ಬೆಂಗಳೂರು: ಡಾ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಹುಟ್ಟುಹಬ್ಬದ ವಿಶೇಷ ಇಂದು ಸ್ಯಾಂಡಲ್‍ವುಡ್ ನಟ ರಾಕಿಂಗ್‍ಸ್ಟಾರ್ ಯಶ್, ರಿಯಲ್ ಸ್ಟಾರ್ ಉಪೇಂದ್ರ, ನಟಿ ರಚಿತಾ ರಾಮ್ ಸೇರಿದಂತೆ ಹಲವಾರು ತಾರೆಯರು ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್‍ಗೆ ವಿಶ್ ಮಾಡಿದ್ದಾರೆ.
ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕೂಡ ಇನ್ಮುಂದೆ ಪುನೀತ್ ಹುಟ್ಟುಹಬ್ಬವನ್ನು ಸ್ಯಾಂಡಲ್‍ವುಡ್ ಡೇ ಎಂದು ಆಚರಿಸುವುದಾಗಿ ತಿಳಿಸಿದೆ. ಸದ್ಯ ಇಂದು ಪುನೀತ್ ಹುಟ್ಟುಹಬ್ಬವನ್ನು ರಾಜ್ಯಾದ್ಯಂತ ಜನ ಜಾತ್ರೆಯಂತೆ ಆಚರಿಸುತ್ತಿದ್ದಾರೆ. ಈ ನಡುವೆ ಚಂದನವನದ ತಾರೆಯರು ಅಪ್ಪು ಬರ್ತ್‍ಡೇಗೆ ಶುಭಾಶಯ ತಿಳಿಸಿದ್ದಾರೆ. ಇದನ್ನೂ ಓದಿ: ಅಪ್ಪು ನೆನೆದು ನಟಿ ಪ್ರಿಯಾ ಆನಂದ್ ಕಣ್ಣೀರು
ಯಶ್ ಅವರು ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಅಪ್ಪು ಜೊತೆಗಿರುವ ಫೋಟೋವನ್ನು ಹಂಚಿಕೊಂಡಿದ್ದು, ಕ್ಯಾಪ್ಷನ್‍ನಲ್ಲಿ ಎಂದೂ ಮರೆಯಾಗದ ನಗು, ಎಂದಿಗೂ ಹೊಂದಿಸಲಾಗದ ಶಾಖ, ಎಂದಿಗೂ ನಿಲ್ಲಿಸಲಾಗದಂತಹ ಶಕ್ತಿ, ಎಂದಿಗೂ ಕಸಿದುಕೊಳ್ಳಲಾಗದ ಎನರ್ಜಿ. ಅವರು ಎಂದಿಗೂ ಬದುಕಿರುತ್ತಾರೆ. ಹುಟ್ಟುಹಬ್ಬದ ಶುಭಾಶಯಗಳು ಅಪ್ಪು ಸರ್ ಎಂದು ವಿಶ್ ಮಾಡಿದ್ದಾರೆ.
View this post on Instagram
ಮತ್ತೊಂದೆಡೆ ಉಪೇಂದ್ರ ಅವರು ಪುನೀತ್ ಅವರನ್ನು ಆತ್ಮೀಯವಾಗಿ ತಬ್ಬಿಕೊಂಡಿರುವ ಫೋಟೋವನ್ನು ಇನ್‍ಸ್ಟಾಗ್ರಾಮ್‍ನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಅಪ್ಪುಗೆಯ ಸವಿ ನೆನಪು ನೂರು ಜನ್ಮ ಕಳೆದರೂ ಜೀವಂತವಾಗೇ ಇರುತ್ತದೆ. ಜನುಮ ದಿನದ ಹಾರ್ದಿಕ ಶುಭಾಶಯಗಳು ದೇವರ ಮಗ ಅಪ್ಪು ಎಂದು ಕ್ಯಾಪ್ಷನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಪ್ಪು ಸಮಾಧಿ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್‍ಕುಮಾರ್
View this post on Instagram
ನಟ ಸೃಜನ್ ಲೋಕೇಶ್ ಅವರು ಕೂಡ ಸಾಮಾಜಿಕ ಜಾಲತಾಣದಲ್ಲಿ ಫೋಟೋ ಹಂಚಿಕೊಳ್ಳುವುದರ ಜೊತೆಗೆ ಕನ್ನಡದ ಕಲಾ ಜಗತ್ತಿನ ಅಜರಾಮರ, ಸ್ಪೂರ್ತಿದಾಯಕ ಯುವರತ್ನ, ನಮ್ಮ ಪ್ರೀತಿಯ ಅಪ್ಪುವಿಗೆ ಹುಟ್ಟು ಹಬ್ಬದ ಶುಭಾಶಯಗಳು ಲವ್ ಯು ಅಪ್ಪು ಎಂದು ಶುಭ ಕೋರಿದ್ದಾರೆ. ಹೀಗೆ ನಟ ಪ್ರಜ್ವಲ್ ದೇವರಾಜ್, ನಿರ್ದೇಶಕ ಸಂತೋಷ್ ಆನಂದ್ ರಾಮ್, ನಟಿ ನಿಧಿ ಸುಬ್ಬಯ್ಯ, ನಟಿ ಪ್ರಿಯಾಂಕ ಉಪೇಂದ್ರ ಹೀಗೆ ಹಲವಾರು ಕಲಾವಿದರೂ ಶುಭಾಶಯ ತಿಳಿಸಿದ್ದಾರೆ.
View this post on Instagram