ತಮಿಳಿನ ಸಾಕಷ್ಟು ಸಿನಿಮಾಗಳ ಮೂಲಕ ಸಂಚಲನ ಮೂಡಿಸಿರುವ ಹೀರೋ ವಿಶಾಲ್(Actor Vishal) ಸದ್ಯ `ಲಾಠಿ'(Lathi Film) ಚಿತ್ರದ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದಾರೆ. ಈ ವೇಳೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ವಿಶಾಲ್ ಮದುವೆ ವಿಷ್ಯಕ್ಕೆ ರಿಯಾಕ್ಟ್ ಮಾಡಿದ್ದಾರೆ. ತಮ್ಮ ಮದುವೆ ಯಾವಾಗ ಎಂಬುದನ್ನ ರಿವೀಲ್ ಮಾಡಿದ್ದಾರೆ.
ಕಾಲಿವುಡ್(Kollywood) ಸ್ಟಾರ್ ನಟ ವಿಶಾಲ್, ಸಿನಿಮಾಗಳ ಹಲವು ಸಮಾಜಮುಖಿ ಕಾರ್ಯಗಳ ಮೂಲಕ ಗುರುತಿಸಿಕೊಂಡಿದ್ದಾರೆ. ಕರ್ನಾಟಕದ ಜೊತೆ ಪುನೀತ್ ಕುಟುಂಬದ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಅಪ್ಪು ಅಗಲಿಕೆಯ ನಂತರ ಶಕ್ತಿಧಾಮದ ಮಕ್ಕಳ ಜವಬ್ದಾರಿಯನ್ನು ತಾವೇ ಹೊತ್ತುಕೊಳ್ಳುವುದಾಗಿ ಹೇಳಿದ್ದರು. ಚಿತ್ರರಂಗದ ಕಾರ್ಮಿಕರ ಸಂಕಷ್ಟಕ್ಕೂ ವಿಶಾಲ್ ಸಾಥ್ ನೀಡಿದ್ದಾರೆ.
ವಿಶಾಲ್ ನಟನೆಯ ಬಹುನಿರೀಕ್ಷಿತ ಸಿನಿಮಾ `ಲಾಠಿ’ ಸದ್ಯದಲ್ಲೇ ತೆರೆಗೆ ಅಪ್ಪಳಿಸಲಿದೆ. ಸದ್ಯ ಈ ಚಿತ್ರದ ಪ್ರಚಾರದಲ್ಲಿರುವ ವಿಶಾಲ್, ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ಪ್ರತಿ ವಿಚಾರಕ್ಕೂ ಒಂದು ಸಮಯ ಬರಬೇಕು. ದಕ್ಷಿಣ ಭಾರತದ ಕಲಾವಿದರ ಸಂಘದ ಕಟ್ಟಡ ನಿರ್ಮಾಣದ ಬಳಿಕ ನಾನು ಮದುವೆ ಆಗುತ್ತೇನೆ. ಆ ಕಟ್ಟಡದಿಂದ 3500 ಕಲಾವಿದರ ಕುಟುಂಬಗಳಿಗೆ ಸಹಾಯ ಆಗಲಿದೆ ಎಂದು ವಿಶಾಲ್ ಮಾತನಾಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ವೇದಿಕೆಯಲ್ಲಿ ಸಿಹಿ ಸುದ್ದಿ ಕೊಟ್ರು ವರುಣ್ ಧವನ್
ನಟ ವಿಶಾಲ್‌ಗೆ 45 ವರ್ಷ ವಯಸ್ಸಾಗಿದೆ. ಈ ಹಿಂದೆ ಹೈದರಾಬಾದ್‌ನ ಯುವತಿ ಜೊತೆ ನಿಶ್ಚಿತಾರ್ಥವಾಗಿತ್ತು. ಬಳಿಕ ವೈಯಕ್ತಿಕ ಕಕಾರಣಗಳಿಂದ ಈ ಸಂಬಂಧ ಮುರಿದು ಬಿದ್ದಿತ್ತು. ಇದೀಗ ಮತ್ತೆ ವಿಶಾಲ್ ಎಂಗೇಜ್ ಆಗಿದ್ದಾರೆ ಎನ್ನಲಾಗುತ್ತಿದೆ. ಸದ್ಯದಲ್ಲೇ ಈ ಕುರಿತು ನಟ ರಿವೀಲ್ ಮಾಡಲಿದ್ದಾರೆ ಎನ್ನಲಾಗುತ್ತಿದೆ.