‘ದೇವಿ’ ಸೀರಿಯಲ್ (Devi Serial) ಮೂಲಕ ಬಣ್ಣದ ಲೋಕಕ್ಕೆ ಲಗ್ಗೆಯಿಟ್ಟ ವಿಠ್ಠಲ್ ಕಾಮತ್ (Vittal Kamath) ಇದೀಗ ಮತ್ತೆ ಕಿರುತೆರೆಯಲ್ಲಿ ಆಕ್ಟೀವ್ ಆಗಿದ್ದಾರೆ. ‘ಅಂತರಪಟ’ (Antarapata) ಧಾರಾವಾಹಿ ಮೂಲಕ ಮತ್ತೆ ಟಿವಿ ಪ್ರೇಕ್ಷಕರಿಗೆ ಮೋಡಿ ಮಾಡಲು ರೆಡಿಯಾಗಿದ್ದಾರೆ.
ಮೈಸೂರಿನ (Mysore) ಪ್ರತಿಭೆ ವಿಠ್ಠಲ್ ಕಾಮತ್ ಅಲಿಯಾಸ್ ಸೂರ್ಯ ಅವರು ದೇವಿ, ಅಕ್ಕ ಸೀರಿಯಲ್ ನಾಯಕನಾಗಿ ನಟಿಸಿದ್ದರು. ಈ ಧಾರಾವಾಹಿಯಲ್ಲಿನ ವಿಠ್ಠಲ್ ನಟನೆಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಬಳಿಕ ಹಿರಿತೆರೆಯಲ್ಲಿ ‘ಪ್ರೀತಿಯಲ್ಲಿ ಸಹಜ’, ‘ಕಟ್ಟುಕಥೆ’ (Kattukathe) ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದರು. ಇದನ್ನೂ ಓದಿ:ಐರೆನ್ ಲೆಗ್ ಎಂದು ಟೀಕಿಸಿದವರಿಗೆ ಉತ್ತರ ಕೊಟ್ಟ ಶ್ರುತಿ ಹಾಸನ್
ಸ್ವಪ್ನ ಕೃಷ್ಣ ನಿರ್ದೇಶನದ ‘ಅಂತರಪಟ’ ಸೀರಿಯಲ್‌ನಲ್ಲಿ ವಿಠ್ಠಲ್ ಕಾಮತ್ ಅವರು ನೆಗೆಟಿವ್ ಶೇಡ್‌ನಲ್ಲಿ (Negative Role) ಕಾಣಿಸಿಕೊಂಡಿದ್ದಾರೆ. ಇದುವರೆಗೂ ಹೀರೋ ಆಗಿ ನಟಿಸಿ ಸೈ ಎನಿಸಿಕೊಂಡಿದ್ದ ನಟ, ವಿಭಿನ್ನ ಪಾತ್ರದ ಮೂಲಕ ಪ್ರೇಕ್ಷಕರ ಮನಗೆಲ್ಲಲು ಸಜ್ಜಾಗಿದ್ದಾರೆ.
ನಟನಾಗಬೇಕು ಎಂದು ಕನಸು ಕಂಡಿದ್ದ ವಿಠ್ಠಲ್ ಕಾಮತ್ ಅವರು ಇದೀಗ ಹೊಸ ಬಗೆಯ ಪಾತ್ರಗಳ ಮೂಲಕ ಬರುತ್ತಿದ್ದಾರೆ. ಮತ್ತೊಂದಿಷ್ಟು ಪ್ರಾಜೆಕ್ಟ್‌ಗಳು ಮಾತುಕತೆ ಹಂತದಲ್ಲಿದೆ. ಸದ್ಯದಲ್ಲೇ ಈ ಬಗ್ಗೆ ನಟ ವಿಠ್ಠಲ್ ಅಧಿಕೃತ ಅಪ್‌ಡೇಟ್ ಹಂಚಿಕೊಳ್ಳಲಿದ್ದಾರೆ.