ಹಿರಿಯ ನಟಿ ಲೀಲಾವತಿ (Leelavathi) ಅವರು ಇಂದು ಇಹಲೋಕ ತ್ಯಜಿಸಿದ್ದಾರೆ. ತಾಯಿಯ ನಿಧನ ವಿನೋದ್ ರಾಜ್‌ಗೆ ಶಾಕ್ ಕೊಟ್ಟಿದ್ದು, ಲೀಲಾವತಿ ಅವರ ಕಡೆಯ ಕ್ಷಣ ಹೇಗಿತ್ತು ಎಂದು ವಿನೋದ್ ರಾಜ್ (Vinod Raj) ಹೇಳಿದ್ದಾರೆ. ನಾನು ಮನೆಯಲ್ಲಿ ಇದ್ದಿದ್ರೆ, ಅಮ್ಮನ ಜೀವ ಉಳಿಯುತ್ತಿತ್ತು ಎಂದು ತಾಯಿಯ ನಿಧನ ಬಗ್ಗೆ ಭಾವುಕರಾಗಿದ್ದಾರೆ.
Advertisement
ಲೀಲಾವತಿ ಅವರು ಇಂದು ನಿಧನರಾಗಿದ್ದು, ಈ ಬಗ್ಗೆ ಪುತ್ರ ವಿನೋದ್ ರಾಜ್ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಸಾವು ಒಪ್ಪಿಕೊಳ್ಳೋಕೆ ಕಷ್ಟ ಆಗ್ತಿದೆ. ಕಷ್ಟಪಟ್ಟು ಬೆಳೆದಿರೋ ಜೀವ ಅದು, ನನಗೆ 56 ವರ್ಷ ಆದ್ರೂ ಅವರ ಸಾವು ಅರಗಿಸಿಕೊಳ್ಳೋಕೆ ಆಗ್ತಿಲ್ಲ. ಇದನ್ನೂ ಓದಿ:ಅಮ್ಮ-ಮಗನ ಬಾಂಧವ್ಯವೇ ಬೇರೆ ತರಹ ಇತ್ತು- ಶಿವರಾಜ್‌ಕುಮಾರ್
Advertisement
Advertisement
ಅಮ್ಮನಿಗೆ ಆಸ್ಪತ್ರೆ ಕಟ್ಟಿಸಬೇಕು ಅಂತ ಆಸೆಯಿತ್ತು. ಅಲ್ಲಿಯವರೆಗೂ ಬದುಕಿದ್ದಾರೆ. ನಾಲ್ಕು ಸಲ ಅಮ್ಮ ವಿನೋದ್ ಅಂತ ಹೇಳಿದ್ದಾರೆ. ನಾನು ಬರೋವಷ್ಟರಲ್ಲಿ ಅವರಿಲ್ಲ. ಅವರು ಅಲ್ಲಿ ಮಲ್ಕೊಂಡಿದ್ದಾರೆ. ಮತ್ತೆಂದೂ ಅವರನ್ನ ನೋಡೋಕೆ ಆಗಲ್ಲ. ಕಡೆಯದಾಗಿ ಅವರು ನನ್ನ ಹೆಸರು ಹೇಳಿದ್ದಾರೆ. ನಾನು ಇದ್ದಿದ್ರೆ ಅವರು ಹೋಗುತ್ತಿರಲಿಲ್ಲ. ಅಮ್ಮನ ಜೀವ ಉಳಿಯುತ್ತಿತ್ತು ಎಂದು ವಿನೋದ್ ರಾಜ್ ಭಾವುಕರಾಗಿದ್ದಾರೆ.
Advertisement
ನಾಳೆ (ಡಿ.9) ನೆಲಮಂಗಲದ ಅಂಬೇಡ್ಕರ್ ಮೈದಾನದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗುತ್ತಿದೆ. ದಯವಿಟ್ಟು ಸಾರ್ವಜನಿಕರು ಸಹಕರಿಸಿ. ಎಲ್ಲರಿಗೂ ಅವರ ಅಂತಿಮ ದರ್ಶನ ಸಿಗುವಂತೆ ವ್ಯವಸ್ಥೆ ಮಾಡುತ್ತೇವೆ ಎಂದಿದ್ದಾರೆ. ನೆಲಮಂಗಲ ಪೊಲೀಸರು ಹಾಗೂ ತಹಶಿಲ್ದಾರ್ ಅರುಂಧತಿ ನೇತೃತ್ವದಲ್ಲಿ ಮೈದಾನದಲ್ಲಿ ತಯಾರಿ ಮಾಡಲಾಗುತ್ತಿದೆ.