ಅನೇಕ ಮಕ್ಕಳು ದೊಡ್ಡವರಾದ ಮೇಲೆ ತಂದೆ ತಾಯಿಯನ್ನು ಮರೆತು ಬೇರೆ ಇದ್ದು ತಮ್ಮ ಜೀವನವನ್ನು ಕೊಳ್ಳುತ್ತಾರೆ. ಆದರೆ ನಟ ವಿನೋದ್ ರಾಜ್ (Vinod Raj) ತಮ್ಮ ತಾಯಿ, ಹಿರಿಯ ನಟಿ ಎಂ.ಲೀಲಾವತಿಯವರ (Leelavathi) ಆರೋಗ್ಯವನ್ನು ಕಾಪಾಡುವ ಸಲುವಾಗಿ ಬೆಳಗಿನ ವ್ಯಾಯಾಮಕ್ಕೆ (Exercise) ಹಾಡಿನ ಜೊತೆಯಲ್ಲಿ ಹೆಜ್ಜೆ ಹಾಕಿಸಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಸೋಲದೇವನಹಳ್ಳಿಯ ತೋಟದಲ್ಲಿ ಸಾಕಷ್ಟು ವರ್ಷಗಳಿಂದ ತಾಯಿ-ಮಗ ಜೀವನ ನಡೆಸುತಿದ್ದಾರೆ. ಈ ನಡುವೆ ಜನರಿಗಾಗಿ ಪ್ರಾಥಮಿಕ ಆರೋಗ್ಯ ಕೇಂದ್ರವನ್ನೂ ಅವರು ನಿರ್ಮಿಸಿದ್ದಾರೆ. ಈಗ ಮತ್ತೊಂದು ಪಶು ಆಸ್ಪತ್ರೆ ನಿರ್ಮಾಣ ಕಾರ್ಯದಲ್ಲೂ ಬ್ಯುಸಿಯಾಗಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಯಲ್ಲಿ 30 ಸೆಕೆಂಡ್ ಲಿಪ್ ಲಾಕ್: ಕಣ್ಮುಚ್ಚಿಕೊಂಡ ಪೂಜಾ ಭಟ್
ಸಮಾಜಮುಖಿ ಕೆಲಸಗಳುಮತ್ತು ಕೃಷಿ ಜೊತೆಗೆ ವಿನೋದ್ ರಾಜ್ ಅವರಿಗೆ ತಾಯಿಯ ಯೋಗಕ್ಷೇಮವೂ ಅಷ್ಟೇ ಮುಖ್ಯ. ಹೀಗಾಗಿ ಪ್ರತಿನಿತ್ಯ ಬೆಳಿಗ್ಗೆ ತಾಯಿಯ ಆಸೆಯಂತೆ ವಿನೋದ್ ರಾಜ್ ಅಮ್ಮನ ಆರೋಗ್ಯವನ್ನು (Health) ನೋಡಿಕೊಳ್ಳುತ್ತಿದ್ದಾರೆ. ಅವರೊಂದಿಗೆ ಪ್ರತಿದಿನವೂ ಬೇರೆ ಬೇರೆ ಹಾಡುಗಳಿಗೆ ಹೆಜ್ಜೆ (Dance) ಹಾಕುತ್ತಾರೆ.
ಎಂದಿನಂತೆ ಇಂದೂ ಕೂಡ ತಾಯಿಯ ಜೊತೆ ಜೊತೆಯಲೇ ಹಾಡಿಗೆ ಹೆಜ್ಜೆ ಹಾಕಿಸಿ ವ್ಯಾಯಾಮ ಮಾಡಿದ್ದಾರೆ. ಇನ್ನೂ ಈ ಇಳಿ ವಯಸ್ಸಿನಲ್ಲಿ ಅಮ್ಮನ ಉತ್ಸಾಹವನ್ನು ನೋಡಿದ ಮಗ ವಿನೋದ್ ರಾಜ್ ಖುಷ್ ಹಾಗಿದ್ದಾರೆ. ಸದಾ ಕಾಲ ಅಮ್ಮ ಆರೋಗ್ಯವಂಥಳಾಗಿ ಇರಬೇಕು ಎಂದು ನಿತ್ಯ ಪ್ರಾರ್ಥನೆ ಮಾಡುತ್ತಾರೆ.
Web Stories