ಸೋಲ್‌ಮೇಟ್ ಪರಿಚಯಿಸಿದ ನಟ ವಿಶಾಲ್

Public TV
1 Min Read
Vishal 2

ಮಿಳು ನಟ ವಿಶಾಲ್ ಇಂದಿಗೂ ಬ್ಯಾಚುಲರ್. ಇವರ ಹೆಸರು ಹಲವು ನಟಿಯರ ಜೊತೆ ಥಳುಕು ಹಾಕಿಕೊಂಡರೂ ಮದುವೆ ಆಗಲಿಲ್ಲ ವಿಶಾಲ್. ಆದರೆ ಇದೀಗ ವಿಶಾಲ್ ಏಕಾಏಕಿ ಸೋಲ್‌ಮೇಟ್ ಪರಿಚಯಿಸಿ ಕುತೂಹಲ ಮೂಡಿಸಿದ್ದಾರೆ. ಗೆಳತಿ ಜೊತೆ ಆತ್ಮೀಯವಾಗಿರುವ ಫೋಟೋ ಪೋಸ್ಟ್ ಮಾಡಿರುವ ವಿಶಾಲ್ ಆಕೆಯನ್ನ ಹಾಡಿ ಹೊಗಳಿದ್ದಾರೆ.

Vishal 1

ವಿಶಾಲ್ ಪರಿಚಯಿಸಿರುವ ಅವರ ಸೋಲ್‌ಮೇಟ್ ಹೆಸರು ವಾಸುಕಿ ಭಾಸ್ಕರ್. ತಮಿಳು ಸಿನಿಮಾ ಇಂಡಸ್ಟ್ರಿಯ ಫೇಮಸ್ ಕಾಸ್ಟ್ಯೂಮ್‍ ಡಿಸೈನರ್. ಸಂಗೀತ ನಿರ್ದೇಶಕ ಇಳಿಯರಾಜಾ ಸಂಬಂಧಿ ಕೂಡ. ಈಕೆ ಹಾಗೂ ವಿಶಾಲ್ ಆಪ್ತರು ಅನ್ನೋದು ಕಾಲಿವುಡ್ ಭಾಗದಲ್ಲಿ ಗೊತ್ತಿರೋದೇ. ಆದರೆ ಇದೀಗ ಗೆಳತಿಗೆ ಹುಟ್ಟುಹಬ್ಬದ ಶುಭಾಷಯ ತಿಳಿಸಿದ ಪರಿ ಮಾತ್ರ ವಿಶೇಷವಾಗಿದೆ. ವಾಸುಕಿ ವಿಶಾಲ್ ಮದುವೆಯಾಗುತ್ತಿರಬಹುದೇ ಎಂಬ ಚರ್ಚೆ ಹುಟ್ಟುಹಾಕಿದೆ ಒಂದು ಫೋಟೋ.

 

ಸದಾ ಒಂದಿಲ್ಲೊಂದು ವಿಚಾರದಲ್ಲಿ ಭಾರೀ ಸುದ್ದಿಯಾಗುವ ತಮಿಳು ನಟ ವಿಶಾಲ್. ಹಲವು ವರ್ಷಗಳಿಂದ ವಾಸುಕಿ ಜೊತೆ ಅನ್ಯೂನ್ಯ ಸ್ನೇಹ ಹೊಂದಿದ್ದಾರೆ. ಆದರೆ ಮದುವೆ ಬಗ್ಗೆ ಈ ಜೋಡಿ ಯೋಚಿಸಿಲ್ಲ ಎಂಬ ಮಾತು ಕಾಲಿವುಡ್ ಗಲ್ಲಿಗಳಲ್ಲಿ ಆಗಾಗ ಓಡಾಡುತ್ತಿರುತ್ತೆ. ಅದಕ್ಕೆ ಸಾಕ್ಷಿ ಅನ್ನುವಂತೆ ಹಲವು ವರ್ಷಗಳಿಂದ ಇಬ್ಬರ ಕಡೆಯಿಂದಲೂ ಮದುವೆ ನ್ಯೂಸ್ ಬರಲೂ ಇಲ್ಲ. ಆದರೆ ಇದೀಗ ವಿಶಾಲ್ ವಾಸುಕಿಯನ್ನ ಸೋಲ್‌ಮೇಟ್ ಎಂದಿದ್ದೇ ಮದುವೆ ಬಗೆಗಿನ ಕುತೂಹಲಕ್ಕೆ ಕಾರಣವಾಗಿದೆ.

Share This Article