ಬೆಂಗಳೂರಿನ ಚೆನ್ನಮ್ಮನ ಅಚ್ಚುಕಟ್ಟು ಪ್ರದೇಶ ಪೊಲೀಸರು (Police) ನಟ ಉಪೇಂದ್ರ (Upendra) ಅವರಿಗೆ ನೋಟಿಸ್ ಕೊಡುತ್ತಿದ್ದಂತೆ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಉಪೇಂದ್ರ ಎಸ್ಕೇಪ್ ಆಗಿದ್ದಾರೆ ಎಂದು ಹೇಳಲಾಗುತ್ತಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪೇಂದ್ರ ಅವರನ್ನು ಪೊಲೀಸರು ಸಂಪರ್ಕ ಮಾಡುತ್ತಿದ್ದಾರಂತೆ.
Advertisement
ಉಪೇಂದ್ರ ಅವರಿಗೆ ಸೇರಿದ ಎರಡು ಮನೆ ಹಾಗೂ ಅವರ ವಾಟ್ಸಪ್ ಗೆ ನೋಟಿಸ್ (Notice) ಕಳಿಸಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ. ಅಲ್ಲದೇ, ಹಲಸೂರು ಗೇಟ್ ಠಾಣೆಯಲ್ಲಿ ದಾಖಲಾಗಿರೋ ಎಫ್ ಐ ಆರ್ ಅನ್ನು ಕೂಡ ಎಸಿಪಿ ವಿವಿಪುರಂಗೆ ವರ್ಗಾವಣೆ ಮಾಡಲಿದ್ದಾರೆ ಅಂತ ಹಲಸೂರುಗೇಟ್ ಪೊಲೀಸರು.
Advertisement
Advertisement
ಮತ್ತೊಂದು ಕಡೆ ಉಪೇಂದ್ರ ಅವರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿ ನಟನ ಹೇಳಿಕೆಯ ವಿರುದ್ಧ ವಿದ್ಯಾರ್ಥಿಗಳ ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಮತ್ತು ಸಂಶೋಧನ ವಿದ್ಯಾರ್ಥಿ ಒಕ್ಕೂಟದಿಂದ ಪ್ರತಿಭಟನೆ ಹಮ್ಮಿಕೊಂಡಿದ್ದು, ಉಪೇಂದ್ರ ಅವರ ಪ್ರತಿಕೃತಿ ದಹಿಸಿ ಪ್ರತಿಭಟನೆಗೆ ಮಾಡಲು ತೀರ್ಮಾನ ತೆಗೆದುಕೊಳ್ಳಲಾಗಿದೆ. ಇದನ್ನೂ ಓದಿ:‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ತೆಲುಗಿಗೆ ಡಬ್- ಆಗಸ್ಟ್ 26ಕ್ಕೆ ಸಿನಿಮಾ ರಿಲೀಸ್
Advertisement
ಈ ಪ್ರತಿಭಟನೆಯಲ್ಲಿ ನೂರಾರು ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಸೇರುವ ನಿರೀಕ್ಷೆಯಿದ್ದು, ಒಂದು ಕಡೆ ಪೊಲೀಸರಿಂದ ಕಡೆಯಿಂದ ಉಪೇಂದ್ರ ಗೆ ನೋಟಿಸ್ ಮತ್ತೊಂದು ಕಡೆ ಹೇಳಿಕೆ ಖಂಡಿಸಿ ಪ್ರತಿಭಟನೆ ನಡೆಯಲಿದೆ. ವಿವಾದಾತ್ಮಕ ಹೇಳಿಕೆಯಿಂದ ಉಪೇಂದ್ರ ಇಕ್ಕಟ್ಟಿಗೆ ಸಿಲುಕಿದ್ದಾರೆ.
ಆಕ್ಷೇಪಾರ್ಹ ಪದ ಬಳಕೆ ಮಾಡಿದ ನಟ ಉಪೇಂದ್ರ ಅವರಿಗೆ ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸ್ ನೋಟಿಸ್ ಜಾರಿ ಮಾಡಿದ್ದಾರೆ. ತಕ್ಷಣ ವಿಚಾರಣೆಗೆ ಹಾಜರಾಗುಂತೆ ಉಪೇಂದ್ರ ಅವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಆಕ್ಷೇಪಾರ್ಹ ಪದ ಬಳಕೆ ಮಾಡಿ ಮಾತನಾಡಿದ್ದ ಆರೋಪದ ಮೇಲೆ ಉಪೇಂದ್ರ ವಿರುದ್ಧ. ಸಿ.ಕೆ ಅಚ್ಚುಕಟ್ಟು ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲು ಆಗಿತ್ತು.
ದೂರುದಾರ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಮಧುಸೂದನ್ ಸಮ್ಮುಖದಲ್ಲಿ ಉಪೇಂದ್ರ ಮನೆ ಮಹಜರ್ ಮಾಡಲಿದ್ದು, ಇಂದು ಬೆಳಗ್ಗೆ 10 ಗಂಟೆಗೆ ಕತ್ರಿಗುಪ್ಪೆ ಮನೆಯಲ್ಲಿ ಪೊಲೀಸರು ಮಹಜರ್ ಮಾಡಲಿದ್ದಾರೆ. ಉಪೇಂದ್ರ ಕತ್ರಿಗುಪ್ಪೆ ಮನೆಯಲ್ಲಿ ಕೂತು ವಿಡಿಯೋ ಮಾಡಿರೋ ಹಿನ್ನಲೆ ಕತ್ರಿಗುಪ್ಪೆ ಮನೆ ಮಹಜರ್ ಮಾಡಲಿದ್ದಾರೆ.
Web Stories