ತೂಫಾನಿಗೆ ಸೋಷಿಯಲ್ ಮೀಡಿಯಾ ಗಡಗಡ: ಪೂಜೆಗೆ ಬಂದ ಯಶ್ ಅಭಿಮಾನಿಗಳು

Public TV
1 Min Read
FotoJet 4 31

ಕೆಜಿಎಫ್ 2 ಸಿನಿಮಾದ ಮೊದಲ ಲಿರಿಕಲ್ ಹಾಡು ‘ತೂಫಾನ್’ ಇಂದು ಬಿಡುಗಡೆ ಆಗಿದೆ. ರಿಲೀಸ್ ಆದ ಕೆಲವೇ ಕ್ಷಣಗಳಲ್ಲಿ ಲಕ್ಷ ಲಕ್ಷ ವಿವ್ಯ್ಸು ಪಡೆದುಕೊಂಡಿದೆ. ಸೋಷಿಯಲ್ ಮೀಡಿಯಾದಲ್ಲಿ ಈ ತೂಫಾನ್ ಟ್ರೆಂಡ್ ಆಗಿದೆ. ‘ತೂಫಾನ್’ ಕ್ಯಾಚಿ ಶಬ್ದವೂ ಆಗಿರುವುದರಿಂದ ತಾಂತ್ರಿಕವಾಗಿ ಹುಡುಕಲು ಅದು ವರವೂ ಆಗಿದೆ.

FotoJet 2 61

ತೂಫಾನ್ ಹಾಡು ಬಿಡುಗಡೆ ಆಗುತ್ತಿದ್ದಂತೆಯೇ ಯಶ್ ಅಭಿಮಾನಿಗಳು ಕೆಜಿಎಫ್ 2 ಸಿನಿಮಾ ಹಿಟ್ ಆಗಲಿ ಎಂದು ಬೆಂಗಳೂರಿನ ದೊಡ್ಡ ಗಣಪತಿ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಅಲ್ಲಿ ಸಿಹಿ ಕೂಡ ಹಂಚಿದ್ದಾರೆ ಯಶ್ ಅವರ ಮಹಿಳಾ ಅಭಿಮಾನಿಗಳು.  ಇದನ್ನೂ ಓದಿ : ಅಮೆರಿಕಾದಲ್ಲಿ ಅಪ್ಪು ಬರ್ತಡೇ, ಪುನೀತ್ ರಾಜ್ ಕುಮಾರ್ ಮಗಳೇ ಅತಿಥಿ

FotoJet 82

ಇದೊಂದು ನಾಯಕನ ಬಿಲ್ಡ್ ಅಪ್ ರೀತಿಯ ಗೀತೆಯಾಗಿದ್ದು, ರವಿ ಬಸ್ರೂರು ಅವರ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿದೆ. ರವಿ ಅವರೇ ಸಾಹಿತ್ಯ ಬರೆದದ್ದು ಮತ್ತೊಂದು ವಿಶೇಷ. ಮತ್ತೊಂದು ವಿಶೇಷ ಅಂದರೆ, ಇದೇ ಮೊದಲ ಬಾರಿಗೆ ಇಷ್ಟೊಂದು ಗಾಯಕರು ಒಟ್ಟಿಗೆ ಸೇರಿ ಸಿನಿಮಾ ಹಾಡೊಂದನ್ನು ಹಾಡಿದ್ದಾರೆ. ಇದನ್ನೂ ಓದಿ : ಕನ್ನಡದ ‘ದಸರಾ’ ವರ್ಸಸ್ ತೆಲುಗಿನ ‘ದಸರಾ’: ಯಾರಿಗೆ ಸಿಗತ್ತೆ ದಸರಾ ಟೈಟಲ್?

FotoJet 1 65

ಸಂತೋಷ್ ವೆಂಕಿ, ಮೋಹನ್ ಕೃಷ್ಣ, ಸಚಿನ್ ಬಸ್ರೂರು, ಪುನೀರ್ ರುದ್ರನಾಗ್, ವರ್ಷ ಆಚಾರ್ಯ ಜತೆ ಬಾಲ ಗಾಯಕರಾದ ಗಿರಿಧರ್ ಕಾಮತ್, ಸಚಿನ್ ಕಾಮತ್, ನಿಶಾಂತ್ ಕಿಣಿ, ಭರತ್ ಭಟ್, ಅನಘ ನಾಯಕ್, ಅವಿನಿ ಭಟ್, ಸ್ವಾತಿ ಕಾಮತ್, ಶಿವಾನಂದ್ ನಾಯಕ್, ಕೀರ್ತನ್ ಬಸ್ರೂರು ಈ ಹಾಡಿಗೆ ಧ್ವನಿಯಾಗಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *