನಿಮಾ ಬಿಡುಗಡೆ ಗಳಿಗೆಯಲ್ಲೇ ಇದೊಂದು ಮೈನಿಂಗ್ ಸುತ್ತ ಇರುವ ಕಥೆ ಎಂದು ಊಹಿಸಿದ್ದ ಮಂದಿಗೆ ಚಿತ್ರದ ಟೀಸರ್ ಇದು ಬರಿ ಮೈನಿಂಗ್ ಕಥೆಯಲ್ಲ, ಬದಲಾಗಿ ತಾಯಿ-ಮಗನ ಸೆಂಟಿಮೆಂಟ್ ಇದೆ ಎಂದು ತಿಳಿಸಿದೆ. ಕೋಲಾರ ಗೋಲ್ಡ್ ಫೀಲ್ಡ್ ನಲ್ಲಿ ಬಗೆದಷ್ಟು ಚಿನ್ನ ಸಿಕ್ಕಂತೆ ಕೆಜಿಎಫ್ ಚಿತ್ರದ ತಂಡ ನಿರೀಕ್ಷೆಗಳನ್ನು ಹೆಚ್ಚಿಸುತ್ತಿದೆ. ಚಿತ್ರ ಕನ್ನಡಿಗರ ಹೆಮ್ಮೆಯಾಗಿದ್ದು, ಚಿತ್ರತಂಡ ಎಷ್ಟು ಪರಿಶ್ರಮ ಪಟ್ಟಿದೆ ಎನ್ನುವುದು ತಿಳಿಯುತ್ತದೆ ಎಂದು ಅಭಿಮಾನಿಗಳು ಹೇಳುತ್ತಿದ್ದಾರೆ.

ಕೆಜಿಎಫ್ ಅಖಾಡದಿಂದ ತೂರಿಬರುತ್ತಿರುವ ಒಂದೊಂದು ದೃಶ್ಯಕ್ಕೂ ಸಿನಿಪ್ರಿಯರು ಬಂಪರ್ ರೆಸ್ಪಾನ್ಸ್ ನೀಡುತ್ತಿದ್ದು, ಲಿರಿಕಲ್ ಹಾಡು ಬಿಡುಗಡೆಯಾದ 1 ಗಂಟೆಯಲ್ಲಿ 2 ಲಕ್ಷಕ್ಕೂ ಹೆಚ್ಚು ವ್ಯೂ ಕಂಡಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *