ಬೆಂಗಳೂರು: ನಟಿ ರಾಧಿಕಾ ಪಂಡಿತ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ಆರ್ ಅಕ್ಷರವನ್ನು ಹಿಡಿದ ತಮ್ಮ ಫೋಟೋವನ್ನು ಪೋಸ್ಟ್ ಮಾಡಿದ್ದರು. ಇದಕ್ಕೆ ನಟ ರಾಕಿಂಗ್ ಸ್ಟಾರ್ ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ನಟಿ ರಾಧಿಕಾ ಅವರು ತಮ್ಮ ಫೇಸ್‍ಬುಕ್, ಇನ್ ಸ್ಟಾಗ್ರಾಂನಲ್ಲಿ ಆರ್ ಅಕ್ಷರವನ್ನು ಹಿಡಿದು ಅದನ್ನು ತೋರಿಸುವ ರೀತಿಯಲ್ಲಿ ಫೋಟೋಗೆ ಪೋಸ್ ಕೊಟ್ಟಿದ್ದರು. ಆ ಫೋಟೋಗೆ “R stands for.. let see” ಎಂದು ಬರೆದುಕೊಂಡಿದ್ದರು. ರಾಧಿಕಾ ಅವರ ಪೋಸ್ಟ್ ನೋಡಿದ ತಕ್ಷಣ ಅಭಿಮಾನಿಗಳು ಮಗಳ ಹೆಸರು ಆರ್ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂದು ತಿಳಿದು, ಅನೇಕ ಹೆಸರುಗಳನ್ನು ಗೆಸ್ ಮಾಡಿ ಕಮೆಂಟ್ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ಯಶ್ ಸ್ಪಷ್ಟನೆ ಕೊಟ್ಟಿದ್ದಾರೆ.
ಮಂಗಳವಾರ ‘ಪಂಚತಂತ್ರ’ ಸಿನಿಮಾದ ಟ್ರೈಲರ್ ಬಿಡುಗಡೆಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಯಶ್, ಅದು ಮಗಳ ಹೆಸರಿನ ಮೊದಲ ಅಕ್ಷರವಲ್ಲ. ಅದು ರಾಕಿಂಗ್ ಸ್ಟಾರ್ ಮತ್ತು ರಾಧಿಕಾ ಅಂತ ಇರಬೇಕೆಂದು ಆರ್ ಎಂದು ಪೋಸ್ಟ್ ಹಾಕಿದ್ದಾರೆ. ನನಗೂ ತುಂಬಾ ಜನರು ಫೋನ್ ಮತ್ತು ಮೆಸೇಜ್ ಮಾಡಿ ಕೇಳುತ್ತಿದ್ದಾರೆ. ಆದರೆ ಮಗು ಹೆಸರು ಇನ್ನೂ ಫೈನಲ್ ಆಗಿಲ್ಲ. ಆದಷ್ಟು ಬೇಗ ಹೇಳುತ್ತೇವೆ. ಇದೇ ಅಕ್ಷರದಿಂದ ಬಂದಿದೆ ಎಂದು ಹೆಸರಿಡಲ್ಲ. ನಮಗೆ ಇಷ್ಟವಾದ ಹೆಸರಿಂದ ಕರೆಯುತ್ತೇವೆ ಎಂದರು.
https://www.instagram.com/p/BvJ7VLqhkRz/
ಈಗಾಗಲೇ ಅಭಿಮಾನಿಗಳು ತುಂಬಾ ಹೆಸರನ್ನು ಹೇಳುತ್ತಿದ್ದಾರೆ. ಅವರು ಇಷ್ಟೊಂದು ಪ್ರೀತಿ ತೋರಿಸುತ್ತಿರುವುದಕ್ಕೆ ತುಂಬಾ ಧನ್ಯವಾದಗಳು. ಒಳ್ಳೆಯ ಸಿನಿಮಾ ಆಫರ್ ಬಂದರೆ ರಾಧಿಕಾ ನಾನು ಒಟ್ಟಿಗೆ ಸಿನಿಮಾ ಮಾಡುತ್ತೇವೆ. ರಾಧಿಕಾ ನನ್ನ ಪತ್ನಿ ಎನ್ನುವುದಕ್ಕಿಂದ ಅವರೊಬ್ಬರು ಉತ್ತಮ ನಟಿ, ಅವರ ಜೊತೆ ನಟನೆ ಮಾಡುವುದು ಎಂದರೆ ಖುಷಿಯಾಗುತ್ತದೆ ಎಂದು ಯಶ್ ಹೇಳಿದ್ದಾರೆ.