ತಮಿಳು ನಟ ವಿಶಾಲ್ (Vishal) ಖ್ಯಾತ ನಟಿಯೊಬ್ಬರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.
ಅವರು ಮದುವೆಯಾಗಲಿರುವ ನಟಿ ಸಾಯಿ ಧನ್ಶಿಕಾ ( Sai Dhanshika) ಎಂಬ ವದಂತಿ ಇದೆ. ನಟ ವಿಶಾಲ್ ಮತ್ತು ನಟಿ ಸಾಯಿ ಧನ್ಶಿಕಾ ಕಳೆದ ಕೆಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ. ಸ್ನೇಹದಿಂದ ಆರಂಭವಾದ ಅವರ ನಂಟು ಪ್ರೀತಿಯಾಗಿ ಬದಲಾಗಿತ್ತು ಎಂದು ವರದಿಯಾಗಿದೆ.
ನಡಿಗರ್ ಸಂಘದ (ತಮಿಳು ಚಲನಚಿತ್ರ ನಟರ ಸಂಘ) ಭಾಗವಾಗಿರುವ ವಿಶಾಲ್, 9 ವರ್ಷಗಳ ಹಿಂದೆ ನಿಧಿ ಸಂಗ್ರಹಿಸಿ ನಡಿಗರ್ ಸಂಘದ ಕಟ್ಟಡ ನಿರ್ಮಾಣ ಪೂರ್ಣ ಆದ್ಮೇಲೆ ಮದುವೆ ಆಗೋದಾಗಿ ಘೋಷಿಸಿದ್ದರು. ಕೆಲವು ದಿನಗಳ ಹಿಂದೆ ಸಂದರ್ಶನದಲ್ಲಿ, ನಡಿಗರ್ ಸಂಘದ ಕಟ್ಟಡವು ಈಗ ಪೂರ್ಣಗೊಳ್ಳುತ್ತಿದೆ. ನಿಮ್ಮ ಮದುವೆಯ ಕತೆ ಏನು? ಎಂಬ ಪ್ರಶ್ನೆ ಕೇಳಲಾಗಿತ್ತು.
ಈ ಪ್ರಶ್ನೆಗೆ ವಿಶಾಲ್, ಹೌದು, ನನ್ನ ಸಂಗಾತಿಯನ್ನು ನಾನು ಹುಡುಕಿಕೊಂಡಿದ್ದೇನೆ. ಮದುವೆಯ ಬಗ್ಗೆ ಮಾತುಕತೆ ನಡೆಸಿದ್ದೇವೆ. ವಧುವಿನ ವಿವರಗಳು ಮತ್ತು ವಿವಾಹದ ದಿನಾಂಕದ ಬಗ್ಗೆ ಶೀಘ್ರದಲ್ಲೇ ಮಾಹಿತಿ ನೀಡುತ್ತೇನೆ ಎಂದಿದ್ದರು.
ವಿಶಾಲ್ ಶೀಘ್ರದಲ್ಲೇ ಮದುವೆ ಸುದ್ದಿ ಘೋಷಿಸುವುದಾಗಿ ಹೇಳಿದ್ದರಿಂದ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಸಾಯಿ ಧನ್ಶಿಕಾ ಅಥವಾ ವಿಶಾಲ್‌ರಿಂದ ಅವರಿಬ್ಬರ ವಿವಾಹದ ಯಾವುದೇ ಅಧಿಕೃತ ಸುದ್ದಿ ಇನ್ನೂ ಬಂದಿಲ್ಲ. ದನ್ಶಿಕಾ ತಮಿಳಿನ ಕಬಾಲಿ, ಪೆರಣ್ಮಯಿ, ಅರಾವಣ, ಮತ್ತು ಪರದೇಸಿ ಚಿತ್ರಗಳಲ್ಲಿ ನಟಿಸಿದ್ದಾರೆ.
ಹಿಂದೆ ವಿಶಾಲ್, ವರಲಕ್ಷ್ಮಿ ಶರತ್‌ಕುಮಾರ್ ಅವರ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿ ಹಬ್ಬಿತ್ತು. ನಂತರ, ಅವರು ನಟಿ ಅನಿಶಾ ಅಲ್ಲಾ ಅವರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡರು, ಆದರೆ ಕೆಲವು ಕಾರಣಗಳಿಂದ ಅವರು ತಮ್ಮ ಮದುವೆಯನ್ನು ರದ್ದುಗೊಳಿಸಿಕೊಂಡಿದ್ದರು.