ಟಾಕ್ಸಿಕ್ ಸಿನಿಮಾ ನಡುವೆಯೂ ನಟ ಯಶ್ (Yash) ಟೆಂಪಲ್ ರನ್ ಮಾಡುತ್ತಿದ್ದಾರೆ. ನಿನ್ನೆಯಷ್ಟೇ ಪತ್ನಿ ರಾಧಿಕಾ ಪಂಡಿತ್ (Radhika Pandit) ಜೊತೆ ಭಟ್ಕಳದ ಶಿರಾಲಿಯ ಚಿತ್ರಾಪುರ ಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದಿದ್ದಾರೆ. ದರ್ಶನದ ನಂತರ ಸ್ಥಳೀಯ ಕಾಂಡಿಮೆಂಟ್ಸ್ ಗೆ ತೆರಳಿ ಪತ್ನಿಗೆ ಐಸ್ ಕ್ಯಾಂಡಿ (Ice Candy) ಕೊಡಿಸಿದ್ದಾರೆ. ಆ ಫೋಟೋ ಸಖತ್ ಮೆಚ್ಚುಗೆಗೆ ಪಾತ್ರವಾಗುತ್ತಿದೆ.
Advertisement
ಮೊನ್ನೆಯಷ್ಟೇ ಗೆಳೆಯನ ಜಿಮ್ ಉದ್ಘಾಟಿಸಿದ್ದ ಯಶ್, ಆನಂತರ ದೇವಸ್ಥಾನ ಸುತ್ತುತ್ತಿದ್ದಾರೆ. ಹಾಗಾಗಿ ಟಾಕ್ಸಿಕ್ ಸಿನಿಮಾ ಬಗ್ಗೆ ಅಭಿಮಾನಿಗಳು ಅಪ್ ಡೇಟ್ ಕೇಳಿದ್ದಾರೆ. ಅದಕ್ಕೂ ಯಶ್ ಉತ್ತರ ಕೊಟ್ಟಿದ್ದಾರೆ. ‘ಟಾಕ್ಸಿಕ್’ (Toxic) ಶೂಟಿಂಗ್ ಇಷ್ಟರಲ್ಲೇ ಶುರು ಆಗಲಿದೆ. ದೊಡ್ಡ ಮಟ್ಟದ ಪ್ಲಾನ್ ನಡೀತಿದೆ. ‘ಟಾಕ್ಸಿಕ್’ ಚಿತ್ರದ ಬಗ್ಗೆ ಯಾವುದೇ ಕಾಂಪ್ರಮೈಸ್ ಇಲ್ಲದೇ ಮಾಡುತ್ತಿರುವ ಸಿನಿಮಾ ಆಗಿದೆ. ಸದ್ಯದಲ್ಲೇ ಸಿನಿಮಾ ಬಗ್ಗೆ ಹೆಚ್ಚಿನ ಮಾಹಿತಿ ನೀಡುವುದಾಗಿ ಯಶ್ ಹೇಳಿದ್ದಾರೆ.
Advertisement
Advertisement
ಇಂದು ಕನ್ನಡ ಸಿನಿಮಾರಂಗವನ್ನು ಪರಭಾಷಿಗರು ನೋಡುತ್ತಿರುವ ರೀತಿ ಬಗ್ಗೆ ಯಶ್ ಪ್ರತಿಕ್ರಿಯಿಸಿ, ಹೌದು ಇಂದು ಬೇರೇ ಚಿತ್ರರಂಗದವರು ನಮ್ಮನ್ನು ನೋಡುವ ರೀತಿ ಬದಲಾಗಿದೆ. ನನ್ನಿಂದ ಕನ್ನಡ ಚಿತ್ರರಂಗ ಅಲ್ಲ. ಚಿತ್ರರಂಗಕ್ಕಾಗಿ ನಾನು ಏನು ಮಾಡ್ಬೇಕು ಅಂತಾ ಸದಾ ಯೋಚನೆ ಮಾಡ್ತಿದ್ದೀನಿ. ಹೊಸ ಹೀರೋಗಳಿಗೆ ಬೆಂಬಲಿಸಿ. 4 ಜನ ಹೀರೋಗಳಿಗಷ್ಟೇ ಸಿನಿಮಾ ಮಾಡಿ ಅಂತಾ ಹೇಳೋದಲ್ಲ. ಮಾಡಿರುವ ಸಿನಿಮಾಗಳೆಲ್ಲ ಹಿಟ್ ಆಗಲ್ಲ. ಬರುತ್ತಿರುವ ಸಿನಿಮಾಗಳಿಗೆ ಸಪೋರ್ಟ್ ಮಾಡಿ ಎಂದು ಯಶ್ ಹೇಳಿದ್ದಾರೆ.
Advertisement
ಚಾನಲ್ ಸ್ಯಾಟಲೈಟ್ ರೈಟ್ಸ್ ತಗೋಬೇಕು. ಆಗ ಸಿನಿಮಾಗಳ ಸಂಖ್ಯೆ ಜಾಸ್ತಿ ಆಗುತ್ತದೆ. ಚಿತ್ರರಂಗದವರು ನೆಗೆಟಿವ್ ಆಗಿ ಥಿಂಕ್ ಮಾಡಬೇಡಿ. ಪ್ರಶಾಂತ್ ನೀಲ್ ‘ಉಗ್ರಂ’ ಸಿನಿಮಾ ಮಾಡಿದಾಗ ಯಾರೂ ಸ್ಯಾಟಲೈಟ್ ರೈಟ್ಸ್ ತೆಗೆದುಕೊಂಡಿಲ್ಲ. ರಿಲೀಸ್ ಆದ್ಮೇಲೆ ಎಲ್ಲಾ ಆ ಚಿತ್ರದ ಮಾತನಾಡಿದ್ದರು. ಪ್ರತಿಭೆ ಇರೋರನ್ನು ಬೆಳೆಸಿ, ಹೊಸಬರ ಸಿನಿಮಾಗಳಿಗೂ ಪ್ರೋತ್ಸಾಹ ನೀಡಿ ಎಂದು ಯಶ್ ಮನವಿ ಮಾಡಿದ್ದರು.