ಚೆನ್ನೈ: ಇತ್ತೀಚೆಗಷ್ಟೇ ತಮ್ಮ ಬಹುದಿನಗಳ ಗೆಳತಿ ಅಶಿಷಾ ರೆಡ್ಡಿರೊಂದಿಗೆ ನಿಶ್ಚಿತಾರ್ಥ ಮಾಡಿಕೊಂಡ ತಮಿಳು ನಟ ವಿಶಾಲ್ ಸಿನಿಮಾ ಶೂಟಿಂಗ್ ವೇಳೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.
ಸದ್ಯ ವಿಶಾಲ್ ಅವರ ಮುಂದಿನ ಸಿನಿಮಾದ ಶೂಟಿಂಗ್ ಟರ್ಕಿಯಲ್ಲಿ ನಡೆಯುತ್ತಿದ್ದು, ಸಹಾಸ ದೃಶ್ಯ ಚಿತ್ರೀಕರಣದ ವೇಳೆ ಬೈಕಿನಿಂದ ಬಿದ್ದು ಗಾಯಗೊಂಡಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
ವಿಶಾಲ್ ಅವರ ಎಡಗೈ ಹಾಗೂ ಎಡಗಾಲಿಗೆ ಗಾಯವಾಗಿದ್ದು, ಚಿಕಿತ್ಸೆ ಪಡೆದ ಬಳಿಕ ಕನಿಷ್ಠ 2 ವಾರಗಳ ವಿಶ್ರಾಂತಿ ಪಡೆಯುವಂತೆ ವೈದ್ಯರು ಸೂಚಿಸಿದ್ದಾರೆ ಎನ್ನಲಾಗಿದೆ. ಸಿನಿಮಾ ಶೂಟಿಂಗ್ ಪೂರ್ಣಗೊಂಡ ಬಳಿಕವೇ ಚಿತ್ರತಂಡ ವಾಪಸ್ ಆಗಲಿದ್ದು, ಬಹುತೇಕ ಚೇತರಿಸಿಕೊಳ್ಳುವ ನಿರೀಕ್ಷೆಯನ್ನು ಚಿತ್ರತಂಡ ವ್ಯಕ್ತಪಡಿಸಿದೆ. ಇತ್ತ ತಮ್ಮ ನೆಚ್ಚಿನ ನಟ ಬಹುಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಟ್ವೀಟ್ ಮಾಡಿ ಪ್ರಾರ್ಥನೆ ಮಾಡಿದ್ದಾರೆ.
ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್ ಚಾಪ್ಟರ್ 1 ಸಿನಿಮಾವನ್ನು ನಟ ವಿಶಾಲ್ ತಮಿಳುನಾಡಿನಲ್ಲಿ ವಿತರಣೆ ಮಾಡಿದ್ದರು. ಆ ವೇಳೆಯೇ ಇಬ್ಬರು ನಟನ ನಡುವಿನ ಸ್ನೇಹಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಟಾಲಿವುಡ್ ಜೂನಿಯರ್ ಎನ್‍ಟಿಆರ್ ನಟನೆಯ ಟೆಂಪರ್ ಸಿನಿಮಾ ತಮಿಳು ರಿಮೇಕ್ ‘ಅಯೋಗ್ಯ’ ಸಿನಿಮಾದಲ್ಲಿ ವಿಶಾಲ್ ನಟಿಸಿದ್ದು, ಬಿಡುಗಡೆಗೆ ಸಿದ್ಧವಾಗಿದೆ.
Yes.. happy. Too happy. Happiest. Her name s #AnishaAlla. And yes she said yes. And it’s confirmed. My next biggest transition in life.????????????????❤️❤️❤️???????????? will be announcing the date soon. God bless. pic.twitter.com/NNF7W66T2h
— Vishal (@VishalKOfficial) January 16, 2019