ಅಣ್ಣಾಮಲೈ ಬಯೋಪಿಕ್‌ನಲ್ಲಿ ತಮಿಳು ನಟ ವಿಶಾಲ್?

Public TV
1 Min Read
annamalai

ಮ್ಮ ಕಟ್ಟುನಿಟ್ಟಾದ ಕಾರ್ಯ ವೈಖರಿ ಮೂಲಕ ‘ಸಿಂಗಂ ಅಣ್ಣ’ ಎಂದೇ ಬಿರುದು ಪಡೆದಿದ್ದ ನಿವೃತ್ತ ಪೊಲೀಸ್ ಅಧಿಕಾರಿ ಅಣ್ಣಾಮಲೈ ಅವರ ಬಯೋಪಿಕ್ ಮಾಡಲು ಕಾಲಿವುಡ್‌ನಲ್ಲಿ ತಯಾರಿ ಮಾಡಲಾಗುತ್ತಿದೆ. ಅಣ್ಣಾಮಲೈ ಪಾತ್ರಕ್ಕೆ ತಮಿಳಿನ ನಟ ವಿಶಾಲ್ (Actor Vishal) ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ.

vishal

ಪೊಲೀಸ್ ಕೆಲಸಕ್ಕೆ ರಾಜೀನಾಮೆ ಕೊಟ್ಟ ಬಳಿಕ ರಾಜಕೀಯ ಅಖಾಡದಲ್ಲಿ ಗುರುತಿಸಿಕೊಳ್ತಿದ್ದಾರೆ. ದಕ್ಷ ಅಧಿಕಾರಿ ಆಗಿದ್ದಾಗಲೇ ಹಲವು ಉತ್ತಮ ಕೆಲಸಗಳ ಗಮನ ಸೆಳೆದಿದ್ದ ಸಿಂಗಂ ಅಣ್ಣ ಸದ್ಯ ಲೋಕಸಭಾ ಚುನಾವಣೆ (Loksabha Election 2024) ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಹೊಸ ಸಿನಿಮಾದ ಮುಹೂರ್ತ ಸಂಭ್ರಮದಲ್ಲಿ ಜಾನ್ವಿ ಕಪೂರ್

ತಮಿಳುನಾಡಿನ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಕುರಿತು ಬಯೋಪಿಕ್ ಮಾಡುವ ಬಗ್ಗೆ ಭಾರೀ ಚರ್ಚೆ ಶುರುವಾಗಿದ್ದು, ಅವರ ಪಾತ್ರಕ್ಕೆ ನಟ ವಿಶಾಲ್ ಸೂಕ್ತ ಎಂದು ಆಯ್ಕೆ ಮಾಡಲಾಗಿದೆ. ಈಗಾಗಲೇ ಪೊಲೀಸ್‌ ಪಾತ್ರದಲ್ಲಿ ಖದರ್‌ ತೋರಿಸಿರುವ ವಿಶಾಲ್‌ಗೆ (Vishal) ಅಣ್ಣಾಮಲೈ ಪಾತ್ರ ಕಷ್ಟವಾಗಲ್ಲ ಎಂಬುದು ಹಲವರ ಅಭಿಪ್ರಾಯ.

ನಿರ್ಮಾಣ ಸಂಸ್ಥೆಯೊಂದು ಅಣ್ಣಾಮಲೈ ಬಯೋಪಿಕ್ ಮಾಡಲು ಮುಂದಾಗಿದ್ದು, ವಿಶಾಲ್ ಅವರು ಅಣ್ಣಾಮಲೈ ಪಾತ್ರಕ್ಕೆ ಸೂಕ್ತ ಎಂದು ತೀರ್ಮಾನಿಸಿದ್ದಾರೆ ಎನ್ನಲಾಗಿದೆ. ಚಿತ್ರತಂಡ ಕೂಡ ವಿಶಾಲ್‌ರನ್ನು ಸಂಪರ್ಕಿಸಿದೆ ಎನ್ನಲಾಗಿದೆ. ಸದ್ಯದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ. ಅಲ್ಲಿಯವರೆಗೂ ಕಾಯಬೇಕಿದೆ.

Share This Article