ಚಂದನವನದ ಬೆಸ್ಟ್ ಜೋಡಿ ಯಶ್ (Yash) ಮತ್ತು ರಾಧಿಕಾ ಪಂಡಿತ್‌ಗೆ (Radhika Pandit) ಇಂದು (ಆ.12) ಎಂಗೇಜ್‌ಮೆಂಟ್ ಸಂಭ್ರಮವಾಗಿದ್ದು, ಪತಿ ಯಶ್ ಬಗ್ಗೆ ರಾಧಿಕಾ ವಿಶೇಷ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ. 100 ಜನ್ಮದಲ್ಲೂ ನಿಮ್ಮನ್ನೇ ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ಯಶ್ ಕುರಿತು ನಟಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಮಾಜಿ ಪತಿಯ ನಿಶ್ಚಿತಾರ್ಥದ ಬೆನ್ನಲ್ಲೇ ಸಮಂತಾಗೆ ಮದುವೆ ಪ್ರಪೋಸಲ್
8 ವರ್ಷಗಳ ಹಿಂದೆ ಈ ದಿನ ನಾವು ನಿಶ್ಚಿತಾರ್ಥ ಮಾಡಿಕೊಂಡಾಗ ನಾನು ನೂರು ಜನ್ಮದಲ್ಲೂ ನಿಮ್ಮನ್ನು ಆಯ್ಕೆ ಮಾಡಿಕೊಳ್ಳುತ್ತೇನೆ ಎಂದು ನನಗೆ ಮೊದಲೇ ತಿಳಿದಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. 2016ರ ವೇಳೆ, ಆ.12ರಂದು ತೆಗೆದ ಎಂಗೇಜ್‌ಮೆಂಟ್ ಸಂಭ್ರಮದ ಫೋಟೋಗಳನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ. ಈ ಪೋಸ್ಟ್‌ಗೆ ಅಭಿಮಾನಿಗಳು ಬಗೆ ಬಗೆಯ ಕಾಮೆಂಟ್‌ಗಳನ್ನು ಮಾಡಿದ್ದಾರೆ. ಜೋಡಿ ಅಂದರೆ ಹೀಗಿರಬೇಕು ಎಂದಿದ್ದಾರೆ.
View this post on Instagram
ಅಂದಹಾಗೆ, ಹಲವು ವರ್ಷಗಳು ಪ್ರೀತಿಸಿ ಯಶ್ ಮತ್ತು ರಾಧಿಕಾ 2016ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ದಾಂಪತ್ಯಕ್ಕೆ ಇಬ್ಬರೂ ಮುದ್ದಾದ ಮಕ್ಕಳು ಸಾಕ್ಷಿಯಾಗಿದ್ದಾರೆ. ಇನ್ನೂ ಮಕ್ಕಳ ಪಾಲನೆಯಲ್ಲಿ ಬ್ಯುಸಿಯಾದ ರಾಧಿಕಾ, ಬಣ್ಣದ ಲೋಕದಿಂದ ಅಂತರ ಕಾಯ್ದುಕೊಂಡರು. ಇದೀಗ ಸಿನಿಮಾಗೆ ವಾಪಸ್ ಬರಲು ತಯಾರಿ ಮಾಡಿಕೊಳ್ತಿದ್ದಾರೆ. ಉತ್ತಮ ಕಥೆ ಸಿಕ್ಕರೆ ಖಂಡಿತಾ ನಟಿಸುತ್ತೇನೆ ಎಂದಿದ್ದಾರೆ.
ಇನ್ನೂ ಯಶ್ ಸದ್ಯ ‘ಟಾಕ್ಸಿಕ್’ (Toxic) ಸಿನಿಮಾ ಮುಹೂರ್ತ ನೆರವೇರಿದ ಬಳಿಕ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. 2025ರಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ.